ಮುದೇನೂರಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ತರಬೇತಿ ಯಶಸ್ವಿ
ಕುಷ್ಟಗಿ14: ಜಿಲ್ಲಾ ಪಂಚಾಯಿತಿ ಕೊಪ್ಪಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗ, ಜಲ ಜೀವನ ಮಶೀನ್, ಸ್ವಚ್ಛ ಭಾರತ್ ಮಿಶನ್ ಯೋಜನಡೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಗುರುವಾರ ಬೆಳಿಗ್ಗೆ ತಾಲೂಕಿನ ಮುದೇನೂರ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ತರಬೇತಿ ನಡೆಯಿತು.
ಅಭಿವೃದ್ಧಿ ಅಧಿಕಾರಿ ದಸ್ತಗಿರಿ ಸಾಬ ಬಡಿಗೇರ, ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ ಈಳಗೇರ, ಗಿರಿಜಾ ಕುಂಟೋಜಿ, ಯಲ್ಲಮ್ಮ ನಂದಿಹಾಳ,ಸರ್ವಮಂಗಳ ತೆಗ್ಗಿಹಾಳ, ಆಶಾ ಕಾರ್ಯಕರ್ತರಾದ ಅಂಬಕ್ಕ, ಚೆನ್ನಮ್ಮ ಹಿರೇಮಠ, ಶಶಿಕಲಾ, ಶ್ರೀದೇವಿ, ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಅಂಬಿಕಾ ಕಳ್ಳಿ, ಶಂಕರಮ್ಮ ಗೋರೆಬಿಹಾಳ, ಪದ್ಧಮ ಈಳಗೇರ ಹಾಗೂ ಲೆಕ್ಕಾಧಿಕಾರಿ ಮುದೇಗೌಡ ತಾವರಗೇರಿ, ಬಿಲ್ ಕಲೆಕ್ಟರ್ ಮಹಾಂತೇಶ ಹಾವಿನಾಳ, ಮಂಜುನಾಥ ಹಿರೇಮಠ, ಶರಣಪ್ಪ ಹೂಗಾರ, ಮುತ್ತು ನಡುಲಮನಿ ಹಾಗೂ ಮುದೇನೂರ, ಬನ್ನಟ್ಟಿ, ತೆಗ್ಗಿಹಾಳ, ಮಾದಾಪೂರ, ಕೆ.ಬೆಂಚಮಟ್ಟಿ, ಕುಡ್ಲೂರ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಂಗಳೂರಿನ ಐ.ಎಸ್.ಆರ್.ಎ ಪ್ರತಿಷ್ಠಾನ ಸಂಸ್ಥೆಯ ತಾಲೂಕು ಸಮುದಾಯ ಸಂಘಟಕರಾದ ಬಸವರಾಜ ಮಾದರ, ಪಕ್ಕೀರಪ್ಪ ವಗ್ಗರ್ ವಿಡಬ್ಲೂ ಎಸ್.ಸಿ ಸದಸ್ಯರಿಗೆ ನೀರಿನ ಗುಣಮಟ್ಟ ಪರೀಕ್ಷೆ ತರಬೇತಿ ನೀಡಿದರು