ರಾಣೆಬೆನ್ನೂರ

ರಾಣೆಬೆನ್ನೂರು ಆರ್‌ಟಿಇಎಸ್ ಕಾಲೇಜನಲ್ಲಿ ವಿಶ್ವ ಏಡ್ಸ್‌ ದಿನ ಆಚರಣೆ

ರಾಣೆಬೆನ್ನೂರು ಆರ್‌ಟಿಇಎಸ್ ಕಾಲೇಜನಲ್ಲಿ ವಿಶ್ವ ಏಡ್ಸ್‌ ದಿನ ಆಚರಣೆ

ರಾಣೆಬೆನ್ನೂರು 04:  ಆರೋಗ್ಯದ ಸಮಾಜ ನಿರ್ಮಾಣಕ್ಕೆ ಏಡ್ಸ್‌ ಕಾಯಿಲೆ ಪೀಡಿತರು ಯಾವುದೇ ಮಡಿವಂತಿಕೆ ತೋರದೆ ಸ್ವಚ್ಛಂದವಾಗಿ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದಾಗ ಮಾತ್ರ ರೋಗದಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಪಾಟೀಲ್ ಹೇಳಿದರು.  

ಅವರು ನಗರ ಹೊರ ವಲಯದ ಆರ್‌ಟಿಇಎಸ್ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೆಡ್ ರಿಪ್ಪಿನ್ ಕ್ಲಬ್ ಮತ್ತು ಸಂಜೀವಿನಿ ನಗರ ಗ್ರಾಮೀಣ ಅಭಿವೃದ್ಧಿ ಸಮುದಾಯ ಸೇವಾ ಸಮಿತಿ ಮತ್ತಿತರ ಸಂಘಟನೆಗಳು ಆಯೋಜಿಸಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ನಿಯಂತ್ರಣಕ್ಕಾಗಿ ಸಾಕಷ್ಟು ಓಷಧಿಗಳನ್ನು ಕಂಡು ಹಿಡಿದಿದೆ. ಬಹುತೇಕರು ತಮ್ಮಲ್ಲಿರುವ ಮಡಿವಂತಿಕೆ, ಕೀಳರಿಮೇ ಮತ್ತು ಸಂಕುಚಿತ ಮನೋಭಾವನೆಯಿಂದಾಗಿ ವೈದ್ಯರ ಲ್ಲಿಗೆ ಹೋಗುವುದಿಲ್ಲ ಇದರ ಪರಿಣಾಮ, ಏಡ್ಸ್‌ ರೋಗ ಹರಡಿ, ಮತ್ತಷ್ಟು ರೋಗಿಗಳು ಹೆಚ್ಚಾಗಲು ಕಾರಣವಾಗುತ್ತದೆ  ಎಂದು ಹೇಳಿದರು. ಐಸಿಟಿಸಿಎ ಮುಖ್ಯಸ್ಥ ಮಾರುತಿ ಭಜಂತ್ರಿ, ಜಿಲ್ಲಾ ಕ್ಷಯರೋಗ ನಿಯಂತ್ರಕ ಡಾ:ಜಗದೀಶ್ ಪಾಟೀಲ್, ಸೇರಿದಂತೆ ಮತ್ತಿತರ ಗಣ್ಯರು  ಮಾತನಾಡಿದರು. ಕಾಲೇಜು ಪ್ರಾಚಾರ್ಯ ಪ್ರೊ :ಸಿ. ಎ. ಹರಿಹರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ಶಿಕ್ಷಕರು  ಸಿಬ್ಬಂದಿ ಉಪಸ್ಥಿತರಿದ್ದರು. ಪೂಜಾ ಸುಶ್ಮಿತಾ ಸಂಗಡಿಗರು ಪ್ರಾರ್ಥಿಸಿದರು. ಐಕ್ಯೂಎಸಿ, ಸಂಯೋಜಕ ಡಾ: ಮಧು ಕುಮಾರ್, ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಧಿಕಾರಿ ಡಾ : ಸರಸ್ವತಿ ಬಮ್ಮನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೂಲ್ಯ ಸುವಣಿಗಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ