ರಾಷ್ಟ್ರೀಯ

ಒಗ್ಗಟ್ಟಾಗಿ ಸೋನಿಯಾ, ರಾಹುಲ್‌ಗಾಂಧಿಯೊಂದಿಗೆ ನಿಲ್ಲಬೇಕು; ಗಿರೀಶ್‌ ಚೋಡಂಕರ್‌

ಒಗ್ಗಟ್ಟಾಗಿ ಸೋನಿಯಾ, ರಾಹುಲ್‌ಗಾಂಧಿಯೊಂದಿಗೆ ನಿಲ್ಲಬೇಕು; ಗಿರೀಶ್‌ ಚೋಡಂಕರ್‌

ಪಣಜಿ,  ಆಗಸ್ಟ್ 24 : ಕಾಂಗ್ರೆಸ್‌ ನಾಯಕರು ಒಗ್ಗಟ್ಟಾಗಿ ನಿಂತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್‌ ಗಾಂಧಿ ಅವರಿಗೆ ಬೆಂಬಲ ನೀಡಬೇಕು ಎಂದು ಗೋವಾ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಚೋಡಂಕರ್‌ ಕರೆ ನೀಡಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ದೇಶದಲ್ಲಿ ಒಂದೆಡೆ ಕೊರೋನಾ ವೈರಸ್‌ ಸಂಕಟ ಮತ್ತೊಂದೆಡೆ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುವ ಅನಿವಾರ್ಯತೆ ಎದುರಾಗಿದ್ದಾಗ, ಪಕ್ಷದ ಮರುರಚನೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.

ಗಾಂಧಿ ಕುಟುಂಬದ ದೇಶದ ಪರವಾಗಿ ಹೋರಾಡಿದ, ಪಕ್ಷಕ್ಕೆ ಬಲ ನೀಡಿದ ಮೊದಲ ಕುಟುಂಬ. ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ತಾಯಿ ಸೋನಿಯಾ ಗಾಂಧಿ, ಎಲ್ಲಾ ಅಡೆತಡೆಗಳನ್ನು ಮೀರಿ ಹುದ್ದೆ ಅಲಂಕರಿಸಿದ್ದರು. ಪಕ್ಷದೊಳಗಿನ ಆಂತರಿಕ ಚರ್ಚೆಗಳನ್ನು ಬಹಿರಂಗಗೊಳಿಸುವುದು ಅನೈತಿಕ ಮತ್ತು ಅಕ್ರಮ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿ ಓದಿ