ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ವಿಜಯಪುರ18: ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾನಸಿಕ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವಿಜಯಪುರ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಹಾಗೂ ಶಿಖಾರ ಕಾನೆ ಸ್ಲಂ ಅಭಿವೃದ್ಧಿ ಸಮಿತಿ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳು ಮತ್ತು ವಯೋವೃದ್ದರ ಸಂಘಗಳು ಕಾರ್ಮಿಕ ಸಂಘಗಳ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮಾಡಲಾಯಿತು. ಈ ಕಾರ್ಯಕ್ರಮವು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಪ್ರಾಸ್ಥಾವಿಕ ಮಾತುಗಳನ್ನು ಎಮ್. ಆರ್. ಬಾಗವಾನ ಆರೋಗ್ಯ ಶಿಕ್ಷಣ ಅಧಿಕಾರಿಗಳು ಮಾತನಾಡಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಮಂಜುನಾಥ ಮಸಳಿ ಇವರು ಮಾತನಾಡುತ್ತಾ, ಮಾನಸಿಕ ಆರೋಗ್ಯ ದಿನಾಚರಣೆ ವಿಶ್ವಾದ್ಯಂತ ಆಚರಿಸುತ್ತಾರೆ. ಕಾರಣ ಪ್ರತಿಯೋಬ್ಬ ವ್ಯಕ್ತಿಯು ಮಾನಸಿಕ ಕಿನ್ನತೆಗೆ ಒಳಗಾಗುತ್ತಾರೆ. ಕೆಲವರು ತಮ್ಮ ಸಮಸ್ಯೆಗಳು ಬೇರೆಯವರ ಹತ್ತಿರ ಹೇಳುತ್ತಾರೆ, ಕೆಲವರು ಹೇಳದೆ ಮನಸ್ಸಿನಲ್ಲಿ ಕೊರಗುತ್ತಾರೆ. ಇನ್ನೂ ಕೆಲವರು ಮೂಡ ನಂಬಿಕೆಗೆ ಒಳಗಾಗಿ ಚೀಟಿ, ಚಿಪಾಟಿ ಹೋಮ, ಹವನಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಸರ್ಕಾರ ನಿಮಗಾಗಿ ಸರ್ಕಾರಿ ಆಸ್ಪತ್ರೆಗಳು ಇವೆ. ಅಂತಹ ಸಮಸ್ಯೆಗಳಾದಲ್ಲಿ ಬನ್ನಿ ವೈಧ್ಯರನ್ನು ಬೇಟಿಯಾಗಿ ತಮ್ಮ ಸಮಸ್ಯಗೆ ಪರಿಹಾರಕಂಡುಕೊಳ್ಳಿ. ತಪಾಸಣೆ, ಔಷಧಿ, ಉಪಚಾರ ಉಚಿತವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷ ಬ್ರದರ ಅರುಣ ಸಹನಿರ್ದೇಶಕ ರು ಅನೌಪವಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಇವರು ಮಾತನಾಡುತ್ತಾ ಡಾ. ಮಂಜುನಾಥ ರವರು ತಮಗೆ ಒಳ್ಳೆಯ ರೀತಿಯಲ್ಲಿ ಮನ ಮುಟ್ಟುವಹಾಗೆ ಮಾನಸಿಕ ಕಿನ್ನತೆಗೆ ಹೇಗೆ ಒಳಗಾಗುತ್ತಿರಿ ಅದಕ್ಕೆ ಪರಿಹಾರ ಏನು ಎಂದು ತಿಳಿಸಿದ್ದಾರೆ. ಹಾಗೆಯೇ ಮನುಷ್ಯನಿಗೆ ಕಷ್ಟಗಳು ತೊಂದರೆಗಳು ಬರುತ್ತಾ ಇರುತ್ತವೆ, ಆದರೆ ನಾವುಗಳು ಅಂತಹ ಸಮಸ್ಯೆ ಎದುರಾದಾಗ ನಮ್ಮ ಕಷ್ಟಗಳು ಆತ್ಮೀಯರ ಹತ್ತಿರ ಹೇಳುತ್ತಾ ಇರಬೇಕು. ಸದಾ ನಗು ನಗುತ್ತಾ ಇರಬೇಕು ದಿನನಿತ್ಯ ಒಳ್ಳೆಯದನ್ನೆ ಯೋಚಿಸಬೇಕು ಕೆಟ್ಟದಾಗಿ ಯೋಚನೆ ಮಾಡಬಾರದು ಇವುಗಳನ್ನು ಪ್ರತಿದಿನ ಮಾಡುತ್ತಾ ಹೋದರೆ ಮಾನಸಿಕ ಕಿನ್ನತೆಗೆ ಒಳಗಾಗುವುದಿಲ್ಲ ಎಂದು ಹೇಳಿ ತಮ್ಮ ಮಾತನ್ನು ಕೊನೆಗೂಳಿಸಿದರು. ವಿರೇಶ ಮುದ್ದೇಬಿಹಾಳ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಸ್ಲಂ ಸಮಿತಿಯ ಪುಪ್ಪಾ ನೇಗಿನಾಳ, ಅರುಣಾ ಬೂದಿಹಾಳ, ಶಾಂತಾಬಾಯಿ ದಳವಾಯಿ, ದುಂಡಪ್ಪ ಸಕ್ರೀ, ಮಹಿಳಾ ಸ್ವ-ಸಹಾಯ ಸಂಘದ ಶಕುಂತಲಾ ಸುಲಾಖೆ, ಯಲ್ಲವ್ವ ಸೋಲಾಪುರ, ಭಾರತಿ ನಂದ್ಯಾಳ, ಜಕ್ಕವ್ವ ಹೊನಕಟ್ಟಿ, ರೂಪಾ ನಂದ್ಯಾಳ, ಸುಮಿತ್ರಾ ಪಡತಾರೆ, ಕಸ್ತೂರಿ ಬಂಟನೂರ, ನಿರ್ಮಲಾ ಹೊಗಾರ, ಮುನೇರಾ ಇಂಡಿಕರ, ಶಾಂತಾ ಬೈಚಬಾಳ ಕಾರ್ಯಕ್ರಮದಲ್ಲಿ ಪಾಲಗೊಂಡಿದ್ದರು. ಕಾರ್ಯಕ್ರಮಕ್ಕೆ ದಸ್ತಗೀರ ದೇವರಗೋಳ ಸ್ವಾಗತಿಸಿದರು ರವಿ ದೊಡಮನಿ ನಿರೂಪಿಸಿದರು, ರವಿ ಕಟ್ಟಿಮನಿ ವಂದಿಸಿದರು