ಮಹಿಳೆಯರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗದಿರಲಿ ; ಅಧ್ಯಕ್ಷ ಶಶಿಧರ ಎಮ್. ಗೌಡ ಕರೆ: ಅಂತರಾಷ್ಟ್ರೀಯ ಮಹಿಳಾ ಸಪ್ತಾಹ: ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿ
ಸವದತ್ತಿ 11: ಮಹಿಳೆಯರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತೀ ದಿನವೂ ಅವರ ಪಾತ್ರ, ಸಾಧನೆ, ಮಹತ್ವ ಕುರಿತಾಗಿ ಗೌರವಿಸುವ ಕೆಲಸ ಆಗಬೇಕು, ಅವರು ಕೇವಲ ಗೂಡಿನ ದೀಪವಲ್ಲ. ಅವರು ಬೆಳಗುವ ದೀಪ. ಕುಟುಂಬದಿಂದ ಹಿಡಿದು ಸಮಾಜದ ಕಣ್ಣಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸವದತ್ತಿ ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷ ಶಶಿಧರ ಎಮ್. ಗೌಡ ಹೇಳಿದರು.
ಸವದತ್ತಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ, ಹಾಗೂ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 10ರಂದು ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ಸಪ್ತಾಹದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸ ನೀಡಿದನ್ಯಾಯವಾದಿ ಎಸ್.ಎಸ್. ವಂಟಮುರಿ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಿಸಲಾಗಿದೆ. ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ ಈ ಬಾರಿಯ ಮಹಿಳಾ ದಿನಾಚರಣೆ ಧ್ಯೇಯವಾಕ್ಯವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಆರಿ್ಪ. ತೋಟಗಿ ಮಾತನಾಡಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ಕಾಯ್ದೆಯನ್ನು ವಿವರಿಸಿದರು. ಕಾಯಿದೆಯಡಿ ನೌಕರರ ಹಕ್ಕುಗಳು ಯಾವುವು? ಕೆಲಸದ
ಸ್ಥಳದಲ್ಲಿ ಸುರಕ್ಷಿತ ವಾತಾವರಣ, ಮಹಿಳೆ ದೂರು ನೀಡಲು ಆರಿಸಿದರೆ ಅವರಿಗೆ ಸಹಾಯ ಒದಗಿಸಿ. ದೂರನ್ನು ನಿಭಾಯಿಸಲು ಮತ್ತು ವಿಚಾರಣೆ ನಡೆಸಲು ಆಂತರಿಕ ಸಮಿತಿ ಅಥವಾ ಸ್ಥಳೀಯ ಸಮಿತಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ. ಈ ಕಾಯಿದೆಯಡಿ ಶಿಕ್ಷೆ ಏನು? ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಂಬಂಧಿಸಿದ ಯಾವುದೇ ಕೃತ್ಯವನ್ನು ಐಪಿಸಿಯ ಸೆಕ್ಷನ್ 509 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಸರಳ ಜೈಲು ಶಿಕ್ಷೆಅಥವಾ ದಂಡದೊಂದಿಗೆ ಅಥವಾ ಎರಡಕ್ಕೂ ವಿಸ್ತರಿಸಬಹುದಾದ ಅವಕಾಶವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾಂಚನಾ ಅಮಠೆ, ಶಿಶು ಅಭವೃದ್ದಿ ಯೋಜನಾಧಿಕಾರಿಗಳು ಮಹಿಳೆಯರು ಮಧ್ಯ ವ್ಯಸನಿ ಗಂಡನಿಂದ ತುತ್ತಾಗಿ ಮಕ್ಕಳನ್ನು ಸಾಕದೇ ಇರುವ ಪರಿಸ್ದಿತಿಯಲ್ಲಿದ್ದರೆ ಬಾಲಕಿಯರಿಗಾಗಿ, ಬಾಲಕರಿಗಾಗಿ ಬೇರೆ ಬೇರೆ ಬಾಲಮಂದಿರಗಳಿವೆ ಅವುಗಳಲ್ಲಿ ಮಕ್ಕಳ ವಿಧ್ಯಾಬ್ಯಾಸದಿಂದ ಮುಂದಿನ ಎಲ್ಲಾ ಉನ್ನತ ವ್ಯಾಸಂಗದ ವರೆಗೂ ಇರುವ ಅನುಕೂಲತೆಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳ ಭಾಷಣ ಮಾಡಿದ ಎಮ್.ಎಮ್. ಯಲಿಗಾರ, ನ್ಯಾಯವಾದಿಗಳು, ಮಾತನಾಡಿ ಮಹಿಳೆಯರಿಗಾಗಿ ಇರುವ ಹಕ್ಕುಗಳನ್ನು ತಿಳಿದುಕೊಂಡ ಎಲ್ಲ ಮಹಿಳೆಯರು ಅವುಗಳ ಸದಬಳಿಕೆ ಮಾಡಿಕೊಳ್ಳಬೇಕು ಯಾರು ದುರ್ಬಳಿಕೆ ಮಾಡಿಕೊಳ್ಳಬಾರದು ವಿನಾಃಕಾರಣ ಕ್ಷುಲಕ ಕಾರಣಕ್ಕೆ ತಂಟೆ ತಕರಾರು ಮಾಡಿಕೊಂಡು ಕೋರ್ಟ ಕಛೇರಿ ಅಂತಾ ಅಲೆದಾಡಿ ವ್ಯರ್ಥ ಧನ ಹಾನಿಯ ಜೊತೆಗೆ ಅತ್ಯ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳುವುದರ ಜೊತೆಗೆ ಜನನ-ಮರಣ ಕಾಯ್ದೆಯನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಎನ್. ಮುತ್ತಿನ, ಅವರು ಮಾತನಾಡಿ ಮಹಿಳೆಯರಿಗಾಗಿ ಇರುವ ಎಲ್ಲಾ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಡು ಬಡವರು, ದುರ್ಬಲರು, ವಿಶೇಷಚೇತನರು, ಆರ್ಥಿಕವಾಗಿ ಹಿಂದುಳಿದವರು ಮುಂತಾದವರು ಯಾವುದೇ ಕಾರಣಕ್ಕೆ ನ್ಯಾಯಾಲಯದಲ್ಲಿ ದಾವೆಯಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದ್ದರೆ ಹಾಗೂ ವಕೀಲರನ್ನು ನೇಮಿಸಿಕೊಂಡು ಪ್ರಕರಣವನ್ನು ನಡೆಸಲು ಶಕ್ತಿ ಹೊಂದಿಲ್ಲದಿದ್ದರೆ ನ್ಯಾಯಯುತವಾಗಿ ಕಾನೂನುನಿನ ಚೌಕಟ್ಟಿನೊಳಗೆ ಅವರಿಗಾಗಿ ಕಾನೂನಿನ ನೆರವನ್ನು ಒದಗಿಸಲಾಗುತ್ತದೆ ಅದರ ಉಪಯೋಗಳನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು,
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಜೆ.ಬಿ.ಮುನವಳ್ಳಿ, ನ್ಯಾಯವಾದಿಗಳಾದ ವಿ.ಎಸ್.ಮುನವಳ್ಳಿ, ಆರಿ್ವ.ಹುಂಬಿ, ಪ್ರಕಾಶ ಮೆನಸಿನಕಾಯಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಜ್ಯೋತಿ ಹೊಸಮಠ, ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಪದಾಧಿಕಾರಿಗಳಾದ ಜ್ಯೋತಿ ಅಣ್ಣಿಗೇರಿ, ಉಮಾ ಸತ್ತಿಗೇರಿ, ರೇಣುಕಾ ಚಂದರಗಿ ಮುಂತಾದವರು ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಶಿರಸಂಗಿ ಗ್ರಾಮದ ಮಹಿಳೆಯರು ಮುಂತಾದವರು ಹಾಜರಿದ್ದರು. ನ್ಯಾಯವಾದಿ ಬಿ.ಕೆ.ಕಡಕೋಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.