ರಾಷ್ಟ್ರೀಯ

ಸತತ ಮಳೆಯಿಂದ ಹೈದರಾಬಾದ್ ಜನತೆ ತತ್ತರ

ಸತತ ಮಳೆಯಿಂದ ಹೈದರಾಬಾದ್ ಜನತೆ ತತ್ತರ

ಹೈದರಾಬಾದ್, ಅ 20:ನಿರಂತರ ಮಳೆಯಿಂದ ನಲುಗಿರುವ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಎಡಬಿಡದೆ ಸುರಿದು ಮಳೆಯಿಂದಾಗಿ ಹೊಸದಾಗಿ ಪ್ರವಾಹಗಳು ಉಂಟಾಗುವುದರೊಂದಿಗೆ ಜನರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಆರಂಭವಾದ ಭಾರೀ ಮಳೆಯಿಂದಾಗಿ ಅನೇಕ ಕಾಲೋನಿಗಳು ಮತ್ತು ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಕಳೆದ ವಾರ ಆರಂಭವಾದ ಭಾರಿ ಮಳೆಯಿಂದಾಗಿ ಈವರೆಗೆ 33 ಮಂದಿ ಸಾವನ್ನಪ್ಪಿದ್ದಾರೆ.  ನಗರದ ಹಳೆಯ ಪ್ರದೇಶಗಳ ಅನೇಕ ವಸತಿ ಪ್ರದೇಶಗಳಲ್ಲಿ ಭಾರೀ ನಷ್ಟವಾಗಿದೆ. ನಗರದಲ್ಲಿ ಈವರೆಗೆ 600 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿರುವ ಅಂದಾಜು ಮಾಡಲಾಗಿದೆ.  ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ಅನೇಕ ರಸ್ತೆಗಳಾಗಿ ಬದಲಾಗಿದ್ದು, ಇದರಿಂದ ಸಂಚಾರ ಸ್ಥಗಿತಗೊಂಡಿದೆ. ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ ಟಿ ರಾಮ ರಾವ್ ಮತ್ತು ಹೈದರಾಬಾದ್ ಮೇಯರ್ ಬೊಂತು ರಾಮಮೋಹನ್ ಅವರು ನಗರದ ಶಾಸಕರು, ನಗರಸಭಾ ಸದಸ್ಯರು ಮತ್ತು ಇತರ ಜನರ ಪ್ರತಿನಿಧಿಗಳೊಂದಿಗೆ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಇಂದು ಸಭೆ ನಡೆಸಿದರು.

 ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯ ಜನಪ್ರತಿನಿಧಿಗಳು ಮುಂದಿನ ಹತ್ತು ದಿನಗಳ ಕಾಲ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ರಾಮರಾವ್ ಸೂಚಿಸಿದ್ದಾರೆ. ಈ ಮಧ್ಯೆ, ಮುಂದಿನ ಮೂರು ದಿನಗಳಲ್ಲಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 

  


ಸುದ್ದಿ ಓದಿ