ಬಳ್ಳಾರಿ

ಬಳ್ಳಾರಿ ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವೇಗ; ಶೇ.98.76ರಷ್ಟು ನಮೂನೆಗಳ ವಿತರಣೆ ಪೂರ್ಣ

ಬಳ್ಳಾರಿ ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವೇಗ; ಶೇ.98.76ರಷ್ಟು ನಮೂನೆಗಳ ವಿತರಣೆ ಪೂರ್ಣ
Voter list revision gains momentum in Ballari City constituency; 98.76% of form distribution complet

ಬಳ್ಳಾರಿ 15: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಚುರುಕಿನಿಂದ ಸಾಗುತ್ತಿದ್ದು, ಇದುವರೆಗೆ ಶೇ.98.76ರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್‌. ಮಂಜುನಾಥ್ ತಿಳಿಸಿದ್ದಾರೆ.  ಕ್ಷೇತ್ರದಲ್ಲಿ ಒಟ್ಟು 2,79,144 ಮತದಾರರಿದ್ದು, ಮತದಾರರ ಪಟ್ಟಿಯ ನಿಖರತೆ ಖಚಿತಪಡಿಸಿಕೊಳ್ಳಲು ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ಶೇ.98.01ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಮುದ್ರಿಸಲಾದ ಎಸ್‌ಐಆರ್ ಗಣತಿ ನಮೂನೆಗಳನ್ನು ಸಂಬಂಧಿತ ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿದೆ. ಮನೆ-ಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ಜುಲೈ 29ರವರೆಗೆ ಮುಂದುವರಿಯಲಿದೆ.  

ಅರ್ಜಿ ವಿತರಣೆ ಮತ್ತು ಡಿಜಿಟಲೀಕರಣ  

ಕ್ಷೇತ್ರದಲ್ಲಿನ 2,75,675 (ಶೇ.98.76) ಅರ್ಜಿಗಳನ್ನು ಈಗಾಗಲೇ ಮತದಾರರಿಗೆ ವಿತರಿಸಲಾಗಿದೆ. ವಿತರಿಸಲಾದ ಅರ್ಜಿಗಳ ಪೈಕಿ 78,297 (ಶೇ.28.05) ಅರ್ಜಿಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ನಾಗರಿಕರು ಸ್ವಯಂ ಆನ್ಲೈನ್ ಮೂಲಕ 957 (ಶೇ.0.34) ಅರ್ಜಿಗಳನ್ನು ಸಲ್ಲಿಸಿದ್ದಾರೆ.  

ಮರುಪರೀಶೀಲನೆಗೆ ಒಳಪಟ್ಟ ಮತದಾರರು  

ಪರೀಶೀಲನೆ ವೇಳೆ ಒಟ್ಟು 2,555 ಮತದಾರರ ವಿವರಗಳು ಮರುಪರೀಶೀಲನೆಗೆ ಒಳಪಟ್ಟಿವೆ. ಇವರಲ್ಲಿ 1,468 ಮಂದಿ ಮೃತಪಟ್ಟವರು, 823 ಮಂದಿ ಶಾಶ್ವತವಾಗಿ ವಲಸೆ ಹೋದವರು, 211 ಮಂದಿ ಈಗಾಗಲೇ ಹೆಸರು ನೋಂದಾಯಿಸಿಕೊಂಡವರು, 29 ಮಂದಿ ಗೈರುಹಾಜರಾಗಿದ್ದವರು ಅಥವಾ ಪತ್ತೆಯಾಗದವರು ಹಾಗೂ 24 ಪ್ರಕರಣಗಳು ಇತರ ಕಾರಣಗಳಿಗೆ ಸಂಬಂಧಿಸಿದವುಗಳಾಗಿವೆ. ನಿಯಮಾನುಸಾರ ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 261 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಈ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾರ್ವಜನಿಕರು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್‌. ಮಂಜುನಾಥ್ ಮನವಿ ಮಾಡಿದ್ದಾರೆ. 


ಸುದ್ದಿ ಓದಿ