ಸಿಂಧಗಿ

ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಮಾ.25ರಂದು ಮಹಿಳಾ ಹಬ್ಬ

ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಮಾ.25ರಂದು ಮಹಿಳಾ ಹಬ್ಬ

ಸಿಂದಗಿ; ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಿವೇದಿತಾ ಯುವತಿ ಮಂಡಳಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನಿಮಿತ್ಯ  ಪಟ್ಟಣದ ಜ್ಯೋತಿ ನಗರದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಮಾ. 25 ಮತ್ತು 26 ರಂದು  ಮಹಿಳಾ ಹಬ್ಬ, ಗೃಹಣಿರಿಗಾಗಿ, ವಿಧವೆಯರಿಗಾಗಿ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿವಿಧ ರೀತಿಯ ಸ್ಪರ್ಧೆ   ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.

ಪಟ್ಟಣದ ಜ್ಯೋತಿ ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರು ಮದುವೆಯಾದರೆ ಸಾಕು ಅವರಲ್ಲಿರುವ ಪ್ರತಿಭೆಗಳು ವೇದಿಕೆಗಳು ಸಿಗಧೆ ತಮ್ಮಲ್ಲಿಯೇ ಕಮರಿಹೋಗುತ್ತಿವೆ ಅಂತಹ ಪ್ರತಿಭಾನ್ವೀತ ಮಹಿಳೆಯರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕಿಯರನ್ನು ಗುರುತಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಕಾರಣ ಕಸಾಪ ಎಲ್ಲ ಸದಸ್ಯರು, ಕನ್ನಡಪರ ಸಂಘಟನೆಯ ಮುಖ್ಯಸ್ಥರು, ವಿವಿಧ ಸಂಘಟನೆಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ಕರೆ ನೀಡಿದರು.

      ನಿವೇದಿತಾ ಯುವತಿ ಮಂಡಳಿಯ ಅದ್ಯಕ್ಷೆ ಶೈಲಜಾ ಸ್ಥಾವರಮಠ ಮಾತನಾಡಿ,  ಸುಮಾರು 21 ವರ್ಷಗಳಿಂದ ಮಹಿಳೆಯರಿಗಾಗಿ, ಕೌಶಲ್ಯಭಿವೃದ್ಧಿ, ಸಾಕ್ಷರತಾ ಆಂದೋಲನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದ್ದು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಬೇಕೆನ್ನುವ ಉದ್ದೇಶದಿಂದ ಮತ್ತು ನನ್ನ ಹಿರಿಯ ಮಗಳು ನಿವೇಧಿತಾ ಇವಳ ಪ್ರಥಮ ಪುಣ್ಯ ಸ್ಮರಣೋತ್ಸವ ಇರುವುದರಿಂದ 25 ವರ್ಷ ಮೇಲ್ಪಟ್ಟ ವಯಸ್ಸಿನ ಅವಕಾಶ ವಂಚಿತ ಎಲ್ಲಾ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಹನಿಗವನ ಸ್ಪರ್ಧೆ, ಗಾಯನ ಸ್ಪರ್ಧೆ, ಆಶುಭಾಷಣಾ ಸ್ಪರ್ಧೆ, ಅಡುಗೆ  ಸ್ಪರ್ಧೆ ,  ವೇಷಭೂಷಣ ಸ್ಪರ್ಧೆ, ಕೇಶವಿನ್ಯಾಸ,    ಕಣ್ಣು ಕಟ್ಟಿಕೊಂಡು ಶೃಂಗಾರ ಸೇರಿದಂತೆ 10, ನೃತ್ಯ ಸ್ಪರ್ಧೆ,  ನೃತ್ಯ ತಂಡಗಳಿಂದ ಆಹ್ವಾನ ಸ್ವಸಹಾಯ ಸಂಘಗಳ. ಸಂಘ ಸಂಸ್ಥೆಗಳು. ಉದ್ಯೋಗಸ್ಥ ಮಹಿಳೆಯರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದು ಇನ್ನೂ ಉಳೀದ ಮಹಿಳೆಯರು ಹೆಚ್ಚಿನ ವಿವರಗಳನ್ನು ಪಡೆಯಲು  ಶೈಲಜಾ ಸ್ಥಾವರಮಠ -9972435327, ರಾಜೇಶ್ವರಿ ಪಾಟೀಲ್ - 99015 37598. ಸುನೀತಾ ತೇಲಿ- 77605 78507. ಸುದಾ ಸುಣಗಾರ -98809 18047, ಮೀನಾಕ್ಷಿ ಶಿಂಧೆ- 91 99026 56753 ಇವರನ್ನು ಸಂಪರ್ಕಿಸುಂತೆ ಕೊರಿದರು. 


ಸುದ್ದಿ ಓದಿ