ಹರಿಯಾಣದ ಅಧಿಕಾರಿಗೆ ಒಲಿದ ವಿಶ್ವ ಬ್ಯಾಂಕ್ ಉನ್ನತ ಹುದ್ದೆ..!
ನವದೆಹಲಿ, ಸೆಪ್ಟೆಂಬರ್ 15: ಹರಿಯಾಣದ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯ ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು , ವಾಷಿಂಗ್ಟನ್ ನಲ್ಲಿರುವ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.
ಕೇಂದ್ರ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ಈ ಮಾಹಿತಿ ತಿಳಿಸಲಾಗಿದೆ. ಖುಲ್ಲರ್ 1988ರ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ. ವಿಶ್ವಬ್ಯಾಂಕಿನಲ್ಲಿ 2023, ಆ.31ರ ವರೆಗೆ ಅವರ ಅಧಿಕಾರಾವಧಿಯಿರಲಿದೆ.
ಸಿಬ್ಬಂದಿ ಸಚಿವಾಲಯದ ಇನ್ನೊಂದು ಆದೇಶದಲ್ಲಿ, ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ (ಎಡಿಬಿ) ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ಸಮೀರ್ ಕುಮಾರ್ ಖರೆಯನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಇವರ ಅಧಿಕಾರಾವಧಿಯೂ ಮೂರು ವರ್ಷವಾಗಿರುತ್ತದೆ.