ಭಕ್ತಿ, ಪ್ರೀತಿ ಎಲ್ಲಿರುತ್ತದೆ ಅಲ್ಲಿ ಸಂಪತ್ತು ಶಾಶ್ವತ :ಶಾಂತಭೀಷ್ಮಚೌಡಯ್ಯ ಶ್ರೀ
ಶಿಗ್ಗಾವಿ: ಮೋಸ, ದ್ರೋಹ ಇದ್ದಲ್ಲಿ ಸಂಪತ್ತು ಇರುವುದಿಲ್ಲ, ಭಕ್ತಿ, ಪ್ರೀತಿ ಎಲ್ಲಿರುತ್ತದೆ ಅಲ್ಲಿ ಸಂಪತ್ತು ಶಾಶ್ವತವಾಗಿರುತ್ತದೆ ಎಂದು ನರಸಿಪೂರದ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿಗ್ಗಾವಿ ಜನತೆ ಪ್ರೀತಿ-ಭಕ್ತಿಯಿಂದ ಮಾಡುತ್ತಿರುವದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಕಾರ್ಯ ಶ್ಲಾಘನೀಯ, ಜಾತ್ರೆ, ಉತ್ಸವಗಳು ನಿರಂತರವಾಗಿ ಸಾಗಬೇಕು, ಅಂದಾಗ ಸಮಾಜದಅಂಧಕಾರ ಕಳೆದು ಬೆಳಕು ಮೂಡಲಿಕ್ಕೆ ಸಾಧ್ಯಎಂದರು.
ಪಂಡರಾಪೂರದ ಪ್ರಭಾಕರ ಭೊಧಲೇ ಮಹಾರಾಜರು ಸಮ್ಮುಖವಹಿಸಿ ಮಾತನಾಡಿ ಸಂಸ್ಕೃತಿ, ಆಧ್ಯಾತ್ಮಿಕ ಮತ್ತು ಧಾರ್ಮಿಕತೆಯ ಸಂಗಮವೇ ಜಾತ್ರಾಮಹೋತ್ಸವ, ಶ್ರದ್ಧೆ, ಭಾವ, ವಿಶ್ವಾಸದಿಂದ ಮಾಡುವ ಕಾರ್ಯ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತದೆ, ನಿರ್ಮಲ ಮನದಿಂದ ದೇವರಿಗೆ ಭಕ್ತಿರ್ಪಣೆ ಮಾಡಬೇಕು. ಅಂದಾಗ ಬದುಕು ಸತ್ಕಾರ್ಯವಾಗುತ್ತದೆ, ಇಂದಿನ ವ್ಯವಸ್ಥೆಯಲ್ಲಿ ಸಂಸ್ಕಾರಹೀನ ಶಿಕ್ಷಣ ಬಹಳಷ್ಟಿದೆ. ಅದು ಪ್ರಯೋಜನಕ್ಕೆ ಬಾರದು, ಆದ್ದರಿಂದ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆಎಂದರು.
ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ಖಾದ್ರಿ ಮಾತನಾಡಿ ಗ್ರಾಮದೇವಿ ಜಾತ್ರಾ ಮಹೋತ್ಸವ ನಾಡಿನಾದ್ಯಂತ ವೈಭವ ಸಾರಿದೆ, ದೇವಿ ಆಶೀರ್ವಾದಿಂದ ಕರೊನಾ ಸಂಕಷ್ಟದ ಸಂದಿಗ್ಧ ಸಮಯ ಮತ್ತು ರೋಗಬಾಧೆ ಎಂದೆಂದಿಗೂ ಬಾಧಿಸದಿರಲಿ, ಶಿಗ್ಗಾವಿ ಇದು ಶರಣರ ನಾಡಾಗಿದ್ದು, ಸಂತ ಶಿಶುನಾಳ ಶರೀಫರು, ಹುಲಗೂರು ಖಾದರ ಲಿಂಗರ ಪಾದ ಸ್ಪರ್ಶದಿಂದ ಪುಣ್ಯಭೂಮಿಯಾಗಿದೆ, ಶ್ರೀದೇವಿ ಎಲ್ಲರಿಗೂ ಒಳಿತನ್ನುಂಟು ಮಾಡಿ, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ನೀಡಲಿ ಎಂದರು.
ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ ಪರಸ್ಪರ ದ್ವೇಷ, ಅಸೂಹೆ, ಸ್ವಸ್ಥ ಸಮಾಜವನ್ನು ಕಂಡು ಭಗವಂತನು ಮೂಕವಿಸ್ಮಿತ ನಾಗಿದ್ದಾನೆ, ಅತಿವೃಷ್ಠಿಯಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣನಾಗುತ್ತಿದ್ದಾನೆ. ಆದ್ದರಿಂದದೇಶ ಕಾಯುವ ಯೋಧ ಮತ್ತುಅನ್ನ ನೀಡುವ ರೈತನನ್ನು ಗೌರವದಿಂದ ಕಾಣಬೇಕು, ಅನ್ನದಾತರಿಗೆ ಉತ್ತಮ ಮಳೆ, ಬೆಳೆ ನೀಡಿಅವರ ಸಮೃದ್ಧ ಬದುಕಿಗೆ ಪ್ರಾರ್ಥಿಸುತ್ತೇನೆಎಂದರು.
ಕಾರ್ಯಕ್ರಮದಲ್ಲಿ ಸುಜನಿ ನಾಟ್ಯ ಶಾಲೆ, ಸಂಸ್ಕೃತಿ ಶಾಲೆ, ಉನ್ನತಿಕಾನ್ವೆಂಟ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಹರ್ಲಾಪೂರದ ಶಂಬಯ್ಯ ಹಿರೇಮಠ ಕಲಾತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು, ಅದ್ಯಕ್ಷತೆಯನ್ನು ಶಿವಪ್ಪ ಚಿನ್ನಪ್ಪನವರ ವಹಿಸಿದ್ದರು, ಅಶೋಕ ಕುರ್ಷಾಪೂರ, ನಿಂಗರಾಜ ಕುನ್ನೂರ, ಮಂಜುನಾಥ ಯಲಿಗಾರ, ಸುರೇಶ ಮುಳೆ, ಸೇರಿದಂತೆ ಗಣ್ಯರು, ಮುಖಂಡರು ಇದ್ದರು.