ಐನಾಪೂರ, ಖಿಳೇಗಾವ ಯಾತ ನೀರಾವರಿ ಕಾಲುವೆಗಳಿಗೆ ನೀರು; ಕ್ಷೇತ್ರದ ರೈತರಿಗೆ ಅನುಕೂಲ
ಕಾಗವಾಡ 10: ಮತಕ್ಷೇತ್ರದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದರೂ ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಐನಾಪೂರ ಮತ್ತು ಖಿಳೇಗಾವ ಬಸವೇಶ್ವರ ಯಾತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗುತ್ತೀದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ ಅವರು ಶುಕ್ರವಾರ ದಿ.10 ರಂದು ತಾಲೂಕಿನ ಐನಾಪೂರ ಪಟ್ಟಣದಲ್ಲಿ ಐನಾಪೂರ ಮತ್ತು ಖಿಳೇಗಾವ ಬಸವೇಶ್ವರ ಯಾತ ನೀರಾವರಿ ಕಾಲುವೆಗಳಿಗೆ ನೀರು ಹರಿಸಿ ಮಾತನಾಡುತ್ತಿದ್ದರು.
ದಿವ್ಯ ಸಾನಿಧ್ಯವನ್ನು ಕವಲಗುಡ್ಡ-ಹನಮಾಪುರದ ಪ.ಪೂ. ಅಮರೇಶ್ವರ ಮಹಾರಾಜರು ವಹಿಸಿ, ಮಾತನಾಡುತ್ತಾ ಶಾಸಕ ರಾಜು ಕಾಗೆ ಅವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಲುವೆಗಳಿಗೆ ನೀರು ಹರಿಸಲು ಆಗಮಿಸಿರುವುದು ಕ್ಷೇತ್ರದ ಮೇಲಿರುವ ಅವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು. ಮುಖಂಡರಾದ ವಿನಾಯಕ ಬಾಗಡಿ, ಸೇರಿದಂತೆ ಅನೇಕರು ಮಾತನಾಡಿದರು.
ಈ ವೇಳೆ ಮುಖಂಡರಾದ ಸಂಜಯ ತಳವಳಕರ, ಶಂಕರ ವಾಘಮೋಡೆ, ವಿನಾಯಕ ಬಾಗಡಿ, ಶಿವಾನಂದ ಗೋಲಬಾವಿ, ರವಿ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ವಸಂತ ಖೋತ, ರವೀಂದ್ರ ಪೂಜಾರಿ, ವಿನಾಯಕ ಕಾಂಬಳೆ, ನೀರಾವರಿ ಇಲಾಖೆ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಮುತ್ತು ಕೊಕಟನೂರ, ವಿಠ್ಠಲ್ ಕೊಕಟನೂರ, ಗಾಯತ್ರಿ ಕನ್ಸ್ಟ್ರಕ್ಷನ್ ನ ಕೆ.ನಾಗೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.