ವಿಶ್ವ ಜನಸಂಖ್ಯಾ ದಿನಾಚರಣೆ 2018 ಬೆಳಗಾವಿ ತಾಲೂಕಾ ಮಟ್ಟದ ಉದ್ಘಾಟನಾ ಸಮಾರಂಭ
ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಬೆಳಗಾವಿ ವಾತರ್ಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ,ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಬೆಳಗಾವಿ ಹಾಗೂ ಗ್ರಾಮ ಪಂಚಾಯತ ಮುತಗಾ ಇವರ ಸಹಯೋಗದಲ್ಲಿ ಬೆಳಗಾವಿ ತಾಲೂಕಾ ಮಟ್ಟದ ಉದ್ಘಾಟನಾ ಸಮಾರಂಭವು ವಿಶಾಲ ಮಂಗಲ ಕಾರ್ಯಲಯ ಮುತಗಾ ತಾಲೂಕ ಬೆಳಗಾವಿಯಲ್ಲಿ ನೆರವೇರಿತು.
ಸಮಾರಂಭದ ಉದ್ಘಾಟನೆಯನ್ನು ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ಮಾನ್ಯ ಶಾಸಕರು ಬೆಳಗಾವಿ ಗ್ರಾಮೀಣ ಇವರು ನೆರವೇರಿಸಿ ವಿಶ್ವ ಆರೋಗ್ಯ ದಿನಾಚರಣೆ ಒಂದು ಮಹತ್ವದ ದಿನಾಚರಣೆಯಾಗಿದ್ದು ಇದು ನಿರಂತರವಾಗಿರಬೇಕು. ಗಂಡು ಹೆಣ್ಣು ಎಂಬ ಬೇದವಿಲ್ಲದೆ ಒಂದು ಅಥವಾ ಎರಡು ಮಕ್ಕಳನ್ನು ಹೊಂದುವಂತೆ ಸಾರ್ವಜನಿಕರಲ್ಲಿ ವಿನಂತಿಸಿ ಹೆಣ್ಣಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ ಹಲವಾರು ಉದಾರಣೆಗಳನ್ನು ನೀಡಿದರು.
ತಾಲೂಕಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಉತ್ಕೃಷ್ಠ ಸೇವೆ ಸಲ್ಲಿಸಿದ ಆಶಾ ಕಾರ್ಯಕತರ್ೆಯರಾದ ರೂಪಾ ಎಸ್ ಕಲಕಾಂಬಕರ್ ಪ್ರಾ.ಆ.ಕೇಂದ್ರ ಮುತಗಾ ಯಲ್ಲವ್ವಾ ಕರೆಪ್ಪಾ ನಾಯ್ಕ ಪ್ರಾ.ಆ.ಕೇಂದ್ರ ಕಡೋಲಿ ಕಲ್ಪನಾ ಘಾಟಿಗಸ್ತಿ ಪ್ರಾ.ಆ.ಕೇದ್ರ ಬೆಳಗುಂದಿ ಸುನಿತಾ ಪಾಟೀಲ ನಗರ ಪ್ರಾ.ಆ.ಕೇಂದ್ರ ಖಾಸಬಾಗ ಹಾಗೂ ಆರೋಗ್ಯ ಕಾರ್ಯಕತರ್ೆಯರಾದ ಎಸ್.ಎಸ್.ತಿಪ್ಪಣ್ಣವರ ಪ್ರಾ.ಆ.ಕೇಂದ್ರ ಮುತಗಾ ಸುಧಾ ಕಿಳಿಪುಟ್ಟಿ ಪ್ರಾ.ಆ.ಕೇಂದ್ರ ಯಳ್ಳೂರ ಎಸ್.ಆರ್ ಸುಳೆಗೆ ಪಾಟೀಲ ಪ್ರಾ.ಆ.ಕೇಂದ್ರ ಉಚಗಾಂವ ಎಸ್.ಬಿ.ಮೇಳೆದ ಸಮುದಾಯ ಆರೋಗ್ಯ ಕೇಂದ್ರ ಹೀರೆಬಾಗೇವಾಡಿ ಭಾರತಿ ದುರಗೂಡೆ ಸಾ.ಸಿಂದೊಳ್ಳಿ ಹಾಗೂ ಡಾ.ಎಮ್.ವ್ಹಿ ಕಿವುಡಸಣ್ಣವರ ವೈದ್ಯಾಧಿಕಾರಿಗಳು ಪ್ರಾ.ಆ.ಕೇಂದ್ರ ಮುತಗಾ ಇವರಿಗೆ ಅಭಿನಂದನಾ ಪತ್ರ ನೀಡಿ ಮಾನ್ಯ ಶಸಕರು ಸತ್ಕರಿಸಿದರು.
ಭಾರತಿ ದುರಗೂಡೆ ಕುಟುಂಬ ಕಲ್ಯಾಣ ಫಲಾನುಭವಿ ತನ್ನ ಅನುಬವಗಳನ್ನು ಹಂಚಿಕೊಂಡಳು.
ಅತಿಥಿಗಳಾದಶಂಕರಗೌಡ ಪಾಟೀಲ ಅಧ್ಯಕ್ಷರು ತಾಲೂಕ ಪಂಚಾಯತ ಬೆಳಗಾವಿ, ಕಾಸಿನಾಥ ದರಮೋಜಿ ತಾಲೂಕ ಪಂಚಾಯತ ಸದಸ್ಯರು ಸಾಂಬ್ರಾ, ಡಾ.ಸಾವಿತ್ರಿ ಬೆಂಡಿಗೇರಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ವೇದಿಕೆ ಮೇಲೆ ಉಪಸ್ಥಿತರಿದ್ದರು
ಮಂಗಲಾ ಕಂಪಿ ಗ್ರಾಮ ಪಂಚಾಯತ ಅಧ್ಯಕ್ಷರು ಮುತಗಾ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಡಾ.ಸಂಜೀವ ನಾಂದ್ರೆ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿದರು. ಅಂಗನವಾಡಿ ಕಾರ್ಯಕತರ್ೆ ಎಸ್.ಎಸ್.ತಿಪ್ಪಣ್ಣ್ನವರ ಪ್ರಾಥರ್ಿಸಿದರು. ಪ್ರಾಥಮಿಕ ಶಾಲೆ ವಿದ್ಯಾಥರ್ಿಗಳು ನಾಡಗೀತೆ ಹಾಡಿದರು. .ಸಿ,ಜಿ ಅಗ್ನಿಹೋತ್ರಿ, ಹಿರಿಯ ಆರೋಗ್ಯ ಸಹಾಯಕರು, ಕಾರ್ಯಕ್ರಮ ನಿರೂಪಿಸಿದರು. ಬಿ.ಪಿ ಯಲಿಗಾರ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಂದಿಸಿದರು. ವಿ.ಎಲ್ ಪಾತಲಿ ಹಾಗೂ ಶ್ರೀಮತಿ ಡಿ.ಟಿ ಕುಂದಗೋಳ ಕಾರ್ಯಕ್ರಮ ಸಂಘಟಿಸಿದರು.