ಬಡವರ ನಿರ್ಗತಿಕರ ಆಶಾಕಿರಣ ಶಶಿಧರ್ ಅವರಿಗೆ ಸ್ವಾಗತ
ಶಿಗ್ಗಾವಿ : ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರೆ್ಡಯಾದ ಸಮಾಜಸೇವಕ ಹಾಗೂ ಬಡವರ ನಿರ್ಗತಿಕರ ಆಶಾಕಿರಣ ಶಶಿಧರ್ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದ ಪಕ್ಷದ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ್ ಕಾಂಗ್ರೆಸ್ ಪಕ್ಷದತತ್ವ ಸಿದ್ಧಾಂತ ಒಪ್ಪಿ ಹಾವೇರಿಯಲ್ಲಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷವನ್ನು ಸೇರಿದ ಮತಕ್ಷೇತ್ರದ ಬಡವರ ಆಶಾಕಿರಣ ಸಮಾಜ ಸೇವಕ ಶಶಿಧರವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಮಾತನಾಡಿದ ಪಕ್ಷದತಾಲೂಕ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಸರ್ವಧರ್ಮದ ಸಾಮರಸ್ಯ ಹಾಗೂ ಎಲ್ಲಾ ಸಮುದಾಯಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಯಾಗಿರುವುದು ಸಂತೋಷತಂದಿದೆ ಮತಕ್ಷೇತ್ರ ಹಾಗೂ ರಾಜ್ಯದಲ್ಲಿ ಸ್ವಹಿತಾಶಕ್ತಿ ರಾಜಕಾರಣದ ವ್ಯಕ್ತಿ ಆಡಳಿತ ಮಾಡುತ್ತಿದ್ದು ಸುಳ್ಳು ಭರವಸೆಗಳು ಹಾಗೂ ಅಧಿಕಾರದ ಅಹಂನಿಂದ ಜನಸಾಮಾನ್ಯರ ಕಾಳಜಿಯನ್ನು ಮರೆತಿದ್ದು ಕಾಂಗ್ರೆಸ್ ಪಕ್ಷಕ್ಕೆ ಪಕ್ಷವು ಸೂಚಿಸುವ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಮಾಡಿ ವರ್ಗದಜನರಿಗೆ ನ್ಯಾಯಕೊಡುವ ಕೆಲಸ ನಮ್ಮದಾಗಬೇಕು ಶಶಿಧರ್ ಅವರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.