ಹೊಸಪೇಟೆ

ಮಹಿಳೆ ಕಾಣೆ: ಪ್ರಕರಣ ದಾಖಲು

ಮಹಿಳೆ ಕಾಣೆ: ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ) 17: ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ 2ನೇ ವಾರ್ಡ್ ಚಪ್ಪರದಹಳ್ಳಿ ನಿವಾಸಿಯಾದ 20ವರ್ಷದ ತಾಯಮ್ಮ ಎಂಬ ಮಹಿಳೆ  ಏ. 14ರಂದು ಕಾಣೆಯಾಗಿರುವ ಕುರಿತು  ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ  ಎಂದು ಕಮಲಾಪುರ ಪೊಲೀಸ್ ಠಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಹಿಳೆಯ ಚಹರೆ ಗುರುತು: 5ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಬಲಗೈ ರಟ್ಟೆ ಮೇಲೆ ಎಸ್ ಆಕಾರದ ಹಚ್ಚೆ ಇರುತ್ತದೆ, ಕೆಂಪು ಬಣ್ಣದ ಚೂಡಿದಾರದ ಟಾಪ್ ಬಿಳಿ ಬಣ್ಣದ ಚೂಡಿದಾರದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ವೇಲು ಧರಿಸಿರುತ್ತಾರೆ.ಈ ಮೇಲ್ಕಂಡ ಮಹಿಳೆಯ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂ. ಸಂಖ್ಯೆ 100ಕ್ಕೆ ಅಥವಾ ಡಿ.ಎಸ್.ಪಿ.ಕಚೇರಿ ಬಳ್ಳಾರಿ: 08392-258300, ಸಿ.ಪಿ.ಐ. ಕಂಪ್ಲಿ: 08394-251599, ಪಿ.ಎಸ್.ಐ.ಕಮಲಾಪುರ: 08394-241240-ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.


ಸುದ್ದಿ ಓದಿ