ವೃಟಿ ಹೂನ್ನತ್ತಿ ಗ್ರಾಮ: ವಿದ್ಯುತ್ ಅವಘಡ, ಮುದಕಪ್ಪ ಸಾವು: ಪಾಟೀಲ ಧನ ಸಹಾಯ
ರಾಣೇಬೆನ್ನೂರು 09: ತಾಲೂಕಿನ ವೈ .ಟಿ ಹೂನ್ನತ್ತಿ ಗ್ರಾಮದಲ್ಲಿ ತೆಂಗಿನ ಮರದ ಗರಿ ಕಡಿಯಲು ಹೋಗಿದ್ದಾಗ ಅಕಸ್ಮಿಕ ವಿದ್ಯುತ್ ಸ್ಪರ್ಶಿಸಿ ಗ್ರಾಮದ ಯುದಕ ಮುದ್ದೇಪ್ಪ ಡೂಳ್ಳನ ಎಂಬುವರ ಮಗನಾದ ಮುದುಕಪ್ಪ ಡೂಳ್ಳಿನ ಎಂಬಾತನು ಸಾವು ಕಂಡಿದ್ದನು ಮೃತನ ಮನೆಗೆ ಭೇಟಿ ನೀಡಿದ ವಾಕರಾರಸಾ ಸಂಸ್ಥೆಯ ನಿರ್ದೇಶಕ ಸಂತೋಷ ಕುಮಾರ ಪಾಟೀಲ ಅವರು ಕುಟುಂಬಕ್ಕೆ ಸಾಂತ್ವನ ನೀಡಿ ಧನ ಸಹಾಯ ಮಾಡಿದ್ದಾರೆ.
ಕಳೇದ ವಾರದ ಹಿಂದೆ ಈ ಘಟನೆ ಸಂಭವಿಸಿ ಮುದುಕಪ್ಪ ಮೃತ ಪಟ್ಟಿದ್ದು ಈ ಘಟನೆಯಿಂದಾಗಿ ಮನೆಯಲ್ಲಿ ದುಡಿಯುವ ಮಗನನ್ನು ಕಳೆದುಕೂಂಡ ಕುಟುಂಬದವರು ತೀವ್ರ ಅಘಾತಕ್ಕೆ ಒಳಗಾಗಿದ್ದರು ಸಂತೋಷ ಕುಮಾರ ಪಾಟೀಲ ಅವರು ಧನ ಸಹಾಯ ಮಾಡುವುದರ ಮೂಲಕ ಕುಟುಂಬಕ್ಕೆ ಆತ್ಮ ಸ್ಥೈರ್ಯವನ್ನು ತಂದಿದ್ದಾರೆ ಮುಖಂಡರಾದ ಯುವರಾಜ ಬಾರಟಕ್ಕೆ, ಶಿವಕುಮಾರ ಹಿರೇಬಿದರಿ, ಬಸವರಾಜ ಹನುಮಂತಪ್ಪ ಸೇರಿದಂತೆ ಮತ್ತಿತರರು ಇದ್ದರು.