ರಾಣೆಬೆನ್ನೂರ

ಗೌರಿಶಂಕರ ದೇವಸ್ಥಾನ ಆವರಣದ ಮೇಲ್ಛಾವಣೆ ನಿರ್ಮಾಣ ಕಾಮಗಾರಿ ಪೂಜೆ

ಗೌರಿಶಂಕರ ದೇವಸ್ಥಾನ ಆವರಣದ ಮೇಲ್ಛಾವಣೆ ನಿರ್ಮಾಣ ಕಾಮಗಾರಿ ಪೂಜೆ

ರಾಣಿಬೆನ್ನೂರ 26:  ದೇವಸ್ಥಾನಗಳು ಶ್ರದ್ಧೆ ಭಕ್ತಿಯ ಪ್ರತೀಕವಾಗಿ ಜನರ ನೆಮ್ಮದಿಯ ಕೇಂದ್ರ ಸ್ಥಾನಗಳಾಗಿವೆ. ಅವುಗಳ ಪುನರುಜ್ಜೀವನಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಇಲ್ಲಿಯ ಗೌರಿಶಂಕರ ನಗರದ ಗೌರಿಶಂಕರ ದೇವಸ್ಥಾನದಲ್ಲಿ ಶುಕ್ರವಾರ ಆವರಣದ ಮೇಲ್ಛಾವಣೆ ನಿರ್ಮಾಣ ಕಾಮಗಾರಿಯ ಪೂಜೆ ನೆರವೇರಿಸಿ ಅವರು ಮಾತನಾಡಿದರು, ಎಲ್ಲ ಕಡೆಯೂ ದೇವರಿದ್ದಾನೆ. ಆದರೇ, ಅದರ ಅನುಭವ ಪಡೆಯುವ ಕಾರ್ಯ ನಮ್ಮಿಂದಾಗಬೇಕು. ಇಂತಹ ಭಕ್ತಿ ಸ್ವರೂಪದ ದೇವಾಲಯಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ದಾನಿಗಳು ಹಾಗೂ ಸ್ಥಳೀಯರ ಸಹಕಾರದಿಂದ ದೇವಸ್ಥಾನ ಅಭಿವೃದ್ಧಿ ಹೊಂದಿರುವುದು ಶ್ಲಾಘನೀಯ ಎಂದರು. 

ನಗರಸಭೆ ಸದಸ್ಯ ಹನುಮಂತಪ್ಪ ಹೆದ್ದೇರಿ, ಸಂಕಪ್ಪ ಮಾರನಾಳ, ದೇವಸ್ಥಾನದ ಸಮಿತಿ ಅಧ್ಯಕ್ಷ ಜಿ.ಕೆ.ಗೌಡರ, ಉಪಾಧ್ಯಕ್ಷ ಓ.ಎಪ್‌.ದ್ಯಾವನಗೌಡರ, ಕಾರ್ಯದರ್ಶಿ ಅಶೋಕ ದುರ್ಗದಶೀಮಿ, ಆರ್‌.ಕೆ.ಕುಡಪಲಿ, ಡಿ.ಬಿ.ಬೇಲೂರ. ಎಸ್‌.ಎಸ್‌.ಹೂಲಿ, ವ್ಹಿ.ಎನ್‌.ಶಾಂತನವರ, ಕೆ.ಬಿ.ಪುಟ್ಟಪ್ಪನವರ, ಆರ್‌.ಬಿ.ಹರಳಹಳ್ಳಿ, ಪಿ.ಹೆಚ್‌.ಬಣಕಾರ, ಸಿ.ವ್ಹಿ.ಪಾಟೀಲ, ಪ್ರಮೀಳಾ ನಾಡಿಗೇರ, ಕಮಲಮ್ಮ ಬೆಳವಿಗಿ, ಕೆ.ಎಸ್‌.ಅಂಗಡಿ, ರುದ್ರಗೌಡ ಪಾಟೀಲ, ಆರ್ಚಕ ಶರಣಬಸಯ್ಯ ಹಿರೇಮಠ, ರಾಜು ಬಾಸ್ಕಾರ ಸೇರಿದಂತೆ ಮತ್ತಿತರು ಇದ್ದರು. 


ಸುದ್ದಿ ಓದಿ