ರಾಷ್ಟ್ರೀಯ

ಕೋವಿಡ್ ಮಣಿಸಲು ಕೆಲವೇ ವಾರದಲ್ಲಿ ಲಸಿಕೆ : ಟ್ರಂಪ್ ವಿಶ‍್ವಾಸ

ಕೋವಿಡ್ ಮಣಿಸಲು  ಕೆಲವೇ ವಾರದಲ್ಲಿ ಲಸಿಕೆ  : ಟ್ರಂಪ್ ವಿಶ‍್ವಾಸ

ವಾಷಿಂಗ್ಟನ್,  ಸೆಪ್ಟೆಂಬರ್ 16: ಜಗತ್ತನ್ನು ಬಹಳವಾಗಿ ಕಾಡುತ್ತಿರುವ ಮಾರಕ ಕರೋನ ಸೋಂಕು ನಿವಾರಿಸುವ   ಲಸಿಕೆ ಇನ್ನೂ  ಕೆಲವೇ ವಾರದಲ್ಲಿ ಅಮೆರಿಕದ ಜನತೆಗೆ , ರೋಗಿಗಳ ಚಿಕಿತ್ಸೆಗೆ ದೊರಕಲಿದೆ   ಎಂದು  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಮಹಾಮಾರಿ ಕೊರೊನಾಗೆ ಔಷಧಿ ಯಾವಾಗ ಸಿಗುತ್ತೆ ಎಂಬ ಮಾಧ್ಯಮಗಳ  ಪ್ರಶ್ನೆಗೆ ಉತ್ತರಿಸಿದ ಅವರು ಆಕ್ಸ್ಫರ್ಡ್- ಅಸ್ಟ್ರಾಝೆನೆಕಾ, ಮಾಡೆರ್ನಾ ಹಾಗೂ ಫೀಜರ್ ಸಂಸ್ಥೆಗಳು ಕೊರೊನಾ ಲಸಿಕೆ ಸಿದ್ಧಪಡಿಸುತ್ತಿದ್ದು, ಲಸಿಕೆಯ ಕ್ಲಿನಿಕಲ್ ಪ್ರಯೋಗ ಕೊನೆಯ ಹಂತದಲ್ಲಿದೆ ಎಂದರು.  

ಹೀಗಾಗಿ ಇನ್ನು ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ವಿಶ‍್ವದ  ಜನತೆಯ  ಚಿಕಿತ್ಸೆಗೆ ಲಭ್ಯವಾಗಲಿದೆ ಎಂಬ ಆಶಯವನ್ನು ಟ್ರಂಪ್  ವ್ಯಕ್ತಪಡಿಸಿದ್ದಾರೆ . 


ಸುದ್ದಿ ಓದಿ