ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಿ
ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಎಚ್ಚರಿಕೆ: ಸಿಂದಗಿ, ಆಲಮೇಲ ತಾಲೂಕಾ ಮಟ್ಟದ ಟಾಸ್ಕ್ ಪೋರ್ಸ್ ಸಭೆ
ಸಿಂದಗಿ 20: ಸಭೆ ಕರೆದು ಚಹಾ, ಬಿಸ್ಕಿಟ್ ಕೊಟ್ಟು ಸಮಾದಾನ ಮಾಡಿದರೇ ಸಾಲದು. ಕ್ಷೇತ್ರದ ಸಮಸ್ಯೆಗಳನ್ನು ಅರಿತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಕ್ಷೇತ್ರದ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳ ಸಹಕಾರ ಅಗತ್ಯ. ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಮಂಗಳವಾರ ಕುಡಿಯುವ ನೀರಿನ ಹಾಗೂ ಮೇವಿನ ಸಮಸ್ಯೆಗಳ ಕುರಿತು ಸಿಂದಗಿ ಮತ್ತು ಆಲಮೇಲ ತಾಲೂಕಾ ಮಟ್ಟದ ಟಾಸ್ಕ್ ಪೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬರಗಾಳದ ಛಾಯೆ ಮುಡಿದ್ದು ಮುಂಬರುವ ಮೇ ತಿಂಗಳವರೆಗೆ ಸಿಂದಗಿ ಮತಕ್ಷೇತ್ರದಲ್ಲಿ ಯಾವುದೇ ಹಳ್ಳಿ, ಪಟ್ಟಣಗಳಿಗೆ ಕುಡಿಯುವ ನೀರಿನ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೆಗೌಡ ಅವರು ಕಳೆದ 15 ದಿನಗಳ ಹಿಂದೆ ವಿಜಯಪುರದಲ್ಲಿ ಕುಡಿಯುವ ನೀರಿನ ಬಗ್ಗೆ, ಮೇವಿನ ಸಮಸ್ಯೆ ಬಗ್ಗೆ ಸುದಿರ್ಘ ಸಭೆ ಕರೆದಿದ್ದರು. ಜಿಲ್ಲಾಧಿಕಾರಿಗಳು ಸರಿದಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಮುಂಬರು 4-5 ತಿಂಗಳಲ್ಲಿ ವಿಶೇಷವಾಗಿ ಸಿಂದಗಿ ಮತಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಬೇಟಿ ನೀಡುವ ಮೂಲಕ ಅಲ್ಲಿನ ಕುಡಿಯುವ ಮತ್ತು ಮೇವಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಆಲಿಮಟ್ಟಿ ಜಲಾಶಯದಲ್ಲಿರುವ ನೀರು ಕುಡಿಯುವ ನೀರಿಗಾಗಿ ಬಳಕೆ ಮಾಡಬೇಕು ಎಂದು ಈಗಾಗೇ ನಿರ್ಧರಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಮತ್ತು ಗುತ್ತಿ ಬಸವಣ್ಣ ಏತನೀರಾವರಿ ಯೋಜನೆಯ ಕಾಲುವೆಗಳಿಗೆ ಕುಡಿಯುವ ನೀರಿಗಾಗಿ ಹಂತ ಹಂತವಾಗಿ ಕಾಲುವೆಗೆ ನೀರು ಬಡಿಲಾಗುವುದು ಎಂದು ನಿರ್ಣಯಿಸಲಾಗಿದೆ ಎಂದು ಹೇಳಿದರು.
ಸಿಂದಗಿ ಮತಕ್ಷೇತ್ರದಲ್ಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ಅಲ್ಲಿ ಟ್ಯಾಂಕರ್ ಮೂಲಕ, ಕೊಳವೆ ಬಾವಿ ಕೊರೆಸುವ ಮೂಲಕ ಅಥವಾ ಇನ್ನಾವುದರ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಆಲಮಟ್ಟಿ ಜಲಾಶಯದಲ್ಲಿರುವ ನೀರು ಕುಡಿಯುವ ನೀರಿಗಾಗಿ ಉಪಯೋಇಸಬೇಕು ಎಂದು ನಿರ್ಣಯಿಸಲಾಗಿದೆ. ಕುಡಿಯುವ ನೀರಿಗಾಗಿ ಕಾಲುವೆಗಳಿಗೆ ಹಂತ ಹಂತವಾಗಿ ಬಿಡಲಾಗುವುದು. ಆದ್ದರಿಂದ ಅಧಿಕಾರಿಗಳು ಸಿಂದಗಿ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಿ ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೇ ಅಲ್ಲಿ ಟ್ಯಾಂಕರ್ ಮೂಲಕ ಅಥವಾ ಕೊಳವೆ ಬಾವಿ ಕೊರೆಸುವ ಮೂಲಕ ಪರಿಹರಿಸಲು ಸಾಧ್ಯ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಕುಡಿಯುವ ನೀರು ಸರಬರಾಜು ಆರ್ಡಬ್ಲೂಎಸ್ ಇಲಾಖೆಯ ಎಲ್ಲ ಅಧಿಕಾರಿಗಳು, ಪಿಡಿಓಗಳು ಮುಂಬರುವ 4-5 ತಿಂಗಳು ಬಹಳ ಜವಾಬ್ದಾರಿಯುವ ಕೆಲಸ ಮಾಡಬೇಕು ಅದರಲ್ಲಿ ಆರ್ಡಬ್ಲೂಎಸ್ ಇಲಾಖೆಯ ಜವಾಬ್ದಾರಿ ಹೆಚ್ಚು. ಇಲ್ಲಿಯವರೆಗೆ ಕುಡಿಯುವ ನೀರಿನ ಸಮಸ್ಯೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಮಸ್ಯೆ ಬರಬಹುದು. ಅಧಿಕಾರಿಗಳು ಒಳ್ಳೆ ರೀತಿಯಿಂದ ಕೆಲಸ ಮಾಡಿದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭಿರವಾಗಿ ತೆಗೆದುಕೊಳ್ಳಬೇಕು. ಡಿಸೆಂಬರ ತಿಂಗಳ ಕೊನೆಯಲ್ಲಿದ್ದೇವೆ. ಆದರೆ ಈಗ ಕುಡಿಯುವ ನೀರಿನ ಸಮಸ್ಸಯೆಯಿಲ್ಲ. ಮುಂಬರುವ 4-5 ತಿಂಗಳಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನೀರಿನ ಮೂಲಗಳ ಬಗ್ಗೆ ನೋಡಿದ್ದೇವೆ, ಮಾಡಿದ್ದೇವೆ, ಕೇಳುತ್ತೇವೆ, ಪರೀಶೀಲಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯವುಲ್ಲ. ನೀರಿನ ಸಮಸ್ಯೆ ಪರಿಹರಿಸುವ ಕಾರ್ಯ ಮಾಡುವ ಎಂದು ತಾಪಂ ಇಓ, ಆರ್ಡಬ್ಲೂಎಸ್ ಅಧಿಕಾರಿಗಳಿಗೆ ಹಾಗೂ ಪಿಡಿಓ ಅವರಿಗೆ ಖಡ ಎಚ್ಚರಿಕೆ ನೀಡಿದರು.
ಪಿಡಿಓಗಳು ಕೇಂದ್ರ ಸ್ಥಾನದಲ್ಲಿ ವಾರದಲ್ಲಿ ನಾಲ್ಕುದಿನವಿರಬೇಕು. ಪಂಚಾಯತಿ ಮಟ್ಟದಲ್ಲಿ ವಾರದಲ್ಲಿ ಒಂದು ಸಭೆ ಕರೆಯಬೇಕು. ಆಗ ಸಮಸ್ಯೆಗಳ ಬಗ್ಗೆ ಅರಿವಾಗುತ್ತದೆ. ನಿಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಬೇಟಿ ನೀಡಿ. ಅಲ್ಲಿನ ಸಮಸ್ಯೆ ಗುರುತಿಸಿ ಪರಿಹರಿಸಲು ಕಾರ್ಯನಿರ್ವಹಿಸಬೇಕು. ಆದರೆ ಪಿಡಿಓಗಳು ವರ್ಷದಲ್ಲಿ ಒಂದು-ಎರಡು ಸಭೆ ಮಾಡಿದರೇ ಹಳ್ಳಿಗಳು ಹೇಗೆ ಅಭಿವೃದ್ಧಿಯಾಗಬೇಕು. ಪಿಡಿಓಗಳು ಕೇಂದ್ರಸ್ಥಾನದಲ್ಲಿದ್ದು ತಿಂಗಳಿಗೆ ಅಥವಾಗಿ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರು ಸಭೆ ನಡೆಸುವಂತೆ ಎಲ್ಲ ಪಿಡಿಓಗಳು ಸಭೆ ನಡೆಸುವಂತೆ ಎಚ್ಚರಿಕೆ ನೀಡಬೇಕು ಎಂದು ತಾಲೂಕ ಪಂಚಾಯತಿ ಇಓ ರಾಮು ಅಗ್ನಿ ಅವರಿಗೆ ಸೂಚಿಸಿದರು.
ಲೃಷಿ ಇಲಾಖೆಯವರು ತಾಲೂಕಾ ಆಢಳಿತದ ಸಹಯೋಗದಲ್ಲಿ ತಾಲೂಕಿನ ರೈತರಿಗೆ ಕರೆಯಿಸಿ ಸಂವಾಧ ಕಾರ್ಯಕ್ರಮ ನಡೆಸಬೇಕು. ನಾಲ್ಕೈದು ಜನ ಕೃಷಿ ವಿಜ್ಞಾನಿಗಳನ್ನು, ಪ್ರಗತಿಪರ ರೈತರನ್ನು ಕರೆಯಿಸಿ ರೈತರೊಂದಿಗೆ ಸಂವಾದ ನಡೆಸಬೇಕು. ಮಿಶ್ರಬೆಳೆ ಬಗ್ಗೆ, ಭೂಮಿಯ ಫಲವತ್ತತೆ ಬಗ್ಗೆ, ಬೆಳೆ ಬದಲಾವಣೆ ಬಗ್ಗೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮುಡಿಸುವ ಕಾರ್ಯಗಳನ್ನು ಹೋಬಳಿ ಮಟ್ಟದಲ್ಲಿ ಮಾಡಬೇಕು. ಆಗ ಕೃಷಿ ಅಭಿವೃದ್ಧಿಯಾಗಲು ಸಾದ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಯ್. ಸಿಂಗೆಗೋಳ ಅವರಿಗೆ ಸಲಹೆ ನೀಡಿದರು. ಹೈನುಗಾರಿಕೆಗೆ ಹೆಚ್ಚಿನ ಜಾಗೃತಿ ಮುಡಿಸುವ ಕಾರ್ಯ ಮಾಡಬೇಕು. ಕೆಎಂಎಫ್ ಅವರ ಸಹಯೋಗದೊಂದಿಗೆ ರೈತರಿಗೆ ಹೈನುಗಾರಿಕೆ ಬಗ್ಗೆ ಜಾಗೃತಿ ಮುಡಿಸಬೇಕು. ಅಂದು ಬ್ಯಾಂಕಿನ ಅಧಿಕಾರಿಗಳಿಗೆ ಕರೆಯಿಸಿ ಸಾಲಸೌಲಭ್ಯ ನೀಡುವ ಮಾಹಿತಿ ನೀಡಿಸಿ. ರೈತರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕು ಎಂದು ಪಶುಆಸ್ಪತ್ರೆಯ ಅಧಿಕಾರಿಗೆ ಸೂಚಿಸಿದರು.
ಸಿಂದಗಿ ಮತಕ್ಷೇತ್ರದಲ್ಲಿ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸೆ ಬಾರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಿಂದಗಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಶೀಲ್ದಾರ ಸುರೇಶ ಚವಲಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.