ಶಿಗ್ಗಾವ್

ಕಾರ್ಮಿಕರು ಒಗ್ಗಟ್ಟಿನಿಂದ ಸೌಲಭ್ಯಗಳ ಪಡೆದುಕೊಳ್ಳಿ

ಕಾರ್ಮಿಕರು ಒಗ್ಗಟ್ಟಿನಿಂದ ಸೌಲಭ್ಯಗಳ ಪಡೆದುಕೊಳ್ಳಿ

ಶಿಗ್ಗಾವಿ 13: ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಶ್ರೇಯೊಭಿವೃದ್ಧಿಯ ಜೊತೆಗೆ ಆರೋಗ್ಯಕ್ಕೆ ಒತ್ತು ಕೊಡುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ, ಇದು ನಿರಂತರವಾಗಿರಲಿ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು. 

ತಾಲೂಕಿನ ಬಂಕಾಪುರ ಪಟ್ಟಣದ  ಎಸ್.ಎ.ಕ್ಯೂ ಶಾದಿಮಹಲನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ಶಿಗ್ಗಾಂವ, ಬಂಕಾಪುರ ಘಟಕ, ಜಯಪ್ರೀಯಾ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಹಾವೇರಿ ಇವರ ಸಹಯೋಗದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಹಾಗೂ ಉಚಿತ ನೇತ್ರ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ ಕಾರ್ಯಕ್ರಮ ಜರುಗಿತು.

ಸಾನಿಧ್ಯ ವಹಿಸಿ ಮಾತನಾಡಿದ ಬಂಕಾಪೂರ ಧಾರ್ಮಿಕ ಗುರು ಹಜರತ್ ಸೈಯದ್ ಖುತುಬ್‍ಎಆಲಂ ಅವರು, ಎಲ್ಲ ಕಾರ್ಮಿಕರು ಒಗ್ಗಟ್ಟಾಗಿ ಕೆಲಸ ಮಾಡಿ ಸಂಘಟಿತರಾಗಿ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು ಎಂದರು.  

ನ್ಯಾಯವಾದಿ ಎ.ಎ. ಗಂಜೇನವರ, ಬಂಕಾಪೂರ ಎಎಸ್‍ಐಡಿಎಮ್ ಕುಡಲ,ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಾತನಾಡಿದರು.

ತಾಲೂಕಿನ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಯಿತು ಸುಮಾರು 200ಕ್ಕೂ ಹೆಚ್ಚು ಜನರ ಕಣ್ಣಿನ ಪರೀಕ್ಷೆ ಮಾಡಲಾಯಿತು. 53 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.  

ಕ.ರಾ.ಕಾ.ವಿ.ವೇದಿಕೆ ರಾಜ್ಯಾಧ್ಯಕ್ಷ ಅಬ್ದುಲ್ ಕರೀಂ ಮೊಗಲಲ್ಲಿ, ಬಂಕಾಪುರ ಘಟಕದ ಅಧ್ಯಕ್ಷ ಅಬ್ದುಲಖಾದರ ಸವಣೂರ, ಗೌರವಾಧ್ಯಕ್ಷರು ಜೀಲಾನಿ ಜಂಗ್ಲಿ, ತಾಲೂಕಾ ಅಧ್ಯಕ್ಷ ಇಮಾಮಹುಸೇನ ಆದಂಭಾಯಿ, ಎಆಯ್‍ಎಮ್‍ಡಿಎಫ್ ರಾಜ್ಯ ಪ್ರದಾನ ಕಾರ್ಯದರ್ಶಿ ಶೌಖತ್‍ಅಲಿ ಬಂಕಾಪೂರ,  ಕಾರ್ಯಾಧ್ಯಕ್ಷ ವೆಂಕಟೇಶ ಬಂಡಿವಡ್ಡರ, ಹನುಮಂತ ವಡ್ಡರ, ಮಹಾದೇವ ಹಡಪದ, ಲಲಿತಾ ಸಾತೇನಹಳ್ಳಿ, ಮಹ್ಮದಹುಸೇನ ಖತೀಬ ಸೇರಿದಂತೆ ಕಾರ್ಮಿಕರ ಸಂಘದ ಪಧಾಧಿಕಾರಿಗಳು ವಿವಿಧ ಮುಖಂಡರು, ವೈಧ್ಯರು, ಫಲಾನುಭವಿಗಳು ಹಾಗೂ ಜಯಪ್ರೀಯ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು. ಕಲಾವಿದ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಓದಿ