ರಾಣೆಬೆನ್ನೂರ

ವೀರ ಮಹಿಳೆಯರನ್ನು ನಾವೇಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಮೋದ್ ಮುತಾಲಿಕ್

ವೀರ ಮಹಿಳೆಯರನ್ನು ನಾವೇಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಮೋದ್ ಮುತಾಲಿಕ್

ಲೋಕದರ್ಶನ ವರದಿ 


ರಾಣೇಬೆನ್ನೂರು 23:  ದೇಶದಲ್ಲಿ ಲಕ್ಷಾಂತರ ದೇಶ ಭಕ್ತರು ಇತಿಹಾಸದಲ್ಲಿ ಈ ದೇಶದ ಸ್ವಾತಂತ್ರಕ್ಕಾಗಿ ಹಗಲಿರುಳು ಎನ್ಮದೇ ನಿರಂತರ ದೇಶ ಪ್ರೇಮವನ್ನು ಬದುಕಿನಲ್ಲಿ ಅಳವಡಿಸಿಕೂಂಡು, ಸ್ವಾತಂತ್ರದ ಕೂನೆಯವರೆಗೂ ತಮ್ಮ ಮನೆ ಮಠ, ಆಸ್ತಿ, ಪಾಸ್ತಿ, ಕುಟುಂಬ ಕಳೆದುಕೂಂಡು ದೇಶಕ್ಕೆ ಸ್ವಾತಂತ್ರವನ್ನು ತಂದು ಕೂಟ್ಟ ನಮ್ಮ ಇತಿಹಾಸದ ಮಹಾತ್ಮರನ್ನು ಸಂತರು, ಸಾದುಗಳು ಮತ್ತು ವೀರಮಹಿಳೆಯರನ್ನು ನಾವೇಂದಿಗೂ ಮರೆಯಲು ಸಾಧ್ಯವಾಗಲಾರದು ಎಂದು ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ  ಪ್ರಮೋದ ಮುತಾಲಿಕ್ ಹೇಳಿದರು. 

ಅವರು ಇಲ್ಲಿನ  ಸಿದ್ದೇಶ್ವರ ನಗರದ ವೇಂಕಟೇಶ ಏಕಬೋಟೆ ಅವರ ಸಬಾ ಗ್ರಹದಲ್ಲಿ ಶನಿವಾರ ಮುಂಜಾನೆ ನಡೆದ ಸ್ವಾತಂತ್ರ ಸೇನಾನಿ, ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಸರಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಮಾತನಾಡಿದರು. ಕಿತ್ತೂರು ಚನ್ನಮ್ಮ ಈ ದೇಶ ಕಂಡ ಮಹಾನ್ ದೇಶಭಕ್ತೆ. ಅವಳು ಅಂದು ದೇಶದ ಸ್ವಾತಂತ್ರಕ್ಕಾಗಿ  ಆಂಗ್ಲರ ವಿರುದ್ದ ಹೋರಾಟ ಮಾಡಿದ ಕನ್ನಡ ನಾಡಿನ ಪ್ರಥಮ ಮಹಿಳೆ.  ಅವಳ ಹೋರಾಟ ಭಾರತದ ಇತಿಹಾಸದಲ್ಲಿ ಚರಿತ್ರೆಯಾಗಿ ಉಳಿದಿದೆ. ಪ್ರಸ್ತುತ ಸರ್ಕಾರ ಅಭಿವೃದ್ದಿ ಪಡಿಸುವ ಹೇಳಿಕೆಗಳು ಮಾತ್ರ ಪುನರುಚ್ಚರಿಸುತ್ತಿವೆ. ಆದರೆ ಸರ್ಕಾರದ ನೀರ್ಲಕ್ಷ ಜನ ಪ್ರತಿನಿಧಿಗಳ ದೌರ್ಭಾಗ್ಯವು  ಇದುವರೆಗೂ ಅವಳ ಜನ್ಮ ಸ್ಥಳ ಕಾಕತಿ ಕೋಟೆ, ಮೂಲ ಸ್ಥಳ, ಪೂಜಾ ಸ್ಥಾನ, ಅವಳು ವಾಸಿಸಿದ ಜೈಲು ಅಭಿವೃದ್ದಿ ಕಂಡಿಲ್ಲ. ಲಂಡನ್‌ನಲ್ಲಿರುವ ಅವಳು ಹೂರಾಟ ಮಾಡಿದ ಖಡ್ಗ್‌ ಇದುವರೆಗೂ ತರಲಾಗಿಲ್ಲ ಎಂದು ವಿಶ್ಲೇಸಿ ಮಾತನಾಡಿದ ಮುತಾಲಿಕ್ ಅವರು ಸರ್ಕಾರ ಕೇವಲ ಚನ್ನಮ್ಮನ ಉತ್ಸವಕ್ಕೆ ಮಾತ್ರ ಸಿಮಿತವಾಗದೇ ಕೂಡಲೆ ಸಮಗ್ರವಾಗಿ ಅಭಿವೃದ್ದಿ ಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.  

ಪಂಚಮ ಸಮಾಜದ ಸ್ವಾಮಿಜಿಗಳು ವೀರ ರಾಣಿ ಕಿತ್ತೂರು ಚನ್ನಮ್ಮ ನಮ್ಮವರು ಎಂದು ಹೇಳುತ್ತಾರೆ. ಚನ್ನಮ್ಮನನ್ನು ಜಾತಿ ಲೆಕ್ಕದಲ್ಲಿ ಇಟ್ಟುಕೂಂಡಿದ್ದಾರೆ, ಆದರೇ ಅವಳು ಜಾತಿಗಾಗಿ ಹೋರಾಟ ಮಾಡಲಿಲ್ಲ ಅವಳು ಮಾಡಿದ್ದು ಸಮಗ್ರ ಭಾರತೀಯರಿಗಾಗಿ ಎನ್ನುವ ವಾಸ್ತವಿಕ ಸಂಗತಿಯನ್ನು ಯಾರು ಇದುವರೆಗೂ ಅರಿತಿಲ್ಲ, ಅರಿತು ಅವಳನ್ನು ವಿಶ್ವವೇ ಗುರುತಿಸುವಂತಹ ಕೆಲಸಕ್ಕೆ ಮುಂದಾಗಿಲ್ಲ ಎಂದು ಕಿಡಿ ಕಾರಿದರು. 

ಲಂಡನ್ನಿನ ಝಾನ್ಸಿ ರಾಣಿಯ ಹೋರಾಟದ ಬಗ್ಗೆ ವಿಶ್ವದಲ್ಲಿಯೇ ಗುರುತಿಸಲಾಗುತ್ತಿದೆ. ಆದರೇ ಝಾನ್ಸಿ ರಾಣಿಗಿಂತ 30 ವರ್ಷಗಳ ಕಾಲ ಮುಂಚಿತವಾಗಿ ಹೋರಾಟ ಮಾಡಿದ ಕರುನಾಡಿನ ಕಿತ್ತೂರು ರಾಣಿ ಚನ್ನಮ್ಮನ ಹೆಸರು ಇತಿಹಾಸದಲ್ಲಿ ಕಾಣುತ್ತಿಲ್ಲ. ಇದು ನಮ್ಮ ಜನಪ್ರತಿನಿಧಿಗಳ ನಿರ್ಲಕ್ಚತನ ಮತ್ತು ರಾಜಕೀಯ ಇಚ್ಚಾ ಶಕ್ತಿಯ ಕೂರತೆಯು ಅಥವಾ ನಾಡಿನ ಜನರ ದೌರ್ಭಾಗ್ಯವೂ? ಎನ್ನದೆ ವಿಧಿಇಲ್ಲ. 75 ನೇ ಅಮೃತ ವರ್ಷದ ಆಚರಣೆಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಾದರೂ ಜನಪ್ರತಿನಿಧಿಗಳು ಮತ್ತು ಸರ್ಕಾರ ಅವಳ ಮೂಲ ಹೋರಾಟ ಕಂಡ ಎಲ್ಲ ಸ್ಥಳಗಳನ್ನು ಸಂಪೂರ್ಣ ಅಭಿವೃದ್ದಿ ಪಡಿಸಲು ಮುಂದಾಗಬೇಕೆಂದು ಅಗ್ರಹಿಸಿದರು. 

ಅಖಿಲ ಭಾರತ ವೀರ ಶೈವ ಮಹಾಸಭಾ ತಾಲೂಕಾ ಘಟಕದ ಆದ್ಯಕ್ಷ , ನ್ಯಾಯವಾದಿ ಕೆ.ಎನ್, ಕೋರದಾನ್ಯಮಠ, ಮುಖಂಡರಾದ ವೇಂಕಟೇಶ ಏಕಬೋಟೆ,  ಪ್ರಕಾಶ ಮಣೇಗಾರ, ದೇವರಾಜ ಎನ್, ಪವನಕುಮಾರ ಆಮಟೆ, ರಮೇಶ ಮಾಕನೂರ,  ಬಸವರಾಜ ಹೂಂಬಳ, ವಿರೂಪಾಕ್ಷಪ್ಪ ಮೇಡ್ಲೇರಿ, ಸೇರಿದಂತೆ ಮತ್ತಿತರ ಗಣ್ಯರು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೂಂಡಿದ್ದರು. 


ಸುದ್ದಿ ಓದಿ