ಸ್ವಯಂ ಪ್ರೇರಿತರಾಗಿ ಬಿ.ಜೆ.ಪಿ ಪಕ್ಷಕ್ಕೆ ಸೇರೆ್ಡಗೊಂಡಿದ್ದೇವೆ. ಕಟ್ಟೇಸ್ವಾಮಿ
ಬಳ್ಳಾರಿ 31 : ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ವಾರ್ಡ್ ನ ರಾಜೀವ ಗಾಂಧಿ ನಗರದ ನಿವಾಸಿಗಳಾದ ನಾನು ಕಟ್ಟೆಸ್ವಾಮಿ ಮತ್ತು ನಮ್ಮ ತಂಡದವರಿಂದ ಸ್ವಯಂ ಪ್ರೇರಿತವಾಗಿ ಬಿ.ಜೆ.ಪಿ ಪಕ್ಷಕ್ಕೆ ಸೇರೆ್ಡಯಾಗಿದ್ದೇವೆ. ನಮ್ಮನ್ನು ಪಕ್ಷಕ್ಕೆ ಕರೆತರಲು ಬಿ.ಜೆ.ಪಿ ಯವರಾಗಲಿ ಅಥವಾ ಸಚಿವರ ಶ್ರೀರಾಮುಲರವರಾಗಲಿ ನಮ್ಮ ಮೇಲೆ ದೌರ್ಜನ್ಯ ಮಾಡಿಲ್ಲ ಮತ್ತು ಯಾವುದೇ ಅಮಿಷಕ್ಕೆ ನಾವುಗಳು ಬಿ.ಜೆ.ಪಿ ಪಕ್ಷಕ್ಕೆ ಹೋಗಿಲ್ಲ ನಾವು ಸ್ವ ಇಚ್ಚೆಯಿಂದ ಎಲ್ಲಾ ಕುಲಬಾಂಧವರು ಸೇರಿಕೊಂಡು ಪಕ್ಷಕ್ಕೆ ಸೇರೆ್ಡಯಾಗಿರುತ್ತೇವೆಂದು ಮಾದ್ಯಮ ಜೊತೆ ಮಾತನಾಡಿದ ಕಟ್ಟೇಸ್ವಾಮಿ. ಕಳೆದ 64 ವರ್ಷಗಳಿಂದ ನಮಗೆ ಹಕ್ಕುಪತ್ರಗಳಿರಲಿಲ್ಲ ಈ ಬಗ್ಗೆ ಹಲವಾರು ಬಾರಿ ಎಲ್ಲಾ ಪಕ್ಷದ ರಾಜಕಾರಿಣಿಗಳಿಗೆ ಮುಖಂಡರುಗಳಿಗೆ ಜನಪ್ರತಿನಿಧಿಗಳಿಗೆ ಸ್ಥಳೀಯ ಪ್ರತಿನಿಧಿಗಳಿಗೆ ಮನವಿ ಮಾಡಿದೆವು.
ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ ನಾಗೇಂದ್ರ ಬಳಿಯು ಸಹ ಈ ಕುರಿತು ವಿನಂತಿಸಿದೆವು. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆ ನಾಗೇಂದ್ರ ಮಾತನಾಡಿದರೂ ನಮಗೆ ನ್ಯಾಯ ದೊರಕಲಿಲ್ಲ. ಇನ್ನು ಮುಂದೆ ನಮಗೆ ಹಕ್ಕುಪತ್ರ ಸಿಗುವುದು ಕಷ್ಟವೆಂದು ತಿಳಿದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವುಗಳೆಲ್ಲಾ ಮತದಾನ ಬಹಿಷ್ಕರಿಸಲು ನಿರ್ಧರಿಸಿ ನಾಮ ಫಲಕಗಳನ್ನು ಹಾಕಿದೆವು. ಹಕ್ಕು ಪತ್ರಗಳನ್ನು ನೀಡದ ಪಕ್ಷಗಳಿಗೆ ನಮ್ಮ ದಿಕ್ಕಾರ, ನಮ್ಮ ವಾರ್ಡ್ ಗೆ ಯಾವೊಬ್ಬ ನಾಯಕರು ಪ್ರವೇಶಿಸಬಾರದೆಂದು ನಾಮಫಲಕವನ್ನು ಹಾಕಿ ನಮ್ಮ ಅಸಮಧಾನವನ್ನು ತೋರಿ್ಡಸಿದೆವು. ಅಷ್ಟೆ ಅಲ್ಲ ನಮಗೆ ನ್ಯಾಯಯುತವಾಗಿ ಹಕ್ಕು ಪತ್ರಗಳನ್ನು ನೀಡುವ ಪಕ್ಷಕ್ಕೆ ಪ್ರದೇಶದ ಎಲ್ಲಾ ಮುಖಂಡರು ಬೆಂಬಲಿಸುವೆವು ಎಂದರು. ಶ್ರೀರಾಮುಲು ರವರು ಈ ವಿಷಯವನ್ನು ತಿಳಿದುಕೊಂಡು ನಮ್ಮಗೆ ಸಹಾಯ ಮಾಡಲು ಮುಂದೆ ಬಂದು ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಇದೀಗ ನಮಗೆ ಪರಿಚಯ ಪತ್ರಗಳನ್ನು ನೀಡಿದ್ದಾರೆ. ಹಾಗೂಈ ಮುಂದಿನದಿನಗಳಲ್ಲಿ ಡಿ ಡಿ ಹಣ ತುಂಬಿದಲ್ಲಿ ಹಕ್ಕುಪತ್ರಗಳನ್ನು ನೀಡಲಿದ್ದಾರೆ. ಇದೇ ಕಾರಣಕ್ಕಾಗಿ ನಮಗೆ ನ್ಯಾಯ ದೊರೆತಂತಾಗಿದೆ ಇದಕ್ಕಾಗಿ ನಾವು ಬಿ.ಜೆ.ಪಿ ಗೆ ಸೇರುತ್ತಿದ್ದೇವೆ. ಈ ಸಂದರ್ಭದಲ್ಲಿ ಮುಖಂಡರುಗಳಾದ ನಾರಾಯಣ, ಶಿವರಾಮ್, ವೀರೇಶ್, ಮರಿಸ್ವಾಮಿ, ರತ್ನಯ್ಯ, ಮಾನಯ್ಯ, ಸೇರಿದಂತೆ ಹಲವಾರು ಜನರು ಉಪಸ್ಥಿತರರಿದ್ದರು.