ಬೆಳಕೂಡ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ
ಚಿಕ್ಕೋಡಿ: ಪ್ಲಾಸ್ಟಿಕ್ ನಿಮರ್ೂಲನೆ ಮಾಡುವುದರ ಜೊತೆಗೆ ಕಾಡು ಬೆಳೆಸಿ ನಾಡು ಉಳಿಸಿಕೊಳ್ಳಬೇಕೆಂದು ಶಿಕ್ಷಕರ ಸೊಸಾಯಿಟಿ ನಿದರ್ೇಶಕ ಚಂದ್ರಶೇಖರ ಅರಭಾವಿ ಹೇಳಿದರುತಾಲೂಕಿನ ಬೆಳಕೂಡ ಗ್ರಾಮದಲ್ಲಿ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದರು. ಈ ದೇಶದ ಪ್ರತಿಯೊಬ್ಬ ಪ್ರಜೆಯು ತಮ್ಮ ಮನೆ ಅಕ್ಕಪಕ್ಕ, ಹೊಲ ಗದ್ದೆಗಳಲ್ಲಿ ಕನಿಷ್ಟ ಹತ್ತತ್ತು ಗಿಡ ನೆಡಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಬಿ.ಆರ್.ಕವಣಿ, ಎಸ್ಡಿಎಂಸಿ ಅಧ್ಯಕ್ಷ ಸದಾಶಿವ ಸಾವಂತ, ಪ್ರಭಾರಿ ಮುಖ್ಯೋಪಾಧ್ಯ ಜಯಶ್ರೀ, ನಿರ್ಮಲ ಕವಣಿ, ಉತ್ತಮ ಅರಭಾವಿ, ಅಜರುದ್ದಿನ ನದಾಫ ಮುಂತಾದವರು ಇದ್ದರು