ರಾಣೀಬೆನ್ನೂರಲ್ಲಿ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿಯಿಂದ ಕಾರ್ಯಾಗಾರ
ಲೋಕದರ್ಶನ ವರದಿ
ರಾಣೀಬೆನ್ನೂರ 23: ನಗರದ ಆದಿಶಕ್ತಿ ಧ್ಯಾನ ಮಂದಿರದಲ್ಲಿ ಸೋಮವಾರ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿಯು ಸಹಯೋಗ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನೇರಿ್ಡಸಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಉತ್ತರ ಕರ್ನಾಟಕ ರಾಜ್ಯ ಪ್ರಭಾರಿ ಆರತಿ ಕಾನಗೋ ಅವರು ಬಾಬಾ ರಾಮದೇವಜಿ ಮಹಾರಾಜ್ ಅವರು ಮಾನವನ ಆರೋಗ್ಯವಂತ ಜೀವನಕ್ಕೆ ಯೋಗ ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ.
ಭಾರತೀಯ ಯೋಗ ಪರಂಪರೆಗೆ ನಮ್ಮ ಅಂದಿನ ಋಷಿ ಮುನಿಗಳು, ಸಾಧು-ಸಂತರು ತಮ್ಮ ಧರ್ಮ ಜಾಗೃತಿಯ ಜೊತೆಗೆ ಯೋಗ-ಧ್ಯಾನ-ಪ್ರಾಣಾಯಾಮ ಕುರಿತಂತೆ ಮಾಹಿತಿ ಮಾರ್ಗದರ್ಶನ ಮಾಡುವುದರ ಮೂಲಕ ನೂರಾರು ವರ್ಷಗಳ ಕಾಲ ಯಾವುದೇ ರೋಗ-ರುಜಿನಗಳಿಲ್ಲದೇ ಅತ್ಯಂತ ಸ್ವಚ್ಛ ಶಾಂತತೆ ಮತ್ತು ಆರೋಗ್ಯವಂತ ಬದುಕನ್ನು ಸಾಗಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇತಿಹಾಸದ ಪರಿಕಲ್ಪನೆಯಲ್ಲಿ ರಾಮ್ ದೇವಜಿ ಸಹ ತಮ್ಮ ಬದುಕನ್ನು ಮುಡುಪಾಗಿಟ್ಟು ಸಂಪೂರ್ಣ ಯೋಗಮಯ ಭಾರತ ನಿರ್ಮಿಸುವ ಸಂಕಲ್ಪ ತೊಟ್ಟಿದ್ದಾರೆ ಈ ಸಂಕಲ್ಪ ಸಾಕಾರಕ್ಕೆ ಸಹಯೋಗ ಶಿಕ್ಷಕರು ಸಾಧನೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷ ರವೀಂದ್ರ ಬಿಜಾಪುರ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ನಿರಂತರವಾಗಿ ನಡೆದ ಸಹಯೋಗ ಶಿಕ್ಷಕರ ತರಬೇತಿಯಲ್ಲಿ ಯೋಗ ಸಾಧಕರಾದ ಕೆ.ಸಿ.ಕೋಮಲಾಚಾರ್, ಜಿಲ್ಲಾ ಮಹಿಳಾ ಪ್ರಭಾರಿ ಜ್ಯೋತಿ ಜಂಬಗಿ, ಹಿರಿಯ ಸಾಧಕಿ ವಜ್ರೇಶ್ವರಿ ಲದ್ವಾ, ರೇಖಾ ರಾಮಾಳದ, ಶಿವಾನಂದ ಬಡೇಂಕಲ್ ಸೇರಿದಂತೆ ಮತ್ತಿತರ ಸಾಧಕರು ಆರೋಗ್ಯಯುತ ಬದುಕಿಗೆ ಯೋಗ ಧ್ಯಾನ ಮತ್ತು ಪ್ರಾಣಾಯಾಮ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಪರಿಪೂರ್ಣ ಮಾಹಿತಿ ನೀಡಿದರು. ತಾಲೂಕಿನ ವಿವಿಧ ಭಾಗದಿಂದ 50ಕ್ಕೂ ಹೆಚ್ಚು ಯೋಗ ಶಿಕ್ಷಕರು ಪಾಲ್ಗೊಂಡಿದ್ದರು.