ದೇಶದ ಗಡಿಯಲ್ಲಿ ಯೋಧರು ಜನರನ್ನು ರಕ್ಷಿಸುತ್ತಿದ್ದಾರೆ: ಡಾ.ಗುರುಸಿದ್ದರಾಜೇಂದ್ರ ಶ್ರೀ
ಲೋಕದರ್ಶನ ವರದಿ
ರಾಣಿಬೆನ್ನೂರ 03: ಈ ದೇಶದ ಗಡಿಯಲ್ಲಿ ಮಳೆ, ಚಳಿ, ಬಿಸಿಲೆನ್ನದೆ ತಮ್ಮ ಪ್ರಾಣದ ಹಂಗನ್ನು ತೊರೆದು ಸಮಸ್ಯೆಗಳನ್ನು ಬದಿಗೊತ್ತಿ 130 ಕೋಟಿಗೂ ಅಧಿಕ ಜನರನ್ನು ಸಂರಕ್ಷಿಸು ಸಮಸ್ಥ ಯೋಧರನ್ನು ಪೂಜ್ಯ ಭಾವನೆ ಹಾಗೂ ಗೌರವಿತವಾಗಿ ಕಾಣುವುದರ ಮೂಲಕ ಯೋಧರಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುವ ಗುರುತರವಾ ಜಾವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ದರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಸಂಜೆ ಇಲ್ಲಿನ ಶನೈಶ್ಚರ ಮಂದಿರದ ಬಯಲು ಆವರಣದಲ್ಲಿ ಲೋಕಕಲ್ಯಾಣಾರ್ಥ ಮತ್ತು ಪ್ರದೇಶಾಭಿವೃದ್ಧಿಗಾಗಿ ಎರಡು ಮಹಾಮಂಡಲಗಳ ಕಾಲ ನಡೆದ ಜಪಾನುಷ್ಠಾನ ಪೂಜಾ ಪ್ರವಚನ ಮಂಗಲ, ಶ್ರೀ ಶನೈಶ್ಚರ ಮಂದಿದ 9ನೇ ವಾರ್ಷಿಕೋತ್ಸವ, ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಮನುಕುಲ ಸದ್ಭಾವನಾ ಬೆಳಕಿನ ಧರ್ಮ ಸಮಾರಂಭ, ಜ್ಞಾನಲಕ್ಷದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದ 382 ನೇ ದಿನದ ಮಹಾಮಂಡಲೋತ್ಸವ ಹಾಗೂ ಯೋಧನಮನ ಮತ್ತು ಷಷ್ಠಿಪೂರ್ತಿ ಗೌರವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಕುಟುಂಬವನ್ನು ಮರೆತು ತಂದೆ ತಾಯಿ, ಸಹೋದರ, ಸಹೋದರಿ, ಬಂಧು ಬಳಗದಿಂದ ದೂರವಾಗಿ ರಾಷ್ಟ್ರದ ಗಡಿಯನ್ನು ಕಾಯುವ ಯೋಧರಿಂದ ನಾವು ನೀವೆಲ್ಲರೂ ರಕ್ಷಣೆಯ ಗೋಡೆಯಲ್ಲಿ ಶಾಂತಿ ನೆಮ್ಮದಿಯಿಂದ ಬಾಳುತ್ತಿದ್ದೇವೆ. ಯೋಧರ ಪರಿಸತಿಯ ಬಗ್ಗೆ ಒಂದು ಕ್ಷಣ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಯೋಧರ ಮತ್ತು ಕುಟುಂಬದವರ ಕುರಿತು ಹಾಗೂ ನಿವೃತ್ತ ಯೋಧರ ಬಗ್ಗೆ ಕಳಕಳಿ ಮತ್ತು ಕಾಳಜಿ ವಹಿಸಿದಾಗ ಮಾತ್ರ ನಮ್ಮ ಕರ್ತವ್ಯ ಸಾರ್ಥವಾಗುವುದು ಎಂದು ಶ್ರೀಗಳು ತಿಳಿಸಿದರು.
ನೊಣವಿನಕೆರೆಯ ಕರಿವೃಷಭ ಶಿವಯೋಗಿ ಶ್ರೀಗಳು, ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಶ್ರೀಗಳು, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಮದ್ಧರಕಿ ಹಿರೇಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು ಪೂಜಾನುಷ್ಠಾನ ಮಂಗಲ ನುಡಿಯಾಡಿದರು.
ಶಾಸಕ ಅರುಣಕುಮಾರ ಪೂಜಾರ ಕಾರ್ಯಕ್ರಮ ಉದ್ಘಾಟಿದರು. ಬೆಂಗಳೂರಿನ ಬಾಲವಾಗ್ಮಿ ಕು.ಹಾರಿಕಾ ಮಂಜುನಾಥ ಯೋಧರ ಕುರಿತು ಉಪನ್ಯಾಸ ನೀಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಪುಷ್ಪಾ ಅಮರನಾಥ, ಬಸವರಾಜ ಲಕ್ಷ್ಮೇಶ್ವರ, ಡಾ.ಮನೋಜ ಸಾಹುಕಾರ, ಕೆ.ವಿ.ಶ್ರೀನಿವಾಸ್, ಅಶೋಕ ಗಂಗನಗೌಡ್ರ, ಪರಮೇಶಪ್ಪ ಮೇಗಳಮನಿ, ಜಗದೀಶ ಬಾಗಲರ, ಅಜೇಯ ಮಠದ, ಸಿದ್ದಪ್ಪ ಚಿಕ್ಕಬಿದರಿ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಯೋಧರನ್ನು ಮತ್ತು ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.
ಫೋಟೊ: ಹೆಚ್-ಆರ್ಎನ್ಆರ್02 ರಾಣೇಬೆನ್ನೂರ:ಇಲ್ಲಿನ ಶನೈಶ್ಚರ ಮಂದಿರದ ಬಯಲು ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಏರಿ್ಡಸಿದ್ದ ಯೋಧನಮನ ಮತ್ತು ಷಷ್ಠಿಪೂರ್ತಿ ಗೌರವ ಸಮಾರಂಭದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ದರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು.