ಚಳಿಗಾಲಕ್ಕೆ ಖರ್ಜೂರನಾ ಸುಮ್ನೆ ವಂಡರ್ ಫ್ರೂಟ್ ಅನ್ನೋಕಾಗುತ್ತಾ
ಬೆಂಗಳೂರು,ನ.2: ಒಂದ್ಕಡೆ ಆಗಾಗ ಬೀಳೋ ಮಳೆ ಇನ್ನೊಂದ್ಕಡೆ ಈಗಾಗಲೇ ಶುರುವಾದ ಚಳಿಗಾಲ.ಈ ಥಂಡಿ ಚಳಿಗೆ ಮೈಯನ್ನ ಬೆಚ್ಚಗಿಡೋಕೆ ಸ್ವೆಟರ್, ಸ್ಕಾರ್ಫ್, ಸಾಕ್ಸ್ ಅಂತೆಲ್ಲ ಬಳಸ್ತಿವಿ.ಇದೆಲ್ಲ ದೇಹವನ್ನ ಹೊರಗಿನಿಂದ ಬೆಚ್ಚಗಿಡೋಕಾಯ್ತು.ದೇಹಾನ ಒಳಗಿಂದ ಬೆಚ್ಚಗಿಡೋಕೆ ಕಾಫಿ ಅಷ್ಟೇ ಸಾಕಾ.ಊಹುಂ.
ದೇಹಾನ ಒಳಗಿಂದ ಬೆಚ್ಚಗಿನ ಜೊತೆ ಫಿಟ್ ಎಂಡ್ ಫೈನ್ ಆಗಿಡೋಕೆ ವಂಡರ್ ಫ್ರೂಟ್ ಬಳಸೋದು ಉತ್ತಮ.ಈ ವಂಡರ್ ಫ್ರೂಟ್ ಅಂದ್ರೆ ಬೇರೆ ಯಾವುದೂ ಅಲ್ಲ ಅದೇ ಬಹುಪಯೋಗಿ ಖರ್ಜೂರ.
ಈ ಖರ್ಜೂರನಾ ಸುಮ್ ಸುಮ್ನೆ " ವಂಡರ್ ಫ್ರೂಟ್ ಅನ್ನೋಕಾಗತ್ತಾ"? ಖಂಡಿತ ಇಲ್ಲ.ಚಳಿಗೆ ಬೇಕು ಈ ಖರ್ಜೂರ.ಇದರ ಲಾಭ ಏನು ಅನ್ನೋದನ್ನ ನೋಡೋದಾದ್ರೆ,
ಚಳಿಗಾಲದಲ್ಲಿ ಖರ್ಜೂರ ದೇಹಕ್ಕೆ ದುಪ್ಪಟ್ಟು ಲಾಭಕಾರಿ.ಇದರಲ್ಲಿ ಐರನ್,ಮಿನರಲ್,ಕ್ಯಾಲ್ಶಿಯಂ, ಅಮಿನೋ ಆಸಿಡ್, ಫಾಸ್ಪರಸ್ ಹಾಗೂ ವಿಟಮಿನ್ನಂತಹ ಗುಣಗಳಿರೋ ಕಾರಣಕ್ಕಾಗಿ ಇದನ್ನ ವಂಡರ್ಫ್ರೂಟ್ ಎನ್ನಲಾಗುತ್ತೆ.
ಗ್ಲೂಕೋಸ್ ಮತ್ತು ಫ್ರಾಕ್ಟೋಜ್ನ ಖಜಾನೆಯಾಗಿರುವ ಖರ್ಜೂರ ಮಧುಮೇಹಿಗಳಿಗೆ ರೋಗನಿರೋಧಕವಾಗಿದೆ.ಕೊಲೆಸ್ಟ್ರಾಲ್ ಮುಕ್ತ ಖರ್ಜೂರದಲ್ಲಿ 23ಕ್ಯಾಲೋರಿ ಸಿಗುತ್ತೆ.ಇದರ ಜೊತೆ ಸೆಲ್ ಡ್ಯಾಮೇಜ್, ಕ್ಯಾನ್ಸರ್ನಿಂದ ಬಚಾವ್ ಮಾಡುತ್ತೆ.ಅಲ್ಲದೇ ಹೃದಯ ಸಂಬಂಧಿ ಕಾಯಿಲೆಗಳಿಗೂ ಇದು ಲಾಭಕಾರಿ.
ಖರ್ಜೂರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್,ಐರನ್, ಕ್ಯಾಲ್ಸಿಯಂ,ವಿಟಮಿನ್ಮ್ಯಾಗ್ನಿಷಿಯಂ ಇರೋದ್ರಿಂದ ಚಳಿಗಾಲದಲ್ಲಿ ದೇಹವನ್ನ ಬೆಚ್ಚಗಿಡೋದ್ರ ಜೊತೆಗೆ ಶಕ್ತಿಯನ್ನೂ ನೀಡುತ್ತೆ.ಮೂಳೆಗಳನ್ನ ಗಟ್ಟಿಗೊಳಿಸಿ ವಯೋ ಜೀವಕೋಶ ಹಾನಿಯನ್ನ ತಪ್ಪಿಸುತ್ತೆ.ಇನ್ನೂ ಇದು ಆ್ಯಂಟಿ ಏಜಿಂಗ್ ಆಗಿರೋದ್ರಿಂದ ಸೌಂದರ್ಯವರ್ಧಕವೂ ಆಗಿದೆ.ಅಸ್ತಮಾದಿಂದ ರಕ್ಷಣೆ ನೀಡಲು ಪ್ರತಿದಿನ ಬೆಳಿಗ್ಗೆ,ಸಂಜೆ ಮೂರು ಖರ್ಜೂರಗಳನ್ನು ತಿನ್ನಬೇಕು.ಇದರಲ್ಲಿ ಸ್ವಲ್ಪ ಪೊಟ್ಯಾಷಿಯಂ ಸ್ವಲ್ಪ ಸೋಡಿಯಂ ಇದ್ದು,ಇವೆರಡು ನರ್ವಸ್ ಸಿಸ್ಟಮ್ನ ಕಾರ್ಯವನ್ನ ಹೆಚ್ಚಿಸತ್ತೆ.ಶೀತ ಹೋಗಲಾಡಿಸಲು 2-3ಖರ್ಜೂರದ ಜೊತೆ ಒಂದೆರಡು ಕಾಳುಮೆಣಸು,ಏಲಕ್ಕಿಯನ್ನ ಹಾಕಿ ಕುದಿಸಿ ಕಷಾಯದಂತೆ ಬಳಸಬಹುದು.ರಕ್ತದೊತ್ತಡ ಕಡಿಮೆ ಮಾಡಲು 5-6 ಖರ್ಜೂರ ಬಳಸಬಹುದಾಗಿದೆ.