ಸಮಸ್ಯೆಗಳನ್ನು ತಾಯಿ ಹೃದಯದಿಂದ ನೋಡುವ ನಾಯಕರು ಬೇಕಾಗಿದ್ದಾರೆ
ಸಾಹಿತಿ ಡಾ.ಆರನಕಟ್ಟೆ ರಂಗನಾಥ ಅಭಿಮತ: ಅಗ್ನಿ ಪ್ರವೇಶ ಕತೆಯ ಯುವ ಸಾಹಿತ್ಯ ಸಂವಾದ ಕಾರ್ಯಕ್ರಮ
ಹೊಸಪೇಟೆ 11: ಪರೀಕ್ಷೆಗಳಲ್ಲಿ ಹುಡುಗಿಯರೇ ಯಾವಾಗಲೂಯಾಕೆ ಮುಂದಿರುತ್ತಾರೆ ಎಂದರೆ ಅವರು ಮನೆಯಲ್ಲಿ, ಸಮಾಜದಲ್ಲಿ, ವಿವಿಧ ಸ್ಥಳಗಳಲ್ಲಿ ವಿವಿಧ ಅಗ್ನಿಪರೀಕ್ಷೆಗಳಿಗೆ ಎದುರಾಗಿರುತ್ತಾರೆ. ಅವರು ಶತಮಾನದಿಂದ ವಿವಿಧ ಅಗ್ನಿಪರೀಕ್ಷೆಗಳನ್ನು ಎದುರಿಸಿದ ಪರಂಪರೆ ಇದೆ. ಅಂತಹ ಅಗ್ನಿಪರೀಕ್ಷೆಗಳ ಮುಂದೆ ಓದಿ ಬರೆಯುವ ಪರೀಕ್ಷೆ ಅತ್ಯಂತ ಕ್ಷುಲ್ಲಕ ಎಂದು ಸಾಹಿತಿ ಡಾ.ಆರನಕಟ್ಟೆ ರಂಗನಾಥ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ದಿ.11ರಂದು ಹೊಸಪೇಟೆಯ ಆವಿಷ್ಕಾರ ಕಛೇರಿಯಲ್ಲಿ ‘ಆವಿಷ್ಕಾರ - ಪ್ರಗತಿಪರ ಸಾಂಸ್ಕೃತಿಕ ವೇದಿಕೆ’ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಮಿಳು ಸಾಹಿತಿ ಜಯಕಾಂತನ್ ಅವರ ‘ಅಗ್ನಿ ಪ್ರವೇಶ’ ಕತೆಯ ಕುರಿತು ಯುವ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕತೆಗಳನ್ನು ನಿರ್ದಿಷ್ಟ ಪಾತ್ರಗಳಲ್ಲಿ ನೋಡದೇ ನಮ್ಮ ಬದುಕಿಗೆ ಅನ್ವಯಿಸಿಕೊಂಡು ನೋಡುವಆಯಾಮವನ್ನು ಒಳಗೊಂಡಿರುತ್ತವೆ. ಕತೆಗಳು ನಮ್ಮ ಬದುಕನ್ನು ಸಮೃದ್ಧಗೊಳಿಸುವ ಆಯಾಮವನ್ನು ಒಳಗೊಂಡಿವೆ. ಅಗ್ನಿಪ್ರವೇಶದ ಮೂಲಕ ಆಶೆಗಳು, ಬಯಕೆಗಳು ಇದ್ದಾಗ್ಯೂಅದನ್ನು ಪಡೆಯುವಲ್ಲಿಕುಟುಂಬ, ತಂದೆಯ, ಸಮಾಜದ, ಸಂಪ್ರದಾಯದ, ಜಾತಿಧರ್ಮದಒಪ್ಪಿಗೆಯನ್ನು ಪಡೆಯಬೇಕಾದ ಕಟ್ಟುಪಾಡುಗಳು ಎದುರಾಗುತ್ತವೆ. ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿದರೆ ಸಮಾಜವುಅಂತಹ ವ್ಯಕ್ತಿಯನ್ನುಅಪಮೌಲ್ಯದಿಂದ ನೋಡುತ್ತದೆ. ಆತ್ಮಹತ್ಯೆಅಥವಾ ಮರ್ಯಾದೆ ಹತ್ಯೆಯನ್ನು ಪರಿಹಾರವಾಗಿಕಾಣುವುದು ಮಾನವೀಯತೆ ಕಳೆದುಕೊಂಡ ಸಮಾಜದ ಲಕ್ಷಣ.ಮಗಳ ಸಮಸ್ಯೆಗಳನ್ನು ತಾಯಿ ಹೃದಯದಿಂದ ನೋಡಿ ಮಮತೆಯಿಂದ ಬಗೆಹರಿಸುವಅಗತ್ಯವಿದೆ.ತಾಯಿ ಹೃದಯದ ನಾಯಕರು ಮಾತ್ರವೇ ಇಂದಿನ ಸಮಾಜದ ಸಮಸ್ಯೆಗೆ ಪರಿಹಾರ” ಎಂದುಡಾ.ಆರನಕಟ್ಟೆರಂಗನಾಥ ಸಾಹಿತಿಗಳು ಅಭಿಪ್ರಾಯವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಇಂಗ್ಲೀಷ್ ಉಪನ್ಯಾಸಕ ಪ್ರೊ. ಶರಣಬಸವ “ಅಕ್ಷರಗಳು ಆಯುಧಗಳು. ಅಕ್ಷರ ಪ್ರಜ್ಞೆಯು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಬಗೆಹರಿಸಿಕೊಳ್ಳಲು ಸಹಾಯಕವಾಗುತ್ತವೆ. ಅಕ್ಷರಗಳನ್ನು ಕೇವಲ ವೃತ್ತಿ ಕೌಶಲ್ಯವಾಗಿ ನೋಡಬಾರದು ಎಂದರು. ಪ್ರಕಾಶ್ ನಾಯಕ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿನೋದ್ ಸ್ವಾಗತಿಸಿದರು. ಹರ್ಷ ಯಾದವ್, ಶಂಕರ್, ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.