ಬೈಲಹೊಂಗಲ

ಕಡ್ಡಾಯವಾಗಿ ಮತದಾನ ಮಾಡಿ: ಸಂಪಗಾಂವಿ

ಕಡ್ಡಾಯವಾಗಿ ಮತದಾನ ಮಾಡಿ: ಸಂಪಗಾಂವಿ
ಬೈಲಹೊಂಗಲ ಪುರಸಭೆ ಆವರಣದಲ್ಲಿ ಮೊಂಬತ್ತಿ ಮೂಲಕ ದೀಪ ಬೆಳಗಿಸಿ ಮತದಾನ ಜಾಗೃತಿ ಮೂಡಿಸುವ ಜಾಥಾ ಜರುಗಿತು.

ಬೈಲಹೊಂಗಲ 4: ಮತದಾನ ನಮ್ಮ ಹಕ್ಕು, ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ತಾಪಂ ಇಓ, ತಾಲೂಕಾ ಮತದಾನ ಜಾಗೃತಿ ಸಮೀತಿ ಅಧ್ಯಕ್ಷ ಸುಭಾಶ ಸಂಪಗಾಂವಿ ಹೇಳಿದರು. 

ಅವರು ಪಟ್ಟಣದ ಪುರಸಭೆಯ ಕಾರ್ಯಾಲಯದ ಮುಂಭಾಗದಲ್ಲಿ ಮೊಂಬತ್ತಿ ಮೂಲಕ ದೀಪ ಬೆಳಗಿಸಿ ಮತದಾನ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಚಾಲನೆ ನೀಡಿ, ಮಾತನಾಡಿ, ಯಾವುದೇ ಆಮೀಷಕ್ಕೆ ಒಳಗಾಗದೆ ಏ.17 ರಂದು ನಡೆಯುವ ಲೋಕಸಭಾ ಉಪಚುನಾವಣೆಯಲ್ಲಿ ಎಲ್ಲರೂ ತಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ ಮಾತನಾಡಿ, ಮತದಾನ ಒಂದು ಅತ್ಯೂತ್ತಮವಾದ ಹಕ್ಕು, ಅದನ್ನು ಚಲಾಯಿಸುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕೆಂದರು. ಮತದಾನ ಜಾಗೃತಿ ಜಾಥಾ ಪುರಸಭೆಯಿಂದ ಹೋರಟು ಬಸ್ಸ ನಿಲ್ದಾಣದ ಕರೇಮ್ಮಾ ದೇವಸ್ಥಾನಕ್ಕೆ ತೆರಳಿ ಸಮಾಪ್ತಿಗೊಂಡಿತು. ಮತದಾನ ಜಾಗೃತಿ ಕುರಿತು ಘೋಷಣೆ ಕೂಗಲಾಯಿತು.

ಸಿಡಿಪಿಒ ರೇವತಿ ಹೋಸಮಠ, ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಉಣ್ಣಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸಂಜಯ ಸಿದ್ದನ್ನವರ, ಪಿಎಸ್‍ಐ ವಸಂತ ಬಂಡಂಗಾರ  ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಸುದ್ದಿ ಓದಿ