ಸೌಂದತ್ತಿ

ಜನರ ಬೇಡಿಕೆಗಳಿಗೆ ಸ್ಪಂದಿಸುತ್ತೇನೆ: ಶಾಸಕ ವಿಶ್ವಾಸ ವೈದ್ಯ

ಜನರ ಬೇಡಿಕೆಗಳಿಗೆ ಸ್ಪಂದಿಸುತ್ತೇನೆ: ಶಾಸಕ ವಿಶ್ವಾಸ ವೈದ್ಯ

ಲೋಕದರ್ಶನ ವರದಿ

ಸವದತ್ತಿ 31: ಮತಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಶಾಸಕನನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ನಾನು ಚಿರ ಋಣಿಯಾಗಿದ್ದು, ಜನರ ಬೇಡಿಕೆಗಳಿಗೆ ಸ್ಪಂದಿನೆ ನೀಡುವ ಮೂಲಕ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸ್ಥಳೀಯ ಯಲ್ಲಮ್ಮಾ ಪುರಸಭೆಯ ಸಭಾಭವನದಲ್ಲಿ ಹಮ್ಮಿಕೊಂಡ ಪೌರ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಈಗ ಮಾಡುತ್ತಿರುವ ಪೌರ ಸನ್ಮಾನದ ಖುಷಿಗಿಂತ ಪಟ್ಟಣದ ಜನರಿಗೆ ಬರುವಂತ ದಿನಗಳಲ್ಲಿ ನಿರಂತರ 24/7 ಕುಡಿಯುವ ನೀರು ಯಾವಾಗ ಪ್ರಾರಂಭವಾಗುತ್ತದೆಯೇ ಅಂದು ನಾನು ಇದಕ್ಕಿಂತ ಹೆಚ್ಚು ಖುಷಿ ಪಡುತ್ತೇನೆ ಎಂದರು. ಪಟ್ಟಣದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆಯ ಪಾತ್ರ ಬಹುಮುಖ್ಯವಾಗಿದ್ದು, ಅಧಿಕಾರಿಗಳು ಅದನ್ನು ಅರಿತುಕೊಂಡು ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಜವಾಬ್ದಾರಿ ವಹಿಸಬೇಕೆಂದರು.

ಪ್ರತಿಯೊಂದು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಂತ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಿದ್ದು, ನಾನು ವ್ಯವಸ್ಥಿತವಾದ ಕೆಲಸಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತೇನೆ ಎಂದರು. ಅಂದುಕೊಂಡಂತೆ ಇಲಾಖಾವಾರು ಕೆಲಸಗಳಲ್ಲಿ ಸಿಬ್ಬಂದಿಯವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದಲ್ಲಿ ಅನಿವಾರ್ಯವಾಗಿ ಅವರ ಮೇಲೆ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂದರು.

ಸುಗಮ ಮತ್ತು ಸುವ್ಯವಸ್ಥಿತ ಆಡಳಿತಕ್ಕೆ ಎಲ್ಲ ಇಲಾಖೆಯ ಸಿಬ್ಬಂದಿಯವರ ಸಹಕಾರ ಬಹುಮುಖ್ಯವಾಗಿದ್ದು, ಆಡಳಿತಾತ್ಮಕ ವಿಷಯದಲ್ಲಿ ಜನರಿಗೆ ತೊಂದರೆಯಾಗದಂತೆ ಸುರಳಿತ ಆಡಳಿತಕ್ಕೆ ಆದ್ಯತೆ ನೀಡುವದಾಗಿ ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಹಾಗೂ ಉಪಾಧ್ಯಕ್ಷ ದೀಪಕ ಜಾನ್ವೇಕರ ಮಾತನಾಡಿ, ಪಟ್ಟಣದಲ್ಲಿ ನೂತನ ತರಕಾರಿ ಮಾರುಕಟ್ಟೆಯನ್ನು ನಿಮರ್ಿಸಲಾಗಿದ್ದು, ಅಲ್ಲಿಯೇ ತರಕಾರಿ ವ್ಯಾಪಾರ ಮುಂದುವರೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು. ಪಟ್ಟಣದಲ್ಲಿ ಮಾಸ್ಟರ್ ಪ್ಲಾನ್ ಜಾರಿಗೆ ತರುವ ಮೂಲಕ ಪಟ್ಟಣದೊಳಗಿನ ರಸ್ತೆಗಳ ಅಗಲಿಕರಣಕ್ಕೆ ಅವಕಾಶ ಕಲ್ಪಿಸಬೇಕೆಂದರು. ಈಗಿರುವಂತ ಪುರಸಭೆಯನ್ನು ಉನ್ನತದರ್ಜೆಗೇರಿಸಿ ನಗರಸಭೆಯನ್ನಾಗಿ ಮಾಡಲು ಶಾಸಕರು ವಿಶೇಷ ಆಸಕ್ತಿ ತೋರಬೇಕೆಂದು ಮನವಿಸಿದರು.

ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಶಾಸಕರ ಗಮನಕ್ಕೆ ತಂದರು.

ಪುರಸಭೆ ಸದಸ್ಯರಾದ ಶಿವಾನಂದ ಹೂಗಾರ, ಮಲ್ಲಿಕಾರ್ಜುನ ಪುರದಗುಡಿ, ಯಲ್ಲಪ್ಪ ರುದ್ರಾಕ್ಷಿ, ಅಜರ್ುನ ಅಮ್ಮೋಜಿ, ಸಂಗಮೇಶ ಹಾದಿಮನಿ, ಮೌಲಾಸಾಬ ತಬ್ಬಲಜಿ, ಬಾಪುಸಾಬ ಚೂರಿಖಾನ, ಐ.ಪಿ.ಪಾಟೀಲ, ಪುರಸಭೆ ಮಾಜಿ ಸದಸ್ಯ ಚಂದ್ರಣ್ಣ ಶಾಮರಾಯನವರ ಸೇರಿದಂತೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ