ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ
ಲೋಕದರ್ಶನ ವರದಿ
ರಾಣೀಬೆನ್ನೂರ 04: ವಿಶ್ವದಾದ್ಯಂತ ಹಲವು ದಶಕಗಳಿಂದ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸ್ವಯಂ ಸೇವಾ ವಲಯವು ಸಂಘಟಿತ ಧ್ವನಿಯಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ಭಾಗವಹಿಸುವಿಕೆಯೊಂದಿಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸುತ್ತಿವೆ ಎಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಚ್. ಎಫ್.ಅಕ್ಕಿ ಹೇಳಿದರು.
ಅವರು ಸ್ಥಳೀಯ ಕರ್ನಾಟಕ ನಗರ ಮತ್ತು ಗ್ರಾಮಾಭ್ಯದಯ ಸ್ವಯಂ ಸೇವಾ ಸಂಘಗಳ ಕಚೇರಿಯಲ್ಲಿ ನಡೆದ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದಲ್ಲಿ ಕೂಡ ಹಕ್ಕು ಆಧಾರಿತ ಮತ್ತು ಸೇವಾ ಮನೋಭಾವವುಳ್ಳ ಸಂಸ್ಥೆಗಳು ಪ್ರಜಾಪ್ರಭುತ್ವ ಮತ್ತು ಸಮುದಾಯ ಭಾಗವಿಹಿಸುವಿಕೆಯನ್ನು ಪುನರುಚ್ಛರಿಸುತ್ತ ಸುಸ್ಥಿರ ಅಭಿವೃದ್ಧಿ, ಕೃಷಿ, ಗ್ರಾಮೀಣಾಭಿವೃದ್ಧಿ, ನೈರ್ಮಲ್ಯ ಸುಧಾರಣೆ, ಆರೋಗ್ಯ, ಶಿಕ್ಷಣ, ಕಾನೂನು ಮತ್ತು ಹಕ್ಕುಗಳ ತಿಳುವಳಿಕೆ, ಮಹಿಳಾ ಸಬಲೀಕರಣ, ಪೌಷ್ಟಿಕ ಆಹಾರ, ಜಲಸಂವರ್ಧನೆ, ಪರಿಸರ ಸಂರಕ್ಷಣೆ, ದಲಿತರು, ಕಾರ್ಮಿಕರು, ಆದಿವಾಸಿಗಳು, ಬುಡಕಟ್ಟುಜನರು, ನಗರ ವಂಚಿತರು, ವಿಕಲಚೇತನರು ಹೀಗೆ ಸೌಲಭ್ಯ ಮತ್ತು ಹಕ್ಕುಗಳಿಂದ ವಂಚಿತರಾಗಿರುವ ಸಮುದಾಯದಜನರಜೀವನಗುಣಮಟ್ಟವನ್ನು ಸುಧಾರಿಸಿಅಗತ್ಯ ಸೇವೆಗಳನ್ನು ನೀಡುತ್ತಿರುವಲ್ಲಿ ಸ್ವಯಂ ಸೇವಾ ಸಂಸ್ಥೆ ಮತ್ತು ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ಒಕ್ಕೂಟದ ಕಾರ್ಯದರ್ಶಿ ಎಸ್. ಹೆಚ್. ಮಜೀದ ಅವರು ಮಾತನಾಡಿ, ವಿವಿಧ ಸ್ತರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸ್ವಯಂ ಸೇವಾ, ನಾಗರಿಕ ಸಮಾಜ ಸಂಸ್ಥೆಗಳು ಮತ್ತುಅದರ ಹಿಂದೆಇರುವಕಾರ್ಯಕರ್ತರನ್ನು ಹಾಗೂ ಸ್ವಯಂ ಸೇವಕರನ್ನು ಗುರುತಿಸಿಗೌರವಿಸಲು, ಸ್ವಯಂ ಸೇವಾ ವಲಯದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು ಮತ್ತುಜನಸಾಮಾನ್ಯ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಹೆಚ್ಚಿನ ಸಹಯೋಗವನ್ನುಉತ್ತೇಜಿಸಲು ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಂತರಾಷ್ಟಿಯವಾಗಿ ಮೊಟ್ಟ ಮೊದಲ ಬಾರಿಗೆ ಫೆಬ್ರವರಿ27,2014ರಲ್ಲಿ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯನ್ನು ಆಚರಿಸಲಾಯಿತು, ಈ ದಿನವನ್ನು ವಷಂರ್್ರತಿ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನವೆಂದು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ನಗರ ಮತ್ತುಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್-ಕ) ರಾಜ್ಯ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆಯಾಗಿ ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದೆ, ಕಾರ್ಯಕ್ರಮದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯ ಏಕಾಂತ್ ಮುದಿಗೌಡ್ರು, ಗುರುರಾಜ ಹಂಸಿ ಹಾಗೂ ಕೆ.ಎಸ್. ನಾಗರಾಜ ಮತ್ತಿತರ ಗಣ್ಯರು ಉಪಸ್ಥಿತರಿದ್ದರು,
ಗೀತಾ ಪಾಟೀಲ್ ಸಂಗಡಿಗರು ಪ್ರಾರ್ಥಿಸಿದರು. ಜಿ.ಪಿ. ಸಾಲಿಮಠ ಸ್ವಾಗತಿಸಿದರು. ಪರಶುರಾಮ ಕೆ ನಿರೂಪಿಸಿದರು. ಸುಧೀರ ಈ.ಟಿ ವಂದಿಸಿದರು.