ರಾಣೆಬೆನ್ನೂರ

ರಾಣೇಬೆನ್ನೂರು ನೀಡ್ಸ್‌, ಸಂಸ್ಥೆ ಕೇಂದ್ರ ಕಚೇರಿಯಲ್ಲಿ ವಿಶ್ವ ಜೀವಜಲ ದಿನಾಚರಣೆ

ರಾಣೇಬೆನ್ನೂರು ನೀಡ್ಸ್‌, ಸಂಸ್ಥೆ ಕೇಂದ್ರ ಕಚೇರಿಯಲ್ಲಿ ವಿಶ್ವ ಜೀವಜಲ ದಿನಾಚರಣೆ


ಲೋಕದರ್ಶನ ವರದಿ 

ರಾಣೇಬೆನ್ನೂರು 24:  ನೀರು ಜೀವಜಲ, ಭೂಮಂಡಲ ದಲ್ಲಿರುವ ಪ್ರತಿಯೊಂದು ಜೀವರಾಶಿಗಳಿಗೆ ನೀರು ಅಮೃತವಿದ್ದಂತೆ, ಮೂರು ಪಾಲು ನೀರುಒಂದು ಪಾಲು ಭೂಮಿ ಇದ್ದರೂ,ಮುಂದಿನ ದಿನಗಳಲ್ಲಿ ನೀರಿಗಾಗಿ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ ಎಂದು ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಎಚ್‌.ಎಫ್‌.ಅಕ್ಕಿ ಹೇಳಿದರು.  

      ಅವರು ಇಲ್ಲಿನ ಸಂಗಮ್ ವೃತ್ತದ  ಕೇಂದ್ರ ಕಛೇರಿಯಲ್ಲಿ ನಡೆದ ವಿಶ್ವ ನೀರು ಜೀವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

   ನಮ್ಮ ಗ್ರಾಮಗಳ ಅಥವಾ ನಮ್ಮ ಸುತ್ತಲಿನ ಜಲ ಸಂಪನ್ನೂಲಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು.ಮಳೆಯಿಂದ ಲಭ್ಯವಾಗುವಾಗುವ ನೀರನ್ನು ಭೂಮಿಯಲ್ಲಿ ಹಲವಾರು ರೀತಿಯಲ್ಲಿ ಸಂರಕ್ಷಣೆ ಮಾಡಿ ಭೂಮಿಯಲ್ಲಿ ಇಂಗಿಸಬಹುದಾಗಿದೆ ಎಂದ ಅವರು, ಇಂಗು-ಗುಂಡಿಗಳ ಮೂಲಕ, ಹೊಲದಲ್ಲಿ ಬದುಗಳ ನಿರ್ಮಾಣದಿಂದ, ತಡೆ ಆಣೆಗಳ ನಿರ್ಮಾಣದಿಂದ, ಕೃಷಿ ಹೊಂಡಗಳು, ಕೆರೆ ಕಟ್ಟೆಗಳ ಮೂಲಕ ನೀರನ್ನು ಭೂಮಿಯಲ್ಲಿ ಜಲ ಮರುಪೂರ್ಣ ಮಾಡಬಹುದು, ಒಂದು ಹನಿ ನೀರು ಕೂಡ ಅತ್ಯಮೂಲ್ಯವಾದದು ಆದ್ದರಿಂದ ನೀರನ್ನು ಇಂಗಿಸಿ ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕೆಂದು ಕರೆ ನೀಡಿದರು. 

    ವೇದಿಕೆಯಲ್ಲಿ ಸುರೇಶ ಕಮ್ಮಾರ, ಉಮೇಶ್ ಹೆಚ್, ಕರಿಬಸಪ್ಪ ಎಂ, ತಿಪ್ಪೇಶ ಕನ್ನಮ್ಮಳವರ, ಸುರೇಶ್ ಇ.ಟಿ. ಖಾಧರ್ ಪರಶುರಾಮ್ ಆರ್‌.ಕೆ ಸೇರಿದಂತೆ ಸಿಬ್ಬಂದಿಗಳು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ