ವೆಬ್‍ಸೈಟ್ ಲಾಂಚಿಂಗ್ ಪ್ರೋಗ್ರಾಮ ಕಾರ್ಯಕ್ರಮ
ಹೊಸಪೇಟೆ 16: ವಿಜಯನಗರ ಕ್ಷೇತ್ರದ ಚಿತ್ತವಾಡ್ಗಿಯ ಹಳೆ ಅಮರಾವತಿ ರಸ್ತೆಯಲ್ಲಿರುವ ಆಕಾಶ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ದಿ. 16ರಂದು ಶಾಲೆಯ ವೆಬ್ ಸೈಟ್ ಲಾಂಚಿಂಗ್ ಪ್ರೋಗ್ರಾಮನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ವೆಬ್ ಸೈಟ್ ಉದ್ಘಾಟನಾ ಕಾರ್ಯಕ್ರಮವನ್ನು ಎಲ್ಲಾ ಗಣ್ಯಮಾನ್ಯರು ಸಸಿಗೆ ನೀರುಣಿಸುವುದರ ಮೂಲಕ ಪ್ರಾರಂಭಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಆಕಾಶ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಸಂಸ್ಥಾಪನಾ ಅಧ್ಯಕ್ಷ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಆಕಾಶ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಆಕಾಶ್ ಪಿಯು ಕಾಲೇಜ್ ಪ್ರಾರಂಭದ ಪಯಣ ನಮ್ಮ ತಂದೆ ತಾಯಿಯವರ ಆಶೀರ್ವಾದ ಹಾಗೂ ನನ್ನ ಧರ್ಮಪತ್ನಿಯ ಸ್ಫೂರ್ತಿ ಮತ್ತು ಸಹಕಾರದೊಂದಿಗೆ ಈ ಸಂಸ್ಥೆಯ ಅಡಿಗಲ್ಲು 2019 ಮತ್ತು 2020 ಕೋವಿಡ್ ವರ್ಷವಾದರೂ ನಾವು ಶೈಕ್ಷಣಿಕ ವರ್ಷವೆಂದು ಛಲದಿಂದ ನಮ್ಮ ಶಿಕ್ಷಣ ಸಂಸ್ಥೆಯ ಪಯಣವನ್ನು ಮುಂದುವರೆಸಿ ನಿಮ್ಮ ಮುಂದೆ ಪ್ರಸ್ತುತಪಡಿಸುವ ಸುದೈವ ನನಗೆ ಒದಗಿ ಬಂದಿದೆ.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ವ್ಯಕ್ತಿ ಹುಡಾ ಅಧ್ಯಕ್ಷ ಸಿದ್ಧನಗೌಡ, ಹಾಗೂ ಮಾಜಿ ನಗರಸಭಾ ಸದಸ್ಯ ಅರಳಿ ಕೊಟ್ರಪ್ಪ, ಅಂಬೇಡ್ಕರ್ ಸಂಘದ ಅಧ್ಯಕ್ಷ ವೀರಯ್ಯ ಸ್ವಾಮಿ, ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಚ್ ವಿ.ಶರಣಯ್ಯಸ್ವಾಮಿ ಕಾರ್ಯದರ್ಶಿ ರವಿಶಂಕರ್ ಹಾಗೂ ಬಾರ್ ಅಸೋಸಿಯೇಶನ್ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಹಾಗೂ ಅಂಜುಮನ್ ಖಿದ್ಮತ್ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಶಂಮಶುಲ್ಲಾ ಖಾನ್, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಅಶ್ವಿನಿ ಎಚ್ ಕೊತ್ತಂಬರಿ, ಹಾಗೂ ಕಾರ್ಯದರ್ಶಿ ನಾಜಿಮುದ್ದೀನ್, ಹಾಗೂ ಆಕಾಶ್ ಇಂಟರ್ ನ್ಯಾಷನಲ್ ಪಿ.ಯು ಕಾಲೇಜಿನ ಪ್ರಾಂಶುಪಾಲ ಮಹೇಶ, ಹಾಗೂ ಹೆಚ್. ಒ.ಡಿ ವಿಜಯಕುಮಾರ್, ಹಾಗೂ ಸಿ.ಇ.ಒ ಆಗಿರುವ ವೆಂಕಟೇಶ್, ಹಾಗೂ ಸಂಸ್ಥೆಯ ಡೈರೆಕ್ಟರ್ ಆಗಿರುವ ಆಯೂಬ್ ಖಾನ್, ಆಡಳಿತ ಸಿಬ್ಬಂದಿಗಳಾಗಿರುವ ಶಿರೀಶಾ, ಕ್ಷಮಾ,ಕೆ , ನಫೀಸಾ ಆಜ್ಮಿ ಹಾಗು ಪಾಲಕರು ಪೆÇೀಷಕರು ಸಾರ್ವಜನಿಕರು ಉಪಸ್ಥಿತರಿದ್ದರು.