ಕಂಪ್ಲಿ

ಗ್ರಾಮದಲ್ಲಿ ತಯಾರಾಗುವ ಕುಡಿಯುವ ನೀರಿನಲ್ಲಿ ಹುಳು : ಅವಧಿ ಮೀರಿದ ಕೂಲ್‌ಡ್ರಿಂಕ್ಸ್‌

ಗ್ರಾಮದಲ್ಲಿ ತಯಾರಾಗುವ ಕುಡಿಯುವ ನೀರಿನಲ್ಲಿ ಹುಳು : ಅವಧಿ ಮೀರಿದ ಕೂಲ್‌ಡ್ರಿಂಕ್ಸ್‌

ಲೋಕದರ್ಶನ ವರದಿ 

ಕಂಪ್ಲಿ 31 :  ಎಮ್ಮಿಗನೂರು ಗ್ರಾಮದಲ್ಲಿ ತಯಾರಾಗುವ ಕುಡಿಯುವ ನೀರಿನ ಬಾಟಲ್ ಸರಬರಾಜಿನಲ್ಲಿ ಹುಳುಗಳನ್ನು ಒಳಗೊಂಡಿರುವ ಕುಡಿವ ನೀರಿನ ಬಾಟಲ್, ಅವಧಿ ಮೀರಿದ ಕೂಲ್‌ಡ್ರಿಂಕ್ಸ್‌ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿ.ವೀರೇಶ್ ಆಗ್ರಹಿಸಿದರು.   

ತಾಲೂಕಿನ ಎಮ್ಮಿಗನೂರು ಗ್ರಾಮದ ರೈತ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ರೈತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಬಾಟಲ್‌ಗಳನ್ನು ತಯಾರು ಮಾಡುತ್ತಿದ್ದು, ಇಲ್ಲಿನ ಅಸ್ವಚ್ಚತೆ ಹಾಗೂ ಹುಳು ತುಂಬಿದ ನೀರನ್ನು ಬಾಟಲಿನಲ್ಲಿ ತುಂಬಿ ಮಾರಾಟ ಮಾಡುವ ಮೂಲಕ ಜನರಿಗೆ ನೀರು ಕುಡಿಸಿ, ಆರೋಗ್ಯದ ಮೇಲೆ ದುಶ್‌ಪರಿಣಾಮ ಬೀರುವಂತೆ ಮಾಡಿದ್ದಾರೆ. ಕಳಪೆ ಗುಣಮಟ್ಟದ ಕೂಲ್ಲಿಂಕ್ಸ್‌ ಕುಡಿದ ಬಾಲಕನೊಬ್ಬ ಕೆಲ ದಿನಗಳ ಹಿಂದೆ ಅಸ್ವಸ್ಥನಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಿದ್ದಾರೆ.  

ಜನರ ಆರೋಗ್ಯ ಕಾಪಾಡುವಲ್ಲಿ ಗ್ರಾಮಾಡಳಿತ, ತಾಲೂಕು ಆಡಳಿತ ನಿಗಾವಹಿಸಬೇಕು. ಕಳಪೆ ಗುಣಮಟ್ಟದ ನಕಲಿ ನೀರಿನ ಬಾಟಲ್, ಕೂಲ್ಲಿಂಕ್ಸ್‌, ಕಳಪೆ ಅಂಗಡಿಯಲ್ಲಿ ಕಳಪೆ ಗೊಬ್ಬರ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪರವಾನಗಿ ನೀಡಿದ್ದಲ್ಲಿ ಪರೀಶೀಲಿಸಿ ರದ್ದುಪಡಿಸಿ ತಪ್ಪಿತಸ್ಥರನ್ನು ಬಂಧಿಸಬೇಕು.  

ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಏ.7ರಂದು ಗ್ರಾಮದಿಂದ ಡಿಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಎಸ್ಟಿಎಂಸಿ ಅಧ್ಯಕ್ಷ ಬಿ.ರಾಜು, ಪ್ರಮುಖರಾದ ಬಿ.ಸದಾಶಿವಪ್ಪ, ಸಿ.ಬಾಷಸಾಬ್, ಬೂದಗುಂಪಿ ರಾಜಸಾಬ್ ಎನ್‌ಖಾಸಿಂಸಾಬ್  ಗುಂಡೆಕಲ್ಲು ಬಸವರಾಜ ಎಸ್‌.ರಾಮಪ್ಪ ಸೇರಿ ಅನೇಕರಿದ್ದರು. 



ಸುದ್ದಿ ಓದಿ