ಆರ್ಟಿಇಎಸ್ ಕಾಲೇಜಿನಲ್ಲಿ ಮಹಿಳಾ ಜಾಗೃತಿ ಶಿಬಿರ
ರಾಣೇಬೆನ್ನೂರು 20: ಮಹಿಳೆಯರು ಸಮಾಜದಲ್ಲಿ ನಿತ್ಯವೂ ಒಂದಿಲ್ಲಾಒಂದುರೀತಿಯಲ್ಲಿಕಿರಿಕಿರಿಅನುಭವಿಸುತ್ತಿದ್ದಾರೆ. ಇದರಿಂದ ಹೊರಬರಬೇಕಾದರೆ ಪ್ರತಿಯೊಬ್ಬರೂ ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಸಿದ್ದರಾಗಬೇಕಾಗುತ್ತದೆ. ಅದಕ್ಕಾಗಿದೈಹಿಕ ಬೌದ್ದಿಕ ಬೆಳವಣಿಗೆ ಇಂದಿನ ಅಗತ್ಯವಿದೆಎಂದುಜಿ.ಪಂ. ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ್ಹೇಳಿದರು.
ಅವರು ನಗರದ ಆರ್.ಟಿ.ಇ.ಎಸ್. ಕಾಲೇಜಿನಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಶೋಷಣೆ ಕುರಿತು ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಆಧುನಿಕತೆ ತಂತ್ರಜ್ಞಾನ ವಿಜೃಂಭಣೆಯಲ್ಲಿ ನಮ್ಮಯುವಸಮುದಾಯ ಮುಳುಗಿ ಹೋಗಿದೆ.ಈ ಕಾರಂದಿಂದ ಬಹುತೇಕವಾಗಿ ನಮ್ಮ ನೈತಿಕತೆ ಮರೆಯಾಗುತ್ತಿರುವುದು ಅತ್ಯಂತ ವಿಷಾದಕರ ಸಂಗತಿ ಎಂದ ಅವರು ವಿದ್ಯಾರ್ಥಿನಿಯರು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳುವಂತಹ ಸಾಮರ್ಥ್ಯ ಹೊಂದಬೇಕು. ಅದಕ್ಕಾಗಿ ಇಂತಹ ಅರಿವು ಜಾಗೃತಿ ಶಿಬಿರಗಳು ಅತ್ಯಂತ ಅಗತ್ಯವಿದೆ ಎಂದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮಾಂತರ ಸಿ.ಪಿ.ಐ. ಶ್ರೀಶೈಲ್ ಚೌಗಲಾ ಅವರು ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಯ ಪರಿಣಾಮವಾಗಿ ಇಂದು ನಮ್ಮ ಯುವಜನಾಂಗ ತಮ್ಮತನವನ್ನು ತಾವು ಕಳೆದುಕೊಳ್ಳುತ್ತಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಈ ಇತಿಹಾಸವನ್ನು ಅರಿತುಕೊಂಡು ಮುನ್ನಡೆದಾಗ ಮಾತ್ರ ಭಾರತದ ಅಭಿವೃದ್ಧಿಯ ಜೊತೆಗೆ ಸಮಗ್ರ ಭಾರತೀಯರು ಮತ್ತಷ್ಟು ಸಾಧಿಸಲು ಸಾಧ್ಯವಾಗುವುದು ಎಂದರು.
ಕಾಲೇಜು ಪ್ರಾಚಾರ್ಯಎಫ್, ಹೆಚ್, ಮಾಚೇನಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಪಡೆಯಲ್ಲಿಜಿಲ್ಲಾ ಪೋಲಿಸ್ ಇಲಾಖೆಯಎಸ್. ಆರ್.ಕುರ್ನಾಳ್, ನಂದಾ ಭಜಂತ್ರಿ, ಜಿ.ಪಿ.ಲಮಾಣಿ, ಮಧುರಾಎನ್, ಎಸ್.ಸಿ, ಮಲ್ಲಾಪುರ, ಉಮಾ ಮಡ್ಲೂರ್, ವೀಣಾ ಹೊನ್ನಗೌಡ್ರ, ರಮೇಶ್ಎನ್.ಜಿ, ಅಕ್ಷಯಕುಮಾರ್, ಶರತ್ಗೌಡ, ಶರಣಬಸಪ್ಪ, ಮಾಲತೇಶ್ ಡಾ.ಮಧುಕುಮಾರ್ಆರ್, ಡಾ.ಸರಸ್ವತಿ ಹೆಚ್. ಬಮ್ಮನಾಳ ಡಾ.ಮಧುಕುಮಾರ್ ಆರ್ ಶಿವಕುಮಾರ್ ಬೆಣ್ಣೆ್ಸೆ ಸೇರಿದಂತೆ ಮತ್ತಿತರೆ ಗಣ್ಯರು ಉಪನ್ಯಾಸಕರು ಪಾಲ್ಗೊಂಡಿದ್ದರು.