ಶಿಗ್ಗಾವ್

ಲಯನ್ಸ್‌ ನವಭಾರತ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಲಯನ್ಸ್‌ ನವಭಾರತ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಶಿಗ್ಗಾವಿ 16 :  ತಾಲೂಕಿನ ಬಂಕಾಪೂರ ಲಯನ್ಸ್‌ ನವಭಾರತ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು, ಸಂಸ್ಥೆಯ ಅಧ್ಯಕ್ಷ ಡಾ.ಆರ್‌.ಎಸ್‌.ಅರಳೆಲೆಮಠ ಸಸಿ ನೆಡುವ ಮೂಲಕ ಚಾಲನೆ ನೀಡಿದರು. 

ನಂತರ ನಡೆದ ಸಭೆಯನ್ನುದ್ದೇಸಿಸಿ ಡಾ.ಎಮ್‌.ಎಮ್‌.ಬರ್ಚಿವಾಲೆ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯನ್ನು ಜನಸಾಮಾನ್ಯರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 5 ರಿಂದ, ಜೂನ್ ತಿಂಗಳಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಈ ಒಂದು ದಿನಾಚರಣೆಗೆ ವಿಶ್ವ ಸಂಸ್ಥೆ 1974 ರಲ್ಲಿ ಚಾಲನೆ ನೀಡಿ ಪರಿಸರದ ಉಳಿವಿಗಾಗಿ ದೇಶಾದ್ಯಂತ ಅಂದೋಲನ ಕೈಗೊಂಡಿದೆ ಎಂದು ಹೇಳಿದರು. 

ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಚ್ಛತೆ, ಪರಿಸರದ ಉಳಿವಿಗಾಗಿ ನಿಮ್ಮ ಮನೆ, ಹಿತ್ತಲಲ್ಲಿ ಒಂದೋಂದು ಸಸಿ ನೆಟ್ಟು ಪೋಷಿಸಬೇಕು. ನಮ್ಮ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಯ್ದುಕೋಂಡರೆ ಶುದ್ಧವಾದ ಆಮ್ಲಜನಕದಿಂದ ಆರೋಗ್ಯಯುತ ಜೀವನ ನಡೆಸಬಹುದಾಗಿದೆ. ಒಂದು ಮರ ಸಾವಿರಾರು ಜನರಿಗೆ ಬೇಕಾದ ಶುದ್ಧವಾದ ಆಮ್ಲಜನಕ ನೀಡುವ ಸಾಮರ್ಥ್ಯಹೋಂದಿದ್ದು, ಪರಿಸರದ ಉಳಿವಿಗಾಗಿ ಸರ್ವರು ಶ್ರಮಿಸುವ ಅವಸ್ಯಕತೆಯಿದೆ ಎಂದು ಹೇಳಿದರು. 

ರಾಜಶೇಖರ ಕೊಲ್ಲಾವರ, ಎಸ್‌.ಬಿ.ಆದವಾನಿಮಠ, ದಿವಾಕರ ವೇರ್ಣೇಕರ, ಮುಖ್ಯಶಿಕ್ಷಕಿ ಜಿ.ಎಸ್‌.ದೇಸಾಯಿ, ವಿ.ಎಲ್‌.ವಿಜಾಪುರ, ಎಂ.ಬಿ.ರಾಯಾಪುರ, ಜ್ಯೋತಿ ಕಟಗಿಮಠ, ತಾರಾ ಶಿಗ್ಗಾಂವ, ಮಾನಸಿ ಕಮ್ಮಾರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ