ಮತದಾರರು ಕಡ್ಡಾಯವಾಗಿ ಮತದಾನ ಮಾಡಿ: ಕಸಾಳೆ
ಬೈಲಹೊಂಗಲ28: ಭವ್ಯ ಭಾರತದ ಭವಿಷ್ಯತ್ತಿಗೆ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಒಂದು ಪವಿತ್ರ ಕರ್ತವ್ಯ
ಎಂದು ಕ್ಷೇತ್ರ ಸಮನ್ವಾಯಾಧಿಕಾರಿ ಬಿ.ಎನ್.ಕಸಾಳೆ ಹೇಳಿದರು.
ಪಟ್ಟಣದ ಚೆನ್ನಮ್ಮ ಸಮಾಧಿ ರಸ್ತೆಯಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಜಾಥಾ ಸಂಗೊಳ್ಳಿ ರಾಯಣ್ಣ ಸರ್ಕಲ್, ಬಸ್ ನಿಲ್ದಾಣ, ಎಪಿಎಂಸಿ ಚೆನ್ನಮ್ಮಾ ವೃತ್ತ, ಆನಿಗೋಳ ರಸ್ತೆ ಮೂಲಕ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಮುಕ್ತಾಯಗೊಳಿಸಲಾಯಿತು. ದಾರಿಯುದ್ದಕ್ಕೂ "ನನ್ನ ಮತ ನನ್ನ ಹಕ್ಕು", "ಮತದಾನ ಮಾಡಿದವನೆ ಹೀರೋ ಮತ ಹಾಕದವನು ಜೀರೋ"
ನನ್ನ ನಡೆ ಮತಗಟ್ಟೆಯ ಕಡೆ", ಬ್ಯಾಲೆಟ್ ಇಸ್ ಗ್ರೇಟರ್ ದ್ಯ್ ನ್ ಬುಲೆಟ್", ಹಣಹೆಂಡಕ್ಕೆ ಮತ ಮಾರದಿರಿ. ಹಲವಾರು ಘೋಷವಾಕ್ಯಗಳನ್ನು ಕೂಗುತ್ತಾ ದಾರಿಯುದ್ದಕ್ಕೂ ಇರುವ ನೂರಾರು ಜನರಿಗೆ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು.
ಇಸಿಓ ಮಹೇಶ್ ಯರಗಟ್ಟಿ, ಬನ್ನೂರ್ ಬಿಆರ್‍ಪಿ ಎ ಬಿ. ಅಂಗಡಿ ನೋಡಲ್ ಅಧಿಕಾರಿ ಚಳಕೊಪ್ಪ ಮತ್ತು ಎಲ್ಲ ಸಿಆರ್‍ಪಿಬಿಆರ್‍ಪಿ ಹಾಜರಿದ್ದರು.
ಕಚೇರಿಯ ಎಲ್ಲ ಬಿಆರ್‍ಪಿ., ಸಿಆರ್‍ಪಿ., ಇಸಿಒ.,ಗಳು ಮತದಾನ ಜಾಗೃತಿ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.