ಹೊಸಪೇಟೆ

ವಿಜಯನಗರ: ವಿಶ್ವರೇಬೀಸ್ ದಿನಾಚರಣೆ ಜಾಗೃತಿ ಜಾಥಾ

ವಿಜಯನಗರ: ವಿಶ್ವರೇಬೀಸ್ ದಿನಾಚರಣೆ ಜಾಗೃತಿ ಜಾಥಾ

ಹೊಸಪೇಟೆ (ವಿಜಯನಗರ) 28: ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ (ಹಳೇ ಆಸ್ಪತ್ರೆ ಆವರಣ)ದಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಚಾಲನೆ ನೀಡಿದರು. 

ವಿಜಯನಗರ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಷಣ್ಮುಖ ನಾಯಕ ಅವರು ಮಾತನಾಡಿ ಒಂದು ಆರೋಗ್ಯ ಶೂನ್ಯ ಮರಣ ಎಂಬ ಧ್ಯೇಯ ವಾಕ್ಯದೊಂದಿಗೆ 2030ರ ವೇಳೆಗೆ ರೇಬೀಸ್ ಪ್ರಕರಣದಿಂದ ಮರಣ ಹೊಂದುವವರ ಸಂಖ್ಯೆಯನ್ನು ಶೂನ್ಯ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು. 

ಪ್ರಪಂಚದಾದ್ಯಂತ ಹುಚ್ಚು ನಾಯಿ ಕಡಿತದಿಂದ ಸುಮಾರು 50ರಿಂದ 55ಸಾವಿರ ಜನರು ಮರಣ ಹೊಂದುತ್ತಿದ್ದು, ರೇಬೀಸ್ ಖಾಯಿಲೆ ಒಂದು ಸರಿ ಬಂದರೆ ಮರಣ ಬಹುತೇಕ ಖಚಿತವಿದ್ದಂತೆ ಎಂದು ಹೇಳಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಷಣ್ಮುಖ ನಾಯಕ ಅವರು ರೇಬೀಸ್ ಖಾಯಿಲೆಯನ್ನು ಸರಿಯಾದ ಸಮಯಕ್ಕೆ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ತಡೆಗಟ್ಟಬಹುದು ಎಂದು ಅವರು ತಿಳಿಸಿದರು.  

*ರೇಬೀಸ್ ಜಾಗೃತಿ ಜಾಥಾ: ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ(ಹಳೇ ಆಸ್ಪತ್ರೆ ಆವರಣ)ದಿಂದ ಆರಂಭಗೊಂಡ ಜಾಥವು ಗಾಂಧಿ ಚೌಕ್‌ದಿಂದ ಹಾದು ಹೋಗಿ ಪುನೀತ್ ಸರ್ಕಲ್ ಸುತ್ತುವರೆದು ನಗರಸಭೆ ಕಾರ್ಯಾಲಯದ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣಕ್ಕೆ ಬಂದು ಕೊನೆಗೊಂಡಿತು. 

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷ ಬಿ.ಎಲ್‌.ಆನಂದ್, ಆರೋಗ್ಯ ನೀರೀಕ್ಷಾಣಾಧಿಕಾರಿ ಧರ್ಮನಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ ನಾಯ್ಕ್‌, ಜಿಲ್ಲಾ ಮೆಲೇರಿಯಾ ಅಧಿಕಾರಿ ಡಾ.ಕಮಲಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಟಿ.ಎಂ.ಎ.ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ