ರೈತರ, ದನ-ಕರುಗಳ ನೀರಿನ ಬವಣೆ ನಿಗಿಸುವವರೇ ಶಾಸಕ ನಾಡಗೌಡರು.?
ಸ್ಟೋರಿ ಸಚಿನ ಚಲವಾದಿ .
ಮುದ್ದೇಬಿಹಾಳ 10: ತಾಲೂಕಿನಲ್ಲಿ ಈಗಾಗಲೇ ಸಂಪೂರ್ಣವಾಗಿ ಮುಂಗಾರು ಕೈಕೊಟ್ಟಿದ್ದು, ರೈತಾಪಿ ಜನರಿಗೆ ಅಲ್ಪಸ್ವಲ್ಪ ಆಸರೆಯಾಗಿದ್ದ ಕೆರೆ, ಬಾಂದರಗಳು, ಹಳ್ಳಗಳು ನೀರು ಇಲ್ಲದೇ ಬಣದಾಗಿದೆ. ಬಾಂದಾರು, ಕರೆಗೆ ನೀರು ತುಂಬಿಸುವ ಚಿಮ್ಮಲಗಿ ಏತನೀರಾವರಿ ಕಾಲುವೆಗೆ ಸ್ಥಳೀಯ ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡರು ನೀರು ಹರಿಸಿಕೊಂಡು ಬಂದು ರೈತರ, ಧನ-ಕರುಗಳ ಬವಣೆ ನಿಗಿಸುವರೇ ಎನ್ನುವಾಗಿದೆ.
ಹೌದು.. ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಮಳೆರಾಯನ ಹಿನ್ನಡೆಯಿಂದ 16 ಕೆರೆಗಳು, ಬಾಂದಾರಗಳು, ಹಳ್ಳ ಕೊಳ್ಳಗಳು ಸಂಪೂರ್ಣವಾಗಿ ಬರಿದಾಗಿವೆ. ಇದರಿಂದ ಪಕ್ಷಿಗಳು, ಧನ-ಕರು, ಕುರಿಗಳಿಗೆ ನೀರು ಇಲ್ಲದಂತಾಗಿದ್ದು, ಅದೆಷ್ಟೋ ಮೀನುಗಳು ನೀರಲ್ಲದೇ ಸಾವೀಗೀಡಾಗಿವೆ. ಮೀನುಗಳ ಸಂಕಷ್ಠ ಕೇಳುವರಾರು ಎಂಬ ಪ್ರಶ್ನೆ ಎದುರಾಗಿದೆ.
ಪ್ರತಿವರ್ಷ ವಾಡಿಕೆಯಂತೆ ಜೂನ್ ತಿಂಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದ. ಆದರೆ, ಜುಲೈ ಮೊದಲ ವಾರ ಮುಗಿದರೂ ಈವರೆಗೆ ಹಳ್ಳ ಕೊಳ್ಳಕ್ಕೆ ನೀರು ಬರುವಂತಹ ಮಳೆಯಾಗಿಲ್ಲ. ಇದರಿಂದ ಕೃಷಿಯನ್ನೆ ನಂಬಿದ ಅದಷ್ಟೋ ರೈತರು ಮಳೆಗಾಗಿ ದಿನಂಪ್ರತಿ ಮುಗಿಲು ನೋಡುವಂತಾಗಿದೆ. ಇನ್ನೂ ವಾಣಿಜ್ಯ ಬೆಳೆಹಾಕಿದ ರೈತರ ಗೋಳು ಇದೆ ರೀತಿಯಾಗಿದೆ.
ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಕೆರೆ-ಬಾಂದಾರುಗಳ ನೀರು ನಂಬಿ ರೈತರು ಕಬ್ಬು ಹಾಕಲಾಗಿದೆ. ಒಂದು ಕಡೆ ಮಳೆರಾಯ ಕೈಕೊಟ್ಟರೆ, ಇನ್ನೊಂದು ಕಡೆ ಕೆರೆಗಳು ಕೂಡ ಒಣಗಿವೆ. ಚಿಮ್ಮಲಗಿ ಕಾಲುವೆ ಮೂಲಕ ಕೆರೆ ತುಂಬಿಸುವ ಯೋಜನೆ ಕೂಡ ಸರಿಯಾಗಿ ಫಲಿಸುತ್ತಿಲ್ಲ. ಇದರಿಂದ ಕಬ್ಬು ಬೆಳೆಯುತ್ತಿರುವ ರೈತರು ಅಕ್ಷರಶಃ ಅಪಾಯಕ್ಕೆ ಸಿಲುಕಿದಂತಾಗಿದೆ. .
ಚಿಮ್ಮಲಗಿ ಏತನೀರಾವರಿ ಕಾಲುವೆ ಮೂಲಕ ಕೆರೆಗಳು ತುಂಬಿಸುವ ಯೋಜನೆ ನಂಬಿ 6 ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದೇನೆ. ಈವರೆಗೂ 2 ಲಕ್ಷ ರೂ ಖರ್ಚು ಮಾಡಿದ್ದೇನೆ. ಕಳೆದ 1 ತಿಂಗಳಿನಿಂದ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ಮಳೆ ಕೂಡ ಆಗುತ್ತಿಲ್ಲ. ವಾಣಿಜ್ಯ ಬೆಳೆ ಬೆಳೆದರೂ ಈ ಬಾರಿ ಇಳುವರಿ ಬರದಿದ್ದರೆ ಮತ್ತೆ ಸಾಲ ಮಾಡಬೇಕಾಗುತ್ತದೆ.
ಕವಡಿಮಟ್ಟಿ ಗ್ರಾಮದ ರೈತ ಸಿದ್ರಾಮಪ್ಪ ಪೂಜಾರಿ ಹೇಳಿದರು.
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವಧಿಯಿಂದ ಆರಂಭವಾಗಿದ್ದು, ಈವೆರೆಗೂ ಯಾವುದೇ ಸಂಕಷ್ಠ ಎದುರಾಗಿರಲಿಲ್ಲ. ಈ ಬಾರಿ ಮಳೆಯ ಅಭಾವದಿಂದ ತಾಲೂಕಿನಲ್ಲಿ ಬರದ ಛಾಯೆ ಎದುರಾಗಿದ್ದು, ಇದೊಮ್ಮೆ ಕಾಲುವೆಗಳಿಗೆ ಶಾಸಕ ನಾಡಗೌಡರು ನೀರು ಹರಿಸಿಕೊಂಡು ಬಂದರೆ ನಾವು ಹಾಕಿದ ಬೆಳೆಗಳು ಕೈಗಟುಕುತ್ತವೆ ಎನ್ನುತ್ತಿದ್ದಾರೆ ತಾಲೂಕಿನ ರೈತರು.
ಈಗಾಗಲೇ ಮಹಾರಾಷ್ಟೊದ ಪಶ್ಚಿಮಘಟ್ಟದಲ್ಲಿ ಮಳೆ ಆಗುತ್ತಿದ್ದು, ಆಲಮಟ್ಟಿ ಡ್ಯಾಂ ನಲ್ಲಿ ನೀರು ಸಂಗ್ರಹ ಆಗುತ್ತಿದೆ. ಮುಂಗಾರು ಭಿತ್ತನೆ ಕಾರ್ಯ ಮುಗಿದಿದ್ದು, ಇನ್ನೂ ಒಂದುವಾರಗಳ ಕಾಲ ತೊಗರಿ ಭಿತ್ತನೆ ಮಾಡಬಹುದಾಗಿದೆ. ಸ್ಥಳೀಯ ಶಾಸಕರು ಮುತುರ್ವಜಿ ವಹಿಸಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಧನ-ಕರುಗಳ ನೀರಿನ ದಾಹ ನೀಗಿಸಬೇಕಿದೆ.
ರೈತ ಜಗದೀಶ್ ಇಣಚಗಲ್ ಹೇಳಿದರು.