ರಾಷ್ಟ್ರೀಯ

ರಾಷ್ಟ್ರಪತಿ ಹುಟ್ಟುಹಬ್ಬ: ಶುಭ ಹಾರೈಸಿದ ಪ್ರಧಾನಿ, ಉಪರಾಷ್ಟ್ರಪತಿ

ರಾಷ್ಟ್ರಪತಿ ಹುಟ್ಟುಹಬ್ಬ: ಶುಭ ಹಾರೈಸಿದ ಪ್ರಧಾನಿ, ಉಪರಾಷ್ಟ್ರಪತಿ

ನವದೆಹಲಿ, ಅಕ್ಟೋಬರ್ 1: ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್ ಅವರ 75 ನೇ ಹುಟ್ಟುಹಬ್ಬದ ಅಂಗವಾಗಿ  ಪ್ರಧಾನಿ ನರೇಂದ್ರ ಮೋದಿ   ಗುರುವಾರ ಶುಭಾಶಯ ಕೋರಿದ್ದಾರೆ. 

ಅವರ ಶ್ರೀಮಂತ ಒಳನೋಟ,  ತಿಳುವಳಿಕೆ ರಾಷ್ಟ್ರಕ್ಕೆ ದೊಡ್ಡ ಆಸ್ತಿ ಎಂದು ಟ್ವೀಟರ್ ಮೂಲಕ  ಅಭಿನಂದಿಸಿದ್ದಾರೆ. 

ರಾಷ್ಟ್ರಪತಿ ಕೋವಿಂದ್  1945 ರಲ್ಲಿ ಉತ್ತರ ಪ್ರದೇಶದ ಕಾನ್ಪುರದ ಪರಾಂಖ್ ಗ್ರಾಮದಲ್ಲಿ ಜನಿಸಿದರು. ಅವರು ಜುಲೈ 25, 2017 ರಂದು  ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

"ರಾಷ್ಟ್ರಪತಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು.  ದುರ್ಬಲರಿಗೆ ಸೇವೆ ಸಲ್ಲಿಸುವಲ್ಲಿ  ಅತ್ಯಂತ ಸಹಾನುಭೂತಿ ಹೊಂದಿದ್ದು ದೇವರು ಅವರಿಗೆ  ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ  ಎಂದು ಪ್ರಾರ್ಥಿಸುವುದಾಗಿ  ಪಿಎಂ ಮೋದಿ ಟ್ವೀಟ್ ನಲ್ಲಿ  ಹೇಳಿದ್ದಾರೆ. 

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು  ಹಾಗೂ  ಅನೇಕ ರಾಜಕೀಯ ಗಣ್ಯರು ರಾಷ್ಟ್ರಪತಿಯವರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.


ಸುದ್ದಿ ಓದಿ