ಬೈಲಹೊಂಗಲ

ಮಂಗಳ ಅಂಗಡಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ: ಯತ್ನಾಳ

ಮಂಗಳ ಅಂಗಡಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ: ಯತ್ನಾಳ

ಬೈಲಹೊಂಗಲ 10:  ದೇಶದ ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದ  ಬಲಿಷಟ್ಟ ಬಿಜೆಪಿ ಸರಕಾರ ಭಾರತ ದೇಶವನ್ನು ಜಗತ್ತಿನಲ್ಲಿ ಉನ್ನತ ಸ್ಥಾನದಲ್ಲಿಟ್ಟಿರುವದರಿಂದ ಮೋದಿಯವರು ಕೈ ಬಲಪಡಿಸಲು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಸುರೇಶ್ ಅಂಗಡಿ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮಾಜಿ ಕೇಂದ್ರ ರೈಲ್ವೆ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಬೈಲಹೊಂಗಲ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ದೇಶದ ಸುರಕ್ಷತೆಯಲ್ಲಿ ದಿಟ್ಟ ನಿಲುವನ್ನು ತಾಳಿರುವ ಆಂತರಿಕ ಭಯೋತ್ಪಾದನೆಯನ್ನು ಸಂಪೂರ್ಣ ಹತೋಟಿಗೆ ತಂದು, ಪ್ರಖÀ ಹಿಂದುತ್ವವಾದದಿಂದ ದೇಶವಾಸಿಗಳು ನೆಮ್ಮದಿಯ ಜೀವನಕ್ಕೆ ಶ್ರೀಕಾರ ಹಾಕಿ ಶತಮಾನಗಳ ಸಮಸ್ಯೆಗೆ ತಿಲಾಂಜಲಿಯನ್ನಿಟ್ಟು ಶಿರಾಮ ಮಂದಿರಕ್ಕೆ ಶಿಲನ್ಯಾಸ ಮಾಡಿದ

   ನಮ್ಮೆಲ್ಲರ ನಾಯಕ ಮೋದಿಜಿಯವರ ಕಾರ್ಯಕ್ಷಮತೆಯನ್ನು ನೋಡಿ ಮತದಾರರು ಬಿಜೆಪಿಯತ್ತ ಒಲವು ಮಾಡುತ್ತಿದ್ದಾರೆ. ಬೆಳಗಾವಿ ಸುಸಂಸ್ಕೃತ  ಜಿಲ್ಲೆಯಾಗಿದ್ದು ಇಲ್ಲಿಯ ಪ್ರಬುದ್ಧ ಮತದಾರರು ಯಾವುದೇ ಕಾರಣಕ್ಕೂ ಆಸೆ, ಆಮಿಷ್ಗ ಳಿಗೆ ಒಳಗಾಗದೆ ಹಾಗೂ ದಬ್ಬಾಳಿಕೆಯನ್ನು ಮುಂದಿಟ್ಟುಕೊಂಡು ಗೆಲುವು ಸಾಧಿಸಲು ಹೊರಟಿರುವ ಕಾಂಗ್ರೆಸ್ ಅಭ್ಯರ್ಥಿಗೆ ಕನಸು ನನಸಾಗದು ಕಾಂಗ್ರೆಸ್ ಸೋಲಿಸಲು ಜನ ಹಠ ತೊಟ್ಟಿದ್ದಾರೆ. ನಾನು ಸಹಿತ ಕೇಂದ್ರದಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದರು ಸುರೇಶ್ ಅಂಗಡಿ ಅವರು ಒಂದೂವರೆ ವμರ್Àದಲ್ಲಿ ನನಗಿಂತ 100 ಪಟ್ಟು ಹೆಚ್ಚು ಕೆಲಸ ಮಾಡಿದ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು ದೇಶ ಇಂದು ಸಾಕμÀ್ಟು ಬದಲಾವಣೆ ಕಾಣುತ್ತಿದೆ. ಭ್ರμÁ್ಟಚಾರದಲ್ಲಿ ಮುಳುಗಿ ಹೋಗಿದ್ದ ಕಾಂಗ್ರೆಸ್ ಹಗಲುಗನಸು ಕಾಣುತ್ತಿರುವ ಸತೀಶ್ ಜಾರಕಿಹೊಳಿಯವರ ಸೋಲು ಖಚಿತ. ಅವರು ರಾಜ್ಯದಲ್ಲಿ ಶಾಸಕರಾಗಿ ಇರುವುದೇ ಒಳ್ಳೆಯದು  ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅವರಿಗೆ ಏನು ಕೆಲಸವಿಲ್ಲ ಏನೇ ಮಾಡುವುದಿದ್ದರೂ ಕ್ಷೇತ್ರದಲ್ಲಿ ಮಾಡಲಿ ಎಂದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಕರ್ನಾಟಕ ರಾಜ್ಯಕ್ಕೆ 57ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಸುರೇಶ್ ಅಂಗಡಿ ಅವರ ಅಭಿವೃದ್ಧಿ ಪರ ಕನಸು ನನಸಾಗಲು ಬಿಜೆಪಿ ಪರ ಮತಗಳನ್ನು ನೀಡಿ ಮಂಗಳ ಸುರೇಶ್ ಅಂಗಡಿ ಅವರನ್ನು ಆಯ್ಕೆ ಮಾಡಲು ಮತದಾರರಲ್ಲಿ ಕಳೆದ ಎರಡು ದಿನದಿಂದ ವಿನಂತಿಸುತ್ತಿದ್ದೇನೆ ಎಂದು ಹೇಳಿದರು.  ಬಿಜೆಪಿ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ, ಪುರಸಭೆ ಸದಸ್ಯ ಮಹೇಶ ಹರಕುಣಿ ಮುರಿಗೆಪ್ಪ ಗುಂಡ್ಲೂರು ವೀರೇಶ್ ಹಲ್ಕಿ ಇದ್ದರು.

ಸುದ್ದಿ ಓದಿ