ಚಿಕ್ಕೋಡಿ

ಮಹಿಳಾ ಉದ್ಯೋಗ ಸಬಲೀಕರಣ ಯೋಜನೆ: ಮಹಿಳಾ ಗ್ರಾಮ ಸಭೆ

ಮಹಿಳಾ ಉದ್ಯೋಗ ಸಬಲೀಕರಣ ಯೋಜನೆ: ಮಹಿಳಾ ಗ್ರಾಮ ಸಭೆ

ಚಿಕ್ಕೊಡಿ: ಮಹಿಳೆಯರು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸಬಲರಾಗಬೇಕು, ಸ್ವ-ಉದ್ಯೋಗ ಮಾಡಲಿಕ್ಕೆ ಮುಂದೆ ಬರಬೇಕು. ನರೇಗಾ ಯೋಜನೆಯಡಿ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಬಹುದೆಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಕೆ.ಎ.ಮೋಮಿನ ಹೇಳಿದರು. 

ಗುರುವಾರ ಚಿಂಚಣಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮಹಿಳಾ ಉದ್ಯೋಗ ಸಬಲೀಕರಣ ಯೋಜನೆಯಡಿ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿದರು. 

ನರೇಗಾ ಯೋಜನೆಯು ಬಡವರಿಗೆ ಬಹಳ ಅನುಕೂಲವಾಗಿದೆ. ಪ್ರತಿ ದಿನಕ್ಕೆ 309ರೂ ಕೂಲಿ ಹಣ ಜಮಾ ಮಾಡಲಾಗುತ್ತಿದೆ. ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು. 

ತಾ.ಪಂ. ಐಇಸಿ ಸಂಯೋಜಕ ರಂಜಿತ ಕಾಂಬಳೆ ಯವರು ಮಾತನಾಡಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಾಮಗಾರಿಗಳನ್ನು ಮಾಡಿಕೊಂಡು ಲಾಭ ಪಡೆದುಕೊಳ್ಳಬಹುದು. ಮಹಿಳಾ ಸ್ವಸಹಾಯ ಸಂಘದವರು, ಸ್ತ್ರೀ ಶಕ್ತಿ ಸಂಘದರು ನರೇಗಾ ಯೋಜನೆಯಡಿ ಪಾಲ್ಗೋಳಬೇಕು ಹಾಗೂ ಎಲ್ಲಾಕುಟುಂಬದವರು ಕಡ್ಡಾಯವಾಗಿ ಉದ್ಯೋಗ ಚೀಟಿಗಳನ್ನು ಪಡೆದುಕೊಳ್ಳಬೇಕು ಗ್ರಾಮ ಪಂಚಾಯತಿಯಿಂದ ಕೃಷಿ ಹೊಂಡ, ಬಾವಿ, ಜಮೀನು ಸಮತಟ್ಟು, ದನದದೊಡ್ಡಿ, ಪೌಷ್ಠಿಕ ತೋಟ, ಕುರಿದೊಡ್ಡಿ, ಆಡಿನ ಶೆಡ್ಡು, ಎರಹೊಳು ಗೊಬ್ಬರತೊಟ್ಟಿ, ಮಾಡಿಕೊಳ್ಳಬಹುದೆಂದು ಹೇಳಿದರು. 

ಈ ಸಭೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಪ್ರೇಮಾ ಸಂಜೀವಕುಮಾರ ಅಪ್ಪಾಜಿಗೋಳ ಹಾಗೂ ಉಪಾಧ್ಯಕ್ಷ, ಸರ್ವ ಸದಸ್ಯರು, ಸಿಬ್ಬಂದಿಗಳಾದ ಪುಂಡಲಿಕ ಶೆಂಡೂರೆ, ಮಹಾಂತೇಶ ಘೋರೆ​‍್ಡ. ಗ್ರಾಮಕಾಯಕ ಮಿತ್ರ ಸುನೀತಾ ಸಂಗೋಟೆ, ಗ್ರಾಮದ ಮಹಿಳಾ ಸ್ವ ಸಹಾಯ ಸಂಘ ಮತ್ತು ಆಶಾ, ಅಂಗನವಾಡಿಕಾರ್ಯಕರ್ತೆರು ಉಪಸ್ಥಿತರಿದ್ದರು. 

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಕೆ.ಎ.ಮೋಮಿನ ಮಹಿಳಾ ಉದ್ಯೋಗ ಸಬಲೀಕರಣ ಯೋಜನೆಯಡಿ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿದರು 


ಸುದ್ದಿ ಓದಿ