ಶಿಗ್ಗಾವ್

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ

ಶಿಗ್ಗಾವಿ : ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ. ಒಂದು ಕಾಲದಲ್ಲಿ ಯಾರು ಕೂಡ ಹಣ ನೀಡಿ ನೀರು ಕುಡಿಯುತ್ತಿರಲಿಲ್ಲ. ಉಚಿತವಾಗಿ ಶುದ್ಧಕುಡಿಯುವ ನೀರು ಎಲ್ಲೆಂದರಲ್ಲಿ ಸಿಗುತ್ತಿತ್ತು ಆದರೆ ಈಗ ನಾವು ಹಣ ನೀಡಿ ಶುದ್ಧ ನೀರನ್ನು ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿ ಬಾಲಕೃಷ್ಣ ಎಸ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ್ ಇಂಟರನ್ಯಾಷನಲ್ ಶಾಲೆ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಲಯ ದುಂಡಸಿ ಮತ್ತು ಶಾಲಾ ಆಡಳಿತ ಮಂಡಳಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮೃತ್ಯುಂಜಯ ಸೇವಾ ಸಂಸ್ಥೆ ಅಧ್ಯಕ್ಷ ಡಾ.ಮೃತ್ಯುಂಜಯ ತಿಲರ್ಾಪುರ ಮಾತನಾಡಿ, ಇಂದಿನ ಕಲುಷಿತ ವಾತಾವರಣದಲ್ಲಿ ಶುದ್ಧ ಗಾಳಿ, ನೀರಿನ ಅತ್ಯವಶ್ಯಕತೆ ಇದೆ.ಹೀಗಾಗಿ ಪ್ರತಿಯೊಬ್ಬರು ತಮ್ಮ ಮಧ್ಯೆ ನಡೆಯುವ, ಹುಟ್ಟು ಹಬ್ಬ, ನಾಮಕರಣ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಕನಿಷ್ಠ ಎರಡು ಗಿಡಗಳನ್ನು ನೇಡುವ ರೂಡಿ ಮಾಡಿಕೊಳ್ಳಿ ಇದರಿಂದ ಮುಂದಿನ ನಮ್ಮ ಪೀಳಿಗೆ ಈಗ ನಾವು ಬಾಟಲ್ ನೀರು ಕೊಳ್ಳುವಂತೆ ಅವರು ನಿತ್ಯ ಆಕ್ಸಿಜನ್ ಕೊಳ್ಳುವುದನ್ನು ತಪ್ಪಿಸೋಣ ಎಂದು ಕಿವಿ ಮಾತು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ  ಡಾ.ರಾಣಿ ತಿಲರ್ಾಪುರ, ಉಪಾಧ್ಯಕ್ಷ ನರಹರಿ ಕಟ್ಟಿ, ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥಕೆ.ಎಚ್, ಆರ್.ಎಫ್.ಓ ರವಿಕುಮಾರ ಎಂ.ಪಿ ಮತ್ತಿತರರು ಉಪಸ್ಥಿತರಿದ್ದರು.

 

ಸುದ್ದಿ ಓದಿ