ಮನರಂಜನೆ

ಅಪ್ಪು ಅಗಲಿಕೆಯಿಂದ ಹೊರಬರಲಾಗದು: ಉಪೇಂದ್ರ

ಅಪ್ಪು ಅಗಲಿಕೆಯಿಂದ ಹೊರಬರಲಾಗದು: ಉಪೇಂದ್ರ

ಬೆಂಗಳೂರು, ನ. 12: ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ಕಾಡುತ್ತಿದೆ.   ಅದರಿಂದ ಹೊರಬರಲು ಅದೆಷ್ಟು ವರ್ಷಗಳು ಬೇಕಾದೀತೋ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ. 

ಪತ್ನಿ ಪ್ರಿಯಾಂಕಾ ಅಭಿನಯದ ‘ಉಗ್ರಾವತಾರ’ ಟೀಸರ್ ಲಾಂಚ್ ಸಂದರ್ಭದಲ್ಲಿ ಮಾತನಾಡಿ, ಅಪ್ಪು ಸರಳತೆ, ಸ್ನೇಹಪರತೆ, ಸಮಾಜಮುಖಿ ಚಟುವಟಿಕೆಗಳು ಎಂದೆಂದೂ ನೆನಪಿನಲ್ಲಿರುತ್ತವೆ ಎಂದರು. 

ಇದೇ ವೇಳೆ ಪ್ರಿಯಾಂಕಾ ಉಗ್ರಾವತಾರ ನನಗೇನೂ ಹೊಸದಲ್ಲ, ಪ್ರೇಕ್ಷಕರಿಗೆ ಮಾತ್ರ ಹೊಸದು ಎಂದು ಕಾಲೆಳೆದರು.

ಪ್ರಿಯಾಂಕಾ ಈವರೆಗೂ ಸಾಫ್ಟ್ ಕಾರ್ನರ್ ಕ್ಯಾರೆಕ್ಟರ್ ಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.  ಆದರೂ ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ಮಾಲಾಶ್ರೀ ಜ್ಞಾಪಕಕ್ಕೆ ಬರುತ್ತಾರೆ.  ಚಿತ್ರತಂಡಕ್ಕೆ ಶುಭವಾಗಲಿ ಎಂದರು. 

ಇನ್ನು, ನಿರ್ದೇಶನದ ಕುರಿತು ಮಾತನಾಡಿ, ಕಬ್ಜ ಸೇರಿದಂತೆ ಕೆಲ ಸಿನಿಮಾಗಳ ಕೆಲಸ ಮುಗಿದ ನಂತರ ತಮ್ಮ ನಿರ್ದೇಶನದ ನೂತನ ಚಿತ್ರದ ಬಗ್ಗೆ ಘೋಷಿಸುವೆ.  ಬಹುಶಃ ಇನ್ನೆರಡು ತಿಂಗಳಲ್ಲಿ ವಿಷಯ ತಿಳಿಸುವೆ ಎಂದು ಹೇಳಿದರು.

ಸುದ್ದಿ ಓದಿ