ರಾಣೆಬೆನ್ನೂರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಜಾಗೃತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಜಾಗೃತಿ

ರಾಣೇಬೆನ್ನೂರು 06:  ಪ್ರಜಾಪ್ರಭುತ್ವ ಪರಿಪೂರ್ಣತೆಗೆ ಪ್ರತಿಯೊಬ್ಬ ಭಾರತೀಯರು ಮತದಾನ ಮಾಡುವ ಮೂಲಕ ತಮ್ಮಹಕ್ಕನ್ನು ಚಲಾಯಿಸಲು ಮುಂದಾಗಬೇಕು ಎಂದು ಸರ್ಕಾರಿ ಶಾಲಾ ನಂ:7 ಪ್ರಧಾನ ಗುರುಮಾತೆ ನಿರ್ಮಲಾ ಕೃ. ಮಾನೆ ಕರೆ ನೀಡಿದರು. ಅವರು, ಶಾಲಾ ಆವರಣದಲ್ಲಿ  ನಡೆದ ನಮ್ಮ ನಡೆ ಮತಗಟ್ಟೆಯ ಕಡೆ, ಜನಜಾಗೃತಿ ಜಾತಾ ಪೂರ್ವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಚುನಾವಣಾ ಆಯೋಗವು  ಕಡ್ಡಾಯ ಮತದಾನಕ್ಕೆ ಎಷ್ಟೋ ನಿಯಮ ನಿಬಂಧನೆಗಳನ್ನು ಜಾರಿಗೆ ತಂದು ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಿದೆ ಅದರ ಪ್ರಯೋಜನವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಂಡಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿತನಗೊಳ್ಳಲು ಸಾಧ್ಯವಾಗುವುದು ಎಂದರು.          

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರಸಭೆ ಸಹಾಯಕ ಅಭಿಯಂತ, ಸುರೇಶ್ ಚಲವಾದಿ, ಕೃಷ್ಣಾರೆಡ್ಡಿ, ಮಧುರಾಕ್ಷಿ, ದೊಡ್ಡಪ್ಪ ಅಂಕಸಾಪುರ, ನಿರ್ಮಲಾ ಲಮಾಣಿ, ಕುಮಾರ್ ಹಿರೇಮಠ, ಪರಮೇಶ್ ಕರಿತಿಮಣ್ಣನವರ್, ಹಾಲೇಶ್ ಸೇರಿದಂತೆ ಮತ್ತಿತರ ಗಣ್ಯರು, ಶಾಲಾ ಶಿಕ್ಷಕ ಶಿಕ್ಷಕಿಯರು, ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ  ಜೆ. ಜಿ. ಗವೇನವರ್, ಸ್ವಾಗತಿಸಿದರು. ಶಿಕ್ಷಕಿ ಆರ್‌.ಬಸಮ್ಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ