ರಾಷ್ಟ್ರೀಯ

ಕೋವಿಡ್ ಸೋಂಕು : ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಶೀಘ್ರ ಚೇತರಿಕೆಗೆ ಹಾರೈಕೆ

ಕೋವಿಡ್ ಸೋಂಕು : ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಶೀಘ್ರ ಚೇತರಿಕೆಗೆ ಹಾರೈಕೆ

ಕೋಲ್ಕತಾ, ಸೆ 30: ಕೊರೋನಾ ಸೋಂಕಿಗೆ ಗುರಿಯಾಗಿರುವ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಶೀಘ್ರ ಗುಣಮುಖರಾಗುವಂತೆ ಪಶ್ಚಿಮಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಹಾರೈಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲರು, "ಖಂಡಿತವಾಗಿಯೂ ಕೋವಿಡ್ -19 ಜತೆಗಿನ ಸಮರವನ್ನು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಗೆಲ್ಲುತ್ತಾರೆ ಮತ್ತು ಸಮಾಜದ ಹಾಗೂ ರಾಷ್ಟ್ರದ ಸುಧಾರಣೆಗಾಗಿ ಅವರ ಅನುಕರಣೀಯ ಪ್ರೇರಕ, ಸ್ಪೂರ್ತಿದಾಯಕ ಕೊಡುಗೆಗಳೊಂದಿಗೆ ಮುಂದುವರಿಯುತ್ತಾರೆ" ಎಂದು ಹೇಳಿದ್ದಾರೆ. 

ಉಪ ರಾಷ್ಟ್ರಪತಿಯವರು ಮಂಗಳವಾರ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದರು.  ಫಲಿತಾಂಶವು ಧನಾತ್ಮಕವಾಗಿದೆ.  ಆದಾಗ್ಯೂ, ಸೋಂಕು ಲಕ್ಷಣರಹಿತವಾಗಿದ್ದು ಉತ್ತಮ ಆರೋಗ್ಯ ಹೊಂದಿದ್ದಾರೆ. ಹಾಗೂ ಮನೆಯಲ್ಲಿಯೇ ಸಂಪರ್ಕತಡೆ ಹೊಂದುವಂತೆ ಸೂಚಿಸಲಾಗಿದೆ.

ಸುದ್ದಿ ಓದಿ