ಬೈಲಹೊಂಗಲ

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರದೆ ಎತ್ತಿದೆ ಕೈ

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರದೆ ಎತ್ತಿದೆ ಕೈ
ನಯಾನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ

ಬೈಲಹೊಂಗಲ09: ಕುಟುಂಬಗಳನ್ನು ಆರ್ಥಿಕವಾಗಿ ಬಲಶಾಲಿ ಮಾಡುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು ಎಂದು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ನಲವಡೆ ಹೇಳಿದರು.

ತಾಲೂಕಿನ  ನಯಾನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನಿಮಿತ್ಯ ನಡೆದ  ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಾಗಿದ್ದು ಕುಟುಂಬ ನಿರ್ವಹಣೆಯಲ್ಲಿ ಅವರದು ಎತ್ತಿದೆ ಕೈಯಾಗಿದ್ದು, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯ ಶ್ರಮ ಇರುತ್ತದೆ ಎಂದರು. 

ಹಿರಿಯ ಶಿಕ್ಷಕ ವೈ.ಡಿ ಗಾಣಗಿ ಮಾತನಾಡಿ ಕಲಿಕೆಯಲ್ಲಿ ಹಿಂದುಳಿದ ಎಳನೇಯ ತರಗತಿಯ 25 ಮಕ್ಕಳಿಗೆ ಕಲಿಕೆಯಲ್ಲಿ ಹಿಂದೆ ಉಳಿಯಬಾರದು ಎಂಬ ಸದುದ್ದೇಶದಿಂದ 60 ರೂ ಮುಖಬೆಲೆಯ ಗಣೇಶ ಅಂಕಲಿಪಿ ವಿತರಣೆ ಮಾಡಿದ ಎಸ್.ಡಿ.ಎಂ.ಸಿ ಆಧ್ಯಕ್ಷ ನಾರಾಯಣ ನಲವಡೆ ಇವರು ಇತರಿರಿಗೆ ಮಾದರಿಯಾದದ್ದು, ಅದರ ಸದುಪಯೋಗವನ್ನು ಪಡೆದುಕೊಂಡು ಮಕ್ಕಳು ಮುಂದೆ ಬಂದು ಸಾಧನೆ ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.

ಮುಖ್ಯೋಪಾಧ್ಯಾಯ ಗಣಪತಿ ಬಾಗಲೆ, ಹಿರಿಯ ಶಿಕ್ಷಕಿ ಪಿ.ಬಿ ಮಂತ್ರೋಪಕರ, ಜಿ.ಟಿ ದೊಡವಾಡ, ವಿ.ಪಿ ಹಿರೇಮಠ, ಸಿ.ಡಿ ಕುಲಕರ್ಣಿ, ಜಿ.ಬಿ ಪಟ್ಟಣಶಟ್ಟಿ, ಮಿನಾಕ್ಷಿ ಹರಿಜನ, ಡಿ.ಬಿ ಕುಂಕೂರ, ಜೆ.ಬಿ ಕಲಾಜ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ