ಸೌಂದತ್ತಿ

ಭಕ್ತರನ್ನು ಮಕ್ಕಳಂತೆ ಕಾಪಾಡುತ್ತಾಳೆ ಯಲ್ಲಮ್ಮದೇವಿ: ವೈದ್ಯ

ಭಕ್ತರನ್ನು ಮಕ್ಕಳಂತೆ ಕಾಪಾಡುತ್ತಾಳೆ ಯಲ್ಲಮ್ಮದೇವಿ: ವೈದ್ಯ

ಉಗರಗೋಳ 22: ಏಳುಕೊಳ್ಳದ ನಾಡು ಶ್ರೀಯಲ್ಲಮ್ಮನ ಕ್ಷೇತ್ರ, ಕಾಮಧೇನು ಕಲ್ಪವೃಕ್ಷ ಇರುವಂತಾ ಪವಿತ್ರವಾದ ಪುಣ್ಯಕ್ಷೇತ್ರ. ಇಲ್ಲಿಗೆ ಬರುವಂತ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಬೇಡಿದವರಿಗೆ ಬೇಡಿದ್ದನ್ನೆ ನೀಡುವ ಮಾಹಾ ತಾಯಿಯ ಕ್ಷೇತ್ರ್ರವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಶುಕ್ರವಾರ ದಿ.22ರಂದು ಗಜಾನನ ಯುವಕ ಮಂಡಳಿ, ಯಲ್ಲಮ್ಮನ ಗುಡ್ಡ ಹಾಗೂ ವ್ಯಾಪಾರಸ್ಥರ ಉತ್ಸವ ಕಮೀಟಿಯವರು ಶಾಸಕ ವಿಶ್ವಾಸ ವೈದ್ಯ ಹಾಗೂ ನವಲಗುಂದ ಶಾಸಕ ಎಚ್ ಎನ್ ಕೋನರಡ್ಡಿ ಅವರ ಸನ್ಮಾನ ಸಮಾರಂಭದಲ್ಲಿ  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ತಾಯಿ ತನ್ನ ಮಕ್ಕಳನ್ನು ಹೇಗೆ ಸಂರಕ್ಷಣೆ ಮಾಡುತ್ತಾಳೇಯೋ ಹಾಗೆ ಯಲ್ಲಮ್ಮಾ ದೇವಿಯು ತನ್ನನ್ನು ನಂಬಿ ಬರುವಂತಾ ಭಕ್ತರನ್ನು ಕಾಪಾಡುತ್ತಾಳೆ ಎಂದ ಅವರು ಬರುವಂತ ಭಕ್ತರಿಗೆ ಸುಖ, ಶಾಂತಿ, ನೆಮ್ಮದಿ, ನೀಡಲಿ, ಉತ್ತಮ ಮಳೆಯಾಗಲಿ ಎಂದು ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದರು. 

ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ, ಕಾಂಗ್ರೇಸ್ ತಾಲೂಕಾ ಅಧ್ಯಕ್ಷ ಮಲ್ಲು ಜಕಾತಿ, ಪಂಡಿತ ಯಡೂರಯ್ಯ ಹಾಗೂ ಗಜಾನನ ಸಂಘದ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಮತ್ತು ಭಕ್ತರು ಇದ್ದರು. 


ಸುದ್ದಿ ಓದಿ