ರಾಷ್ಟ್ರೀಯ

ಚಲಿಸುವ ಬಸ್ಸಿನಲ್ಲೇ ಮಹಿಳೆಯ ಮೇಲೆ ಅತ್ಯಾಚಾರ

ಚಲಿಸುವ  ಬಸ್ಸಿನಲ್ಲೇ  ಮಹಿಳೆಯ ಮೇಲೆ   ಅತ್ಯಾಚಾರ

ಲಕ್ನೋ, ಆಗಸ್ಟ್ 30: ಬಸ್ಸಿನಲ್ಲಿ  ಯುಪಿಯಿಂದ ದೆಹಲಿಗೆ ಬರುತ್ತಿದ್ದ ಸಮಯದಲ್ಲಿ  ಮಹಿಳೆಯ ಮೇಲೆ   ಅತ್ಯಾಚಾರವೆಸಗಿದ ಅಮಾನವೀಯ ಘಟನೆ ವರದಿಯಾಗಿದೆ.

 

ದೆಹಲಿಯ ನಿರ್ಭಯ ಪ್ರಕರಣ ಮರುಕಳಿಸುವ ಘಟನೆ ಇದಾಗಿದೆ.   ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದ ಡೀಲಕ್ಸ್  ಬಸ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

 

40 ಪ್ರಯಾಣಿಕರಿದ್ದ ಡೀಲಕ್ಸ್ ಡಬಲ್ ಡಕ್ಕರ್ ಬಸ್ ನಲ್ಲಿ ಚಾಲಕನ ಕ್ಯಾಬಿನ್ ಹಿಂಭಾಗದಲ್ಲೇ ಕುಳಿತಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಮಥುರಾದ ಮಂತ್ ಟೋಲ್ ಗೇಟ್ ಬಳಿ ಬಸ್ ಆಗಮಿಸುತ್ತಿದ್ದಂತೆ ಮಹಿಳೆಯು ಬಸ್ ನಲ್ಲಿದ್ದ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

 

ವೈದ್ಯಕೀಯ ತಪಾಸಣೆ ನಂತರದ ಮಹಿಳೆಯನ್ನು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ನಿವಾಸಕ್ಕೆ ಕಳುಹಿಸಲಾಯಿತು. ಪ್ರರರಣಕ್ಕೆ ಸಂಬಂದಿಸಿದಂತೆ  ಬಸ್ ಕ್ಲೀನರ್ ಮತ್ತು ಕಂಡೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸುದ್ದಿ ಓದಿ