ರಾಷ್ಟ್ರೀಯ

ರಾಜಕೀಯ ಬಿರುಗಾಳಿಗಳನ್ನು ಎದುರಿಸುತ್ತೇವೆ, ಕೋವಿಡ್ ವಿರುದ್ಧವೂ ಹೋರಾಡುತ್ತೇವೆ- ಉದ್ಧವ್ ಠಾಕ್ರೆ

ರಾಜಕೀಯ ಬಿರುಗಾಳಿಗಳನ್ನು ಎದುರಿಸುತ್ತೇವೆ, ಕೋವಿಡ್ ವಿರುದ್ಧವೂ ಹೋರಾಡುತ್ತೇವೆ- ಉದ್ಧವ್ ಠಾಕ್ರೆ

ಮುಂಬೈ, ಸೆಪ್ಟೆಂಬರ್ 13: ರಾಜಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಷಯಗಳೆರಡನ್ನೂ ಸಮತೋಲಿತವಾಗಿ ಪರಿಹರಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.

‘ಎಂತಹುದೇ ರಾಜಕೀಯ ಬಿರುಗಾಳಿಗಳು ಎದುರಾದರೂ ಎದುರಿಸುತ್ತೇನೆ. ಹಾಗೆಯೇ ಕರೋನವೈರಸ್ ವಿರುದ್ಧವೂ ಹೋರಾಡುತ್ತೇನೆ" ಎಂದು ಠಾಕ್ರೆ ಭಾನುವಾರ ಟಿವಿ ವಾಹಿನಿ ಮೂಲಕ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ. 

‘ಕಳೆದ ಹಲವು ದಿನಗಳಿಂದ  ಕರೋನವೈರಸ್‍ ತಡೆಗೆ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಇದರ ಮಧ್ಯೆ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದ್ದೇವೆ. ಎಂದು ಅವರು ಹೇಳಿದ್ದಾರೆ.

‘ರಾಜಕೀಯವಾಗಿರಲಿ ಅಥವಾ ಸ್ವಭಾವಿಕವಾಗಲಿ ಎಂತಹುದೇ ಬಿರುಗಾಳಿ ರಾಜ್ಯಕ್ಕೆ ತಟ್ಟಿದರೂ ಸರ್ಕಾರ ಅದರ ವಿರುದ್ಧ ಹೋರಾಡುತ್ತಿದೆ. ನಟ ಸುಶಾಂತ್ ರಜಪೂತ್ ಸಾವು ಪ್ರಕರಣವನ್ನು ನಿಭಾಯಿಸಿದ ಬಗ್ಗೆ ಕಳೆದ ಜೂನ್‍ನಿಂದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇದೆ.’ ಎಂದು ಠಾಕ್ರೆ ಹೇಳಿದ್ದಾರೆ.  

ಸುಶಾಂತ್ ಪ್ರಕರಣವಾಗಿ ಕಳೆದ ವಾರಗಳಿಂದ ನಟ ಕಂಗನಾ ರನೌತ್ ಅವರೊಂದಿಗಿನ ಸಂಘರ್ಷದಲ್ಲೂ ಸರ್ಕಾರ ಸಿಲುಕಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. 

ಸುದ್ದಿ ಓದಿ