ರಾಷ್ಟ್ರೀಯ

ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ: ಬಿಜೆಪಿ ಸ್ಪಷ್ಟನೆ

ನಿತೀಶ್ ಕುಮಾರ್  ನಾಯಕತ್ವದಲ್ಲಿ ಚುನಾವಣೆ  ಎದುರಿಸಲಿದ್ದೇವೆ:  ಬಿಜೆಪಿ ಸ್ಪಷ್ಟನೆ

ನವದೆಹಲಿ, ಅಕ್ಟೋಬರ್ 6:  ಜೆಡಿ(ಯು) ಮುಖ್ಯಸ್ಥ,  ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದಲ್ಲಿ ಬಿಹಾರ ವಿಧಾನಸಭೆ ಚುನಾವಣೆಗಳನ್ನು  ಎನ್ ಡಿ ಎ  ಮೈತ್ರಿಕೂಟ  ಎದುರಿಸಲಿದೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಸಮಾನ ಮನಸ್ಕ ಪಕ್ಷಗಳು ನಮ್ಮೊಂದಿಗೆ ಕೈಜೋಡಿಸಬೇಕು  ಎಂದು ಅದು ಕರೆ ನೀಡಿದೆ.  ಚುನಾವಣೆಗೆ ಮುನ್ನವೇ ನಮ್ಮ  ಜೊತೆಗೂಡಬೇಕು ಎಂದು ಮನವಿ ಮಾಡಿಕೊಂಡಿದೆ.

ಬಿಹಾರ  ಬಿಜೆಪಿ ನಾಯಕ ಸಂಜಯ್  ಜೈಸ್ವಾಲ್  ಮಂಗಳವಾರ ಮಾತನಾಡಿ, ಬಿಹಾರದಲ್ಲಿ ಎನ್ ಡಿ ಎ ನಾಯಕ ನಿತಿಶ್ ಕುಮಾರ್   ಅವರ ನಾಯಕತ್ವದಲ್ಲಿ  ಬಿಹಾರದಲ್ಲಿ ಚುನಾವಣಾ   ಮೈತ್ರಿ ಕೂಟದ  ಬಗ್ಗೆ   ಚರ್ಚೆ ನಡೆಯುತ್ತಿವೆ ಎಂದು ಹೇಳಿದರು. ರಾಜ್ಯದಲ್ಲಿ ಅವರ ನಾಯಕತ್ವವನ್ನು   ಬಿಜೆಪಿ ಅನುಮೋದಿಸುತ್ತದೆ  ಎಂದು ಸ್ಪಷ್ಟಪಡಿಸಿದರು. ನಿತೀಶ್ ಕುಮಾರ್  ನಾಯಕತ್ವ ಅಂಗೀಕರಿಸುವವರು  ಎನ್ ಡಿ ಎ ಮೈತ್ರಿಕೂಟದ  ಸಹಭಾಗಿಗಳು ಎಂದರು.

ನಿತೀಶ್  ಕುಮಾರ್  ನಾಯಕತ್ವವನ್ನು ಅಂಗೀಕರಿಸದ ಲೋಕಜನ ಶಕ್ತಿ ಪಕ್ಷ (ಎಲ್ ಜೆಪಿ) ಇತ್ತಿಚಿಗೆ ಎನ್ ಡಿ ಎ  ಮೈತ್ರಿಕೂಟದಿಂದ ನಿಂದ ಹೊರ ನಡೆದಿದ್ದು, ಬಿಹಾರ  ವಿಧಾನಸಭಾ ಚುನಾವಣೆಯಲ್ಲಿ ಏಕಾಂಕಿಯಾಗಿ  ಸ್ಪರ್ಧಿಸಲು ನಿರ್ಣಯಿಸಿದೆ. ಈ ಹಿನ್ನಲೆಯಲ್ಲಿ ಬಿಜೆಪಿ, ಜೆಡಿಯು    ಸಮಾನ ಸಂಖ್ಯೆಯಲ್ಲಿ   ಕಣಕ್ಕಿಳಿಯಲು   ಒಪ್ಪಂದಕ್ಕೆ ಬಂದಿವೆ ಎಂದು  ವರದಿಯಾಗಿದೆ. ಬಿಜೆಪಿ, ಜೆಡಿಯು ಸ್ಪರ್ಧಿಸುವ  ಸೀಟುಗಳು, ಅಭ್ಯರ್ಥಿಗಳನ್ನು ಸದ್ಯದಲ್ಲೇ ಪ್ರಕಟಿಸುವ ಅವಕಾಶವಿದೆ.

ಬಿಜೆಪಿ 121 ಸ್ಥಾನಗಳಲ್ಲಿ, ಜೆಡಿ(ಯು) 122 ಸ್ಥಾನಗಳನ್ನು    ಹಂಚಿಕೊಂಡಿವೆ ಎಂದು ತಿಳಿದು ಬಂದಿದೆ. ಬಿಜೆಪಿ  ಕೆಲ  ಸ್ಥಾನಗಳನ್ನು  ಮುಖೇಶ್ ನಿಶಾದ್ ನೇತೃತ್ವದ  ವಿಕಾಸ್ ಶೀಲ್ ಇನ್ಸಾನ್ ಪಕ್ಷಕ್ಕೆ  ಬಿಟ್ಟುಕೊಡಲಿದೆ. ಆದೇ ರೀತಿ  ಜೆಡಿ(ಯು) ಕೆಲವು ಸ್ಥಾನಗಳನ್ನು  ಜೀತನ್ ರಾಮ್   ಮಾಂಝಿ  ನೇತೃತ್ವದ ಹಿಂದೂಸ್ಥಾನ ಅವಾಮ್  ಪಕ್ಷಕ್ಕೆ ಬಿಟ್ಟುಕೊಡಲಿದೆ.

ಸುದ್ದಿ ಓದಿ