ಶಿಗ್ಗಾವ್

ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ : ಭರತ್ ಬೊಮ್ಮಾಯಿ

ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ : ಭರತ್ ಬೊಮ್ಮಾಯಿ


ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ : ಭರತ್ ಬೊಮ್ಮಾಯಿ 


ಶಿಗ್ಗಾವಿ 28 :ಉಪ ಚುನಾವಣೆಗೆ ಸರ್ಕಾರ ಇದ್ದಾಗ ಚುನಾವಣೆ ಮಾಡಲು ಸಚಿವರೆಲ್ಲಾ  ಬಂದೇ ಬರುತ್ತಾರೆ. ಅದರೆ, ನವೆಂಬರ್ 23 ರಂದು ಮತದಾನದ ಡಬ್ಬಿ ಓಪನ್ ಮಾಡಿದಾಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು  ಅವರಿಗೆ ಗೊತ್ತಾಗುತ್ತದೆ. ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ ಎಂದು ಶಿಗ್ಗಾವಿ ಸವಣೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಹೇಳಿದ್ದಾರೆ. 

   ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ  ಖುರ್ಸಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ದಿನ ನಿತ್ಯ10 ರಿಂದ 11 ಹಳ್ಳಿಗಳಿಗೆ ಓಡಾಡಿ ಮತಯಾಚನೆ ಮಾಡುತ್ತಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಓಡಾಡುತ್ತಿದ್ದೇನೆ. ನಮ್ಮ ಎಲ್ಲಾ ಕಾರ್ಯಕರ್ತರು, ಹಿರಿಯರು, ಮತದಾರರ ಮನೆಗಳಿಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದೇನೆ ಸಮಯ ಬಹಳ  ಕಡಿಮೆ ಇದೆ. ನನ್ನ ಪರ ನಮ್ಮ ತಂದೆ, ತಾಯಿ ಕೂಡಾ ಪ್ರಚಾರ ಮಾಡುತ್ತಿದಾರೆ.  ಇಡೀ ಕುಟುಂಬ ಪ್ರಚಾರ ಮಾಡುತ್ತಿದೆ ಎಂದರು.  

     ಶಾಸ್ವತ ಗ್ಯಾರಂಟಿ  ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಸ್ವತ ಗ್ಯಾರೆಂಟಿ ಅಂದರೆ  ಈ ಬಾಗಕ್ಕೆ ನೀರು ಕೊಟ್ಟಿದ್ದೇವೆ, ಪ್ರವಾಹ ಬಂದಾಗ 5 ಲಕ್ಷ ರೂಪಾಯಿಯ 15000 ಮನೆಗಳನ್ನು ಜನರಿಗೆ ನೀಡಿದ್ದೇವೆ 5000 ಉದ್ಯೋಗಾವಕಾಶ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ 10000 ಉದ್ಯೋಗ ಸೃಷ್ಟಿ ಮಾಡುತ್ತೇವೆ. ನೀರು, ಮನೆ, ಉದ್ಯೋಗ ಇವು ನಮ್ಮ  ಶಾಸ್ವತ ಗ್ಯಾರಂಟಿ ಈ ಗ್ಯಾರಂಟಿಗಳನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು. 

ಭಾಕ್ಸ ಸುದ್ದಿ : ಶಿಗ್ಗಾವಿ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರ ನಡುವೆ ಕೆಲವು ಸಮಯ ಮಕ್ಕಳ ಜೊತೆ ಭರತ ಬೊಮ್ಮಾಯಿ ಖೋ ಖೋ ಆಡಿದರು. 

    ಎಲ್ಲಾ ಸಮುದಾಯಗಳ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಪ್ರಧಾನಿ ನರೇಂದ್ರ  ಮೋದಿಯವರ ಜಲಜೀವನ ಮಿಷನ್ ಮೂಲಕ ಮನೆ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಒಂದು ಕೊಡ ನೀರಿಗೆ ತಾಯಂದಿರು ನಾಲ್ಕು ಐದು ಕಿ.ಮಿ ನಡೆಯುತ್ತಿದ್ದರು. ಆದರೆ, ಈಗ ಟ್ಯಾಪ್ ಓಪನ್ ಮಾಡಿದರೆ ನೀರು ಬರುತ್ತದೆ. ಕ್ಷೇತ್ರದಲ್ಲಿ ಎಕ್ಸಪೋರ್ಟ್‌, ಶಾಹಿ  ಕಂಪನಿಗಳು ಗಾಮೆಂರ್ಟ್ಸ್‌ ಶುರು ಮಾಡಿವೆ.  ಟೆಕ್ಟೈಲ್ ಪಾರ್ಕ್‌  ಕೂಡಾ ಶುರುವಾಗಲಿದೆ. ನಾವು ಶಾಸ್ವತ ಪರಿಹಾರ ಕೊಟ್ಟಿದ್ದೇವೆ ಇದೆಲ್ಲಾ ಹೆಣ್ ಮಕ್ಕಳಿಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪರಿಣಾಮ  ಏನೂ ಆಗುವುದಿಲ್ಲ ಎಂದು ಹೇಳಿದರು. 


ಸುದ್ದಿ ಓದಿ